ನಿನ್ನನ್ನು ಮರೆಯುವ ಬಗೆ ಎಂತು…

ಹೌದು, ಈಗೀಗ ನಿನ್ನನ್ನು ಮರೆತೇ ಬಿಟ್ಟಿದ್ದೇನೆ. ಕಾರಣ, ಮನಸ್ಸು ಗಟ್ಟಿ ಮಾಡಿಕೊಂಡಿದ್ದೇನೆ. ನನ್ನ ಬದುಕಿನ ಅಮೂಲ್ಯ ಸಮಯವನ್ನು ನಿನಗಾಗಿ ವ್ಯಯಿಸಿದೆ, ನೀನಿಲ್ಲದೆ ನನಗೇನಿದೆ ಅಂತ ಪರಿತಪಿಸಿದೆ… ಫಲ ಸಿಕ್ಕಿತೇ? ಊಹೂಂ, ವ್ಯರ್ಥವಾಗಿ ನನ್ನೆಲ್ಲ ಬದುಕಿನ ಅಮೂಲ್ಯ ಕ್ಷಣಗಳನ್ನು ಕಳೆದೆನಲ್ಲಾ ಎಂಬ ಕೊರಗು ನನ್ನನ್ನು ಈಗಲೂ ಕಾಡುತ್ತಿದೆ. ನೀನಂತೂ ನನ್ನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ತೃಣಸಮಾನದಷ್ಟು ಗೋಜಿಗೂ ಹೋಗಲಿಲ್ಲ. ನಿನ್ನ ಒಡನಾಟ ಶುರುವಾದಾಗಿನಿಂದ ನನಗಂತೂ ನಿನ್ನದೇ ಧ್ಯಾನ. ಮನೆಯಲ್ಲಿ ಸ್ನಾನಕ್ಕೆ ಹೋದಾಗಲೂ, ತಿಂಡಿ ತಿನ್ನುತ್ತಿರುವಾಗಲೂ ನಿನ್ನದೇ ನೆನಪು. ನಿನ್ನೊಡನೆ…

Rate this:

ಟೆಕ್ ಟಾನಿಕ್: ಭಯೋತ್ಪಾದಕರಿಗೆ FB ತಡೆ

ಐಸಿಸ್ ಸೇರಿದಂತೆ ವಿಭಿನ್ನ ಭಯೋತ್ಪಾದಕ ಸಂಘಟನೆಗಳನ್ನು ಯುವಜನರನ್ನು ತಮ್ಮತ್ತ ಸೆಳೆದುಕೊಳ್ಳಲು ಸಾಮಾಜಿಕ ಜಾಲ ತಾಣಗಳನ್ನೇ ಪ್ರಧಾನವಾಗಿ ಬಳಸುತ್ತಿವೆ. ವಿಶೇಷವಾಗಿ ಫೇಸ್‌ಬುಕ್‌ನಲ್ಲಿ ಈ ಉಗ್ರ ಸಂಘಟನೆಗಳು ಪ್ರಚಾರ, ಪ್ರಸಾರ ಕಾರ್ಯದಲ್ಲಿ ತೊಡಗಿರುತ್ತವೆ. ಇದೀಗ ಉಗ್ರವಾದಕ್ಕೆ ಪ್ರಚೋದಿಸುವ ವಿಷಯಗಳನ್ನು ಪತ್ತೆ ಹಚ್ಚಲು ಫೇಸ್‌ಬುಕ್ ಕೃತಕ ಜಾಣ್ಮೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ತಂತ್ರಜ್ಞಾನವನ್ನು ಬಳಸಲು ನಿರ್ಧರಿಸಿದೆ. ಈ ತಂತ್ರಜ್ಞಾನದೊಂದಿಗೆ ಮಾನವನ ಹಸ್ತಕ್ಷೇಪವನ್ನೂ ಮಿಳಿತಗೊಳಿಸಿ, ಭಯೋತ್ಪಾದನೆಗೆ ಸಂಬಂಧಿಸಿದ ಯಾವುದೇ ವಿಷಯ ಪೋಸ್ಟ್ ಆಗುವ ಸಂದರ್ಭದಲ್ಲಿ ಬೇರೆ ಬಳಕೆದಾರರು ಅದನ್ನು ನೋಡುವ ಮುನ್ನವೇ ಪತ್ತೆ ಹಚ್ಚಿ,…

Rate this:

ಟೆಕ್ ಟಾನಿಕ್: FB ಪ್ರೊಫೈಲ್ ಚಿತ್ರಕ್ಕೆ ರಕ್ಷಣೆ

ಫೇಸ್‌ಬುಕ್ ಪ್ರೊಫೈಲ್ ಚಿತ್ರಗಳನ್ನು ಬೇರೆಯವರು ದುರ್ಬಳಕೆ ಮಾಡಿಕೊಳ್ಳದಂತೆ ತಡೆಯಲು ಹೊಸ ಟೂಲ್ ಒಂದನ್ನು ಫೇಸ್‌ಬುಕ್ ಪರಿಚಯಿಸಿದೆ. ಆಂಡ್ರಾಯ್ಡ್ ಸಾಧನಗಳಲ್ಲಿ ಫೇಸ್‌ಬುಕ್‌ನಲ್ಲಿ ಪಿಕ್ಚರ್ ಗಾರ್ಡ್ ಎಂಬ ಟೂಲ್ ಎನೇಬಲ್ ಮಾಡಿಕೊಂಡರೆ, ಚಿತ್ರದ ಸುತ್ತ ನೀಲಿ ಬಣ್ಣದ ರೇಖೆಯೊಂದಿಗೆ ಶೀಲ್ಡ್ ಐಕಾನ್ ಕಾಣಿಸುತ್ತದೆ. ನಿಮ್ಮ ಪ್ರೊಫೈಲ್ ಫೋಟೋ ಮೇಲೆ ಕ್ಲಿಕ್ ಮಾಡಿ, ಪಾಪ್ ಅಪ್ ಆಗುವ ವಿಂಡೋದಲ್ಲಿ, ಕೆಳ ಭಾಗದಲ್ಲಿ Turn on profile picture guard ಅಂತ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದರಾಯಿತು. ಅಂತೆಯೇ, ಪ್ರೊಫೈಲ್ ಚಿತ್ರಕ್ಕೆ ರಕ್ಷಣೆ…

Rate this:

ಟೆಕ್ ಟಾನಿಕ್: ಮೊಬೈಲಿನಲ್ಲಿ FB ವೀಡಿಯೋ

ಸ್ಮಾರ್ಟ್ ಫೋನ್‌ನಲ್ಲಿ ಆ್ಯಪ್ ಮೂಲಕ ಫೇಸ್‌ಬುಕ್ ಜಾಲಾಡುವವರು ಇತ್ತೀಚೆಗೊಂದು ವಿದ್ಯಮಾನ ಗಮನಿಸಿದ್ದಿರಬಹುದು. ಕೆಳಗೆ ಸ್ಕ್ರಾಲ್ ಮಾಡುತ್ತಿದ್ದಂತೆ ವೀಡಿಯೋಗಳೇ ತೀರಾ ಅತಿ ಅನ್ನಿಸುವಷ್ಟು ಗೋಚರಿಸುತ್ತವೆ ಮತ್ತು ಅವುಗಳು ಪ್ಲೇ ಆಗುತ್ತಾ ನಿಮ್ಮ ಇಂಟರ್ನೆಟ್ ಪ್ಯಾಕನ್ನೂ ಕಬಳಿಸಿಬಿಡುತ್ತವೆ. ಈ ವೀಡಿಯೋಗಳ ಹಾವಳಿ ತಪ್ಪಿಸಲು ಮತ್ತು ಡೇಟಾ ಪ್ಯಾಕ್ ಉಳಿಸಲು ಹೀಗೆ ಮಾಡಿ. FB ಆ್ಯಪ್ ತೆರೆದು ಸೆಟ್ಟಿಂಗ್ಸ್‌ಗೆ ಹೋಗಿ, ‘ಅಕೌಂಟ್ ಸೆಟ್ಟಿಂಗ್ಸ್’ ಅಂತ ಕ್ಲಿಕ್ ಮಾಡಿ. ‘ವೀಡಿಯೋಸ್ ಆ್ಯಂಡ್ ಫೋಟೋಸ್’ ಕ್ಲಿಕ್ ಮಾಡಿ, ನಾಲ್ಕು ಆಯ್ಕೆಗಳು ಗೋಚರಿಸುತ್ತವೆ. ಅದರಲ್ಲಿ Never…

Rate this:

ಫೇಸ್‌ಬುಕ್‌ನಲ್ಲಿ ವೀಡಿಯೋ ಕ್ಲಿಕ್ ಮಾಡುವ ಮುನ್ನ ಎಚ್ಚರ!

ಫೇಸ್‌ಬುಕ್‌ನಲ್ಲಿ ವಹಿಸಲೇಬೇಕಾದ ಎಚ್ಚರಿಕೆ. ಯಾವತ್ತೂ ಕೂಡ ಅಶ್ಲೀಲ ವೀಡಿಯೋಗಳ ಲಿಂಕ್‌ಗಳನ್ನು ಕ್ಲಿಕ್ ಮಾಡಲೇಬೇಡಿ. ಇದನ್ನು ನಮ್ಮ ಸಾಮಾಜಿಕ ಜಾಲ ತಾಣದ ನಿಯಮಗಳಲ್ಲಿ ಒಂದನ್ನಾಗಿಸಿಕೊಳ್ಳುವುದಷ್ಟೇ ಅಲ್ಲ, ಇದರ ಹಿಂದೆ ಮತ್ತೊಂದು ಬಲುದೊಡ್ಡ ಕಾರಣವೂ ಇದೆ. ಈಗಾಗಲೇ ನಿಮ್ಮ ಸ್ನೇಹಿತರ ಬಳಗದಲ್ಲಿ ಅಶ್ಲೀಲ ಚಿತ್ರಗಳ ವೀಡಿಯೋಗಳಿರುವುದು ಹಾಗೂ ಅದಕ್ಕೆ ನಿಮ್ಮನ್ನು ಟ್ಯಾಗ್ ಮಾಡಿರುವುದರಿಂದ ಸಾಕಷ್ಟು ಮಂದಿ ಕಸಿವಿಸಿ ಅನುಭವಿಸಿರಬಹುದು. ನಿಮ್ಮ ಸ್ನೇಹಿತರು ಅಂಥವರಿರಲಾರರು ಎಂಬ ಬಗ್ಗೆ ನಿಮಗೆ ಸ್ಪಷ್ಟ ಅರಿವಿದ್ದರೂ, ಆತ/ಆಕೆ ಹಾಗೆ ಮಾಡಿದರಲ್ಲಾ ಎಂದು ಅಚ್ಚರಿ ಪಡುತ್ತೀರಿ. ಇದರ…

Rate this:

ಆಕರ್ಷಣೆ ಕಳೆದುಕೊಳ್ಳುತ್ತಿದೆ ಫೇಸ್‌ಬುಕ್…

ನಗರದ ಆ ಮೂಲೆಯಲ್ಲಿ…. ರಸ್ತೆ ಬದಿ ನಡೆದಾಡುತ್ತಿರುವಾಗ, ಬಸ್ ನಿಲ್ದಾಣದಲ್ಲಿ ಕಾಯುತ್ತಿರುವಾಗ, ಟ್ರಾಫಿಕ್ ಸಿಗ್ನಲ್‌ನಲ್ಲಿ ಬೈಕು ನಿಲ್ಲಿಸಲೇಬೇಕಾದಾಗ… ಕುದಿ ಹೃದಯದ ಹದಿ ಹರೆಯದ ಮಂದಿಯ ಎರಡೂ ಕಿವಿಗಳಲ್ಲಿ ಉದ್ದನೆಯ ದಾರ ನೇತಾಡುತ್ತಿರುತ್ತದೆ; ಜತೆಗೇ ತಲೆಯೂ ಸಣ್ಣಗೆ ಆಡುತ್ತಿದ್ದರೆ, ಕೈಯಲ್ಲಿರುವ ಮೊಬೈಲ್ ಸ್ಕ್ರೀನ್‌ನ ಮೇಲೆ ಎರಡೂ ಕರಗಳ ಹೆಬ್ಬೆರಳುಗಳು ಅತ್ತಿಂದಿತ್ತ ಸರಿದಾಡುತ್ತಿರುತ್ತವೆ; ಮಂದಹಾಸ, ನಗು, ಕೋಪ, ಬೇಸರ, ತುಂಟತನ… ಇತ್ಯಾದಿ ಕ್ಷಣಕ್ಷಣಕ್ಕೂ ಗೋಚರಿಸುವ ನವರಸ ಮುಖಭಾವಗಳು… ಅವರ ಕೈಯಲ್ಲಿರುವುದು ಹಳೆಯ ಫೀಚರ್ ಫೋನ್ ಆಗಿದ್ದರಂತೂ ಅದರ ಕೀಪ್ಯಾಡ್‌ನ ಸಂಖ್ಯೆ/ಅಕ್ಷರಗಳೇ…

Rate this:

ಫೇಸ್‌ಬುಕ್‌ನಲ್ಲಿ ಆಡಲು ಕರೆಯುತ್ತಿದ್ದಾರೆಯೇ?

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ, ಜೂನ್ 30, 2014 ಫೇಸ್‌ಬುಕ್ ಸಾಮಾಜಿಕ ಜಾಲತಾಣದಲ್ಲಿ ಈಗೀಗ ಸ್ನೇಹಿತರ ಸಂಖ್ಯೆ ಹೆಚ್ಚಾಗಿ, ಗೇಮ್ಸ್ ಆಡಲು ಆಹ್ವಾನ ನೀಡುತ್ತಿರುವವರ ಕಾಟದಿಂದಾಗಿಯೋ, ಸಾಕಪ್ಪಾ ಸಾಕು ಈ ಫೇಸ್‌ಬುಕ್ ಅಂತ ಕೆಲವರಿಗೆ ಅನ್ನಿಸಿರಬಹುದು. ಅದೇ ರೀತಿ, ಅನಗತ್ಯ ಸಂದೇಶಗಳು ಎಫ್‌ಬಿ ಮೆಸೆಂಜರ್ ಮೂಲಕ ಕಿರಿಕಿರಿಯುಂಟು ಮಾಡಬಹುದು. ಇದರ ಕಾಟದಿಂದ ಪಾರಾಗುವುದು ಹೇಗೆಂಬ ಬಗ್ಗೆ ಯೋಚಿಸುವವರು ಮುಂದೆ ಓದಿ. ಯಾವುದೇ ಆಟದ ರಿಕ್ವೆಸ್ಟ್ ಬಂದ್ರೆ (ಉದಾಹರಣೆಗೆ, ಇತ್ತೀಚೆಗೆ ಹೆಚ್ಚು ಕಾಟ ಕೊಡುತ್ತಾ ಇರೋದು ಕ್ಯಾಂಡಿ ಕ್ರಶ್…

Rate this:

ಫೇಸ್‌ಬುಕ್‌ನಲ್ಲಿ ಟ್ಯಾಗ್ ಮಾಡಿದರೆ ಏನು ಮಾಡುತ್ತೀರಿ?

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. (ಜನವರಿ 20, 2014)ಸಾಮಾಜಿಕ ಜಾಲ ತಾಣಗಳಲ್ಲಿ ಯಾರ್ಯಾರೋ ಫ್ರೆಂಡ್ ಆಗ್ತಾರೆ, ದೂರದಲ್ಲೆಲ್ಲೋ ಇದ್ದವರು ಆತ್ಮೀಯರಾಗಿಬಿಡುತ್ತಾರೆ, ನಿಮ್ಮ ಪೋಸ್ಟ್‌ಗಳಿಗೆ ಕಾಮೆಂಟ್ ಮಾಡುತ್ತಾರೆ, ಒಂದೊಳ್ಳೆಯ ಚರ್ಚೆ ನಡೆಯುತ್ತದೆ. ಸಮಾಜದ ಆಗುಹೋಗುಗಳ ಬಗ್ಗೆ, ಒಳಿತು ಕೆಡುಕುಗಳ ಬಗ್ಗೆ ಪರ-ವಿರೋಧ ಚರ್ಚೆಯಾಗುತ್ತದೆ ಮತ್ತು ಅಲ್ಲೊಂದು ಅವಾಸ್ತವಿಕ ಸಾಮಾಜಿಕ ಜಗತ್ತು ಸೃಷ್ಟಿಯಾಗಿರುತ್ತದೆ. ಇಷ್ಟೆಲ್ಲಾ ಆಗುವ ಹೊತ್ತಿಗೆ, ಯಾವಾಗ ಫೋಟೋಗಳನ್ನೂ ಸಾಮಾಜಿಕ ತಾಣದಲ್ಲಿ ಹಂಚಿಕೊಳ್ಳುವ ಆಯ್ಕೆ ಬಂದಿತೋ, ಆಗಿನಿಂದ ಫೇಸ್‌ಬುಕ್ ಬಳಕೆದಾರರದು ಒಂದೇ ವೇದನೆ, ರೋದನೆ… ಫೋಟೋಗಳಿಗೆ ಟ್ಯಾಗ್ ಮಾಡಿದರೆ ಜೋಕೆ…

Rate this:

ನಿಮ್ಮ ಫೇಸ್‌ಬುಕ್ ಪೋಸ್ಟ್‌ಗಳನ್ನು ಈಗ ಎಡಿಟ್ ಕೂಡ ಮಾಡಬಹುದು

ವಿಜಯ ಕರ್ನಾಟಕ ಅಂಕಣ, ಮಾಹಿತಿ @ ತಂತ್ರಜ್ಞಾನ, ಅಕ್ಟೋಬರ್ 07, 2013 ದೇಶದಲ್ಲಿ ಅಂತರ್ಜಾಲ ಕ್ರಾಂತಿಯಾಗಿ ಬ್ಲಾಗ್, ಓರ್ಕುಟ್ ಮುಂತಾದ ವಿಶ್ವಾದ್ಯಂತವಿರುವ ಜನರನ್ನು ಬೆಸೆಯುವ ತಾಣಗಳ ಬಳಿಕ ಇತ್ತೀಚೆಗೆ ನಮ್ಮ ನಿಮ್ಮೆಲ್ಲರನ್ನು ಸಂಪೂರ್ಣವಾಗಿ ‘ಬ್ಯುಸಿ’ಯಾಗಿಸುತ್ತಿರುವುದು ಫೇಸ್‌ಬುಕ್ ಎಂಬ ಸಾಮಾಜಿಕ ಜಾಲ ತಾಣ. ವಯಸ್ಕರು, ಹರೆಯದವರು, ಎಳೆಯರೆನ್ನದೆ ಎಲ್ಲರನ್ನೂ ಸೆಳೆದುಕೊಂಡುಬಿಟ್ಟಿದೆ ಇದು. ಈ ಜಾಲ ತಾಣದಲ್ಲಿ ವಿಶ್ವಾದ್ಯಂತ ಸುಮಾರು 128 ಕೋಟಿ (ಅಂದರೆ ಭಾರತದ ಒಟ್ಟಾರೆ ಜನಸಂಖ್ಯೆಗೂ ಹೆಚ್ಚು) ಮಂದಿ ಸಕ್ರಿಯ ಸದಸ್ಯರಿದ್ದಾರೆ. ಆದರೆ ಈ ತಾಣದಲ್ಲಿ ಮೊನ್ನೆ…

Rate this:

ಫೇಸ್‌ಬುಕ್ ಮೆಸೆಂಜರ್ ಮೂಲಕ ಸುಲಭ, ಕ್ಷಿಪ್ರ ವಾಯ್ಸ್ ಮೆಸೇಜ್

ವಿಜಯ ಕರ್ನಾಟಕ ಅಂಕಣ: ಮಾಹಿತಿ @ ತಂತ್ರಜ್ಞಾನ – 33 – ಏಪ್ರಿಲ್ 22, 2013 ಇಂಟರ್ನೆಟ್ ಎಂಬ ಅದ್ಭುತವು ಕೈಗೆಟುಕತೊಡಗಿರುವಂತೆಯೇ ಸಾಮಾಜಿಕ ಜಾಲತಾಣ ‘ಫೇಸ್‌ಬುಕ್’ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸತೊಡಗಿದೆ. ಹೀಗಾಗಿ ಹೆಚ್ಚಿನವರೀಗ ಸದಾಕಾಲ ‘ಆನ್‌ಲೈನ್’. ಫೇಸ್‌ಬುಕ್ ಬಳಕೆಯಿಂದಾಗಿ ಒಂದಿಷ್ಟು ಮಾಹಿತಿ ತಿಳಿದುಕೊಳ್ಳುವುದು, ಸ್ನೇಹಿತ ವರ್ಗದ ವೃದ್ಧಿಯ ಹೊರತಾಗಿ ಒಂದು ಲಾಭವೂ ಇದೆ. ಇದು ಫೇಸ್‌ಬುಕ್ ಬಳಕೆದಾರರಿಗೆ ಸಂತಸದ ಸುದ್ದಿ. ಅದೆಂದರೆ, ಫೇಸ್‌ಬುಕ್ ಮೆಸೆಂಜರ್ (Facebook Messenger) ಎಂಬ ಸಂದೇಶವಾಹಕ ಅಪ್ಲಿಕೇಶನ್ ಒಂದನ್ನು ನಿಮ್ಮ ಕಂಪ್ಯೂಟರಿನಲ್ಲಿ ಅಥವಾ…

Rate this: