ಫೇಸ್‌ಬುಕ್ ಬಳಕೆ: ವೈಯಕ್ತಿಕ ಮಾಹಿತಿಗೆ, ಪೋಸ್ಟ್‌ಗೆ ನಾವೇ ಜವಾಬ್ದಾರರು!

ಪ್ರೈವೆಸಿ ಬಗ್ಗೆ ನಾವೇನೋ ಸಾಕಷ್ಟು ಆತಂಕ ವ್ಯಕ್ತಪಡಿಸುತ್ತಿದ್ದೇವೆ, ವಿಶೇಷವಾಗಿ ಸರಕಾರಕ್ಕೆ, ಇನ್‌ಕಂ ಟ್ಯಾಕ್ಸ್ ಇಲಾಖೆಗೆ ನೀಡಿದ ಆಧಾರ್, ಪ್ಯಾನ್ ಕಾರ್ಡ್ ಮಾಹಿತಿ ಸೋರಿಕೆಯಾಗುತ್ತದೆ ಅಂತೆಲ್ಲ ಹೆದರುತ್ತೇವೆ. ಭ್ರಷ್ಟಾಚಾರಿಗಳಿರುವಲ್ಲೆಲ್ಲಾ ಇಂತಹಾ ಆತಂಕ ಸಹಜವೇ. ಆದರೆ, ನಾವು ಕಷ್ಟ ಪಟ್ಟಾದರೂ ಇಷ್ಟಪಟ್ಟು ಫೇಸ್‌ಬುಕ್, ಜಿಮೇಲ್, ಟ್ವಿಟರ್, ಇನ್‌ಸ್ಟಾಗ್ರಾಂ, ಟೆಲಿಗ್ರಾಂ, ವಾಟ್ಸಾಪ್ ಮುಂತಾದ ಸಾಮಾಜಿಕ ಮಾಧ್ಯಮಗಳನ್ನು ಕಲಿತುಕೊಂಡಿದ್ದೇವೆ ಮತ್ತು ಅದಕ್ಕೆ ಬೇಕಾಬಿಟ್ಟಿಯಾಗಿ ನಮ್ಮ ಸಂಪೂರ್ಣ ವಿವರಗಳನ್ನು, ಪ್ರವರಗಳನ್ನು ಧಾರೆ ಎರೆದಿದ್ದೇವೆ. ಉದಾಹರಣೆಗೆ ಫೇಸ್‌ಬುಕ್ಕನ್ನೇ ತೆಗೆದುಕೊಳ್ಳಿ, ಅದರಲ್ಲಿ ನಮ್ಮ ಬಗ್ಗೆ ಯಾವೆಲ್ಲ ವಿವರಗಳಿಲ್ಲ?…

Rate this:

ಫೇಸ್‌ಬುಕ್, ವಾಟ್ಸಾಪ್ ‘ಶಾಕಿಂಗ್’: ಬಂದದ್ದೆಲ್ಲವೂ ನಿಜವಲ್ಲ!

ಫೇಸ್‌ಬುಕ್ ಬಳಸುತ್ತಿರುವವರಿಗೆ ಗೊತ್ತಿದೆ, ‘ಶಾಕಿಂಗ್ ನ್ಯೂಸ್, ಬೆಚ್ಚಿ ಬೀಳಿಸೋ ಸುದ್ದಿ ಇಲ್ಲಿದೆ, ನೋಡಿ, ಕ್ಲಿಕ್ ಮಾಡಿ’ ಎಂಬ ಒಕ್ಕಣೆಯುಳ್ಳ ಅದೆಷ್ಟೋ ಲಿಂಕ್‌ಗಳನ್ನು ನೋಡಿರುತ್ತೀರಿ. ಹತ್ತೇ ದಿನಗಳಲ್ಲಿ ತೂಕ ಇಳಿಸಿಕೊಳ್ಳಿ, ಮೂರೇ ದಿನದಲ್ಲಿ 3 ಕೆಜಿ ಕಳೆದುಕೊಳ್ಳಿ, ಒಂದೇ ವಾರದಲ್ಲಿ ಮಧುಮೇಹದಿಂದ ಮುಕ್ತಿ ಪಡೆಯಿರಿ ಎನ್ನುತ್ತಾ ‘ಹೇಗೆ ಎಂದು ತಿಳಿಯಲು ‘ಶೇರ್ ಮಾಡಿ ಮತ್ತು ಕ್ಲಿಕ್ ಮಾಡಿ’ ಅಂತ ಒಕ್ಕಣೆಯೂ ಇರುತ್ತದೆ. ಇಂಥವುಗಳ ಹಾವಳಿ ಇಂದು ಹೆಚ್ಚಾಗಿಬಿಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬರುವ ಮಾಹಿತಿ ಪ್ರವಾಹದಲ್ಲಿ ಎಲ್ಲವೂ ನಿಜವಾಗಿರುವುದಿಲ್ಲ ಎಂಬುದು…

Rate this:

ಟೆಕ್‌ಟಾನಿಕ್: ಫೇಸ್‌ಬುಕ್ ಆಲ್ಬಂ ಫೋಟೋಗಳ ಡೌನ್‌ಲೋಡ್

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಫೋಟೋಗಳನ್ನೆಲ್ಲ ನೀವು ಫೇಸ್‌ಬುಕ್‌ಗೆ ಈಗಾಗಲೇ ಅಪ್‌ಲೋಡ್ ಮಾಡಿದ್ದೀರಿ. ಅದರಲ್ಲಿ ಮದುವೆಯದ್ದೋ, ಬರ್ತಡೇ ಪಾರ್ಟಿಯದ್ದೋ ಅಥವಾ ಬೇರಾವುದಾದರೂ ಕಾರ್ಯಕ್ರಮದ್ದೋ ಫೋಟೋಗಳಿರಬಹುದು. ಆದರೆ, ಆವತ್ತು ಫೋಟೋ ತೆಗೆದಿದ್ದ ಫೋನ್ ನಿಮ್ಮ ಬಳಿ ಈಗಿಲ್ಲ. ಯಾವುದೋ ಕಾರಣಕ್ಕೆ ಅದನ್ನು ‘ಫ್ಯಾಕ್ಟರಿ ರೀಸೆಟ್’ ಮಾಡಬೇಕಾಗಿಬಂದಿದೆ ಅಥವಾ ಅದನ್ನು ಬದಲಾಯಿಸಿರುತ್ತೀರಿ. ಹೀಗಾದಾಗ ಆ ಫೋಟೋಗಳೂ ಹೋಗಿಬಿಟ್ಟಿವೆ. ಅವುಗಳು ಮತ್ತೆ ನಿಮಗೆ ಬೇಕೆಂದಾದರೆ ಈ ಚಿತ್ರಗಳನ್ನೆಲ್ಲ ಡೌನ್‌ಲೋಡ್ ಮಾಡಿಕೊಳ್ಳಬಹುದು ಅಂತ ಗೊತ್ತೇ? ಒಂದು ನಿರ್ದಿಷ್ಟ ಕಾರ್ಯಕ್ರಮದ ಹಲವಾರು ಫೋಟೋಗಳಿದ್ದರೆ ಅವುಗಳನ್ನು ಆಲ್ಬಂ ರೂಪದಲ್ಲಿ…

Rate this:

ಟೆಕ್ ಟಾನಿಕ್: ಫೇಸ್‌ಬುಕ್‌ನಲ್ಲಿ ರಕ್ತದಾನಿಗಳು

ಫೇಸ್‌ಬುಕ್ ಮೂಲಕವೇ ರಕ್ತದಾನಿಗಳಾಗುವ ಅವಕಾಶ ಇದೆ ಎಂಬ ಅಂಶ ಹೆಚ್ಚಿನವರಿಗೆ ತಿಳಿದಿದೆ. ನೀವು ಲಾಗಿನ್ ಆದಾಗಲೇ ಕೆಲವೊಮ್ಮೆ ನೀವೂ ರಕ್ತದಾನ ಮಾಡಿ ಎಂಬ ಸಂದೇಶದೊಂದಿಗೆ ಅದರ ಲಿಂಕ್ ಸಿಗುತ್ತದೆ. ಅಲ್ಲಿ ಕ್ಲಿಕ್ ಮಾಡಿದರೆ ನಿಮ್ಮ ಫೋನ್ ನಂಬರ್ ಹಾಗೂ ರಕ್ತದ ಗುಂಪು ದಾಖಲಿಸಿದರೆ, ಆ ಪ್ರದೇಶದಲ್ಲಿ ಯಾರಿಗಾದರೂ ರಕ್ತದ ಅವಶ್ಯಕತೆಯಿದ್ದರೆ ಫೋನ್ ಮೂಲಕ ನಿಮ್ಮನ್ನು ಸಂಪರ್ಕಿಸಲಾಗುತ್ತದೆ. ಈ ಫೇಸ್‌ಬುಕ್ ರಕ್ತದಾನಿಗಳ ಗುಂಪಿನಲ್ಲಿ ಈಗಾಗಲೇ 60 ಲಕ್ಷ ಮಂದಿ ಭಾರತೀಯರು ನೋಂದಾಯಿಸಿಕೊಂಡಿದ್ದಾರೆ ಎಂದು ಇತ್ತೀಚೆಗೆ ಫೇಸ್‌ಬುಕ್ ಪ್ರಕಟಿಸಿದೆ. ಈ…

Rate this:

ಟೆಕ್ ಟಾನಿಕ್: FB ಪ್ರೊಫೈಲ್ ಚಿತ್ರ ನಕಲಿ ಮಾಡಿದ್ರೆ ನೋಟಿಫಿಕೇಶನ್

ನಿಮ್ಮದೇ ಚಿತ್ರವನ್ನು ಬೇರೆಯವರು ಪ್ರೊಫೈಲ್ ಚಿತ್ರವಾಗಿಸಿಕೊಂಡು, ನಿಮ್ಮ ಹೆಸರಿನಲ್ಲಿ ವ್ಯವಹರಿಸುತ್ತಿದ್ದಾರೆಯೇ? ಈ ಕುರಿತ ಹಲವಾರು ದೂರುಗಳನ್ನು ಪರಿಗಣಿಸಿರುವ ಫೇಸ್‌ಬುಕ್, ಇದೀಗ ನಿಮ್ಮ ಚಿತ್ರವನ್ನು ಪ್ರೊಫೈಲ್ ಆಗಿ ಬಳಸಿದರೆ ನಿಮಗೆ ನೋಟಿಫಿಕೇಶನ್ ಮೂಲಕ ತಿಳಿಸುವ ವ್ಯವಸ್ಥೆಯೊಂದನ್ನು ಜಾರಿಗೊಳಿಸುತ್ತಿದೆ. ಅದೇ ರೀತಿ, ಯಾರಾದರೂ ನಿಮ್ಮ ಫೋಟೋ ಅಪ್‌ಲೋಡ್ ಮಾಡಿದರೆ, ಅವರು ನಿಮಗೆ ಟ್ಯಾಗ್ ಮಾಡದಿದ್ದರೂ ಕೂಡ, ನಿಮಗೆ ನೋಟಿಫಿಕೇಶನ್ ಮೂಲಕ ಎಚ್ಚರಿಸುವ ವ್ಯವಸ್ಥೆ ಬರಲಿದೆ. ಮುಖ ಗುರುತಿಸುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ವ್ಯಕ್ತಿಗಳ ಪ್ರೊಫೈಲ್ ಚಿತ್ರವನ್ನು ವೀಕ್ಷಿಸಿ ನೆನಪಿಟ್ಟುಕೊಳ್ಳುವುದರಿಂದ ಇದು…

Rate this:

ಟೆಕ್ ಟಾನಿಕ್: ಫೇಸ್‌ಬುಕ್‌ನಲ್ಲಿ ರಕ್ತದಾನಿಗಳು

ರಾಷ್ಟ್ರೀಯ ರಕ್ತದಾನ ದಿನವಾದ ಅಕ್ಟೋಬರ್ 1ರಂದು ಫೇಸ್‌ಬುಕ್ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ. ರಕ್ತದಾನ ಮಾಡಲಿಚ್ಛಿಸುವವರು ಅಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಪ್ರೊಫೈಲ್ ಎಡಿಟ್ ಮಾಡಿಕೊಂಡು, ತಾನು ರಕ್ತದಾನಿ ಅಂತ ಬಹಿರಂಗವಾಗಿ ಹೇಳಿಕೊಳ್ಳಬಹುದು ಇಲ್ಲವೇ ಆ ಮಾಹಿತಿಯನ್ನು ಖಾಸಗಿಯಾಗಿಟ್ಟುಕೊಳ್ಳಬಹುದು. ಆರಂಭದಲ್ಲಿ ಇದು ಆಂಡ್ರಾಯ್ಡ್ ಫೋನ್‌ಗಳ ಫೇಸ್‌ಬುಕ್ ಆ್ಯಪ್‌ನಲ್ಲಿ ಮಾತ್ರ ಲಭ್ಯವಿರುತ್ತದೆ. ರಕ್ತದಾನಿಗಳು ಸಿದ್ಧವಾದ ಬಳಿಕ, ರಕ್ತದ ಅಗತ್ಯವಿರುವವರಿಗೆ ಒಂದೆರಡು ವಾರಗಳಲ್ಲಿ ಮತ್ತೊಂದು ರೀತಿಯ ಆಯ್ಕೆ ಲಭ್ಯವಾಗಲಿದೆ. ಅಂದರೆ, ರಕ್ತ ಅವಶ್ಯಕತೆಯಿದೆ ಎಂದು ವಿಶೇಷ ರೀತಿಯಲ್ಲಿ ಪೋಸ್ಟ್ ಮಾಡುವ ವಿಧಾನ. ಈ…

Rate this:

WhatsApp, FB, ಇಮೇಲ್‌ನಲ್ಲಿ Links ಕ್ಲಿಕ್ ಮಾಡುವ ಇಲ್ಲಿ ಓದಿ

ವೈರಸ್, ರ‍್ಯಾನ್ಸಮ್‌ವೇರ್ ಮುಂತಾದ ಮಾಲ್‌ವೇರ್ ಅಂದರೆ ದುರುದ್ದೇಶಪೂರಿತ ಸಾಫ್ಟ್‌ವೇರ್‌ಗಳ (ಕು-ತಂತ್ರಾಂಶಗಳು) ಬಗ್ಗೆ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಸುಶಿಕ್ಷಿತರೇ ಇದರ ಬಲೆಗೆ ಬೀಳುತ್ತಿರುವಾಗ ಕೇವಲ ಆಗೊಮ್ಮೆ ಈಗೊಮ್ಮೆ ಸಂಪರ್ಕಕ್ಕೆ, ಸಂವಹನಕ್ಕೆ ಇಮೇಲ್ ಅಥವಾ ವಾಟ್ಸಾಪ್, ಫೇಸ್‌ಬುಕ್ ಸಂದೇಶಗಳನ್ನು ಬಳಸುವವರ ಗತಿಯೇನು? ಈ ರೀತಿಯ ಮಾಲ್‌ವೇರ್‌ಗಳು (ಜನಸಾಮಾನ್ಯರ ಭಾಷೆಯಲ್ಲಿ ವೈರಸ್ ತಂತ್ರಾಂಶಗಳು) ಯಾವ ರೂಪದಲ್ಲಿ ಬರಬಹುದು ಎಂಬುದರ ಬಗ್ಗೆ ನಾವು ಎಚ್ಚರಿಕೆ ವಹಿಸಿದರೆ ಹೆಚ್ಚಿನ ಅಪಾಯ ತಡೆಗಟ್ಟಬಹುದು. ಇದಕ್ಕಾಗಿ ಕಂಪ್ಯೂಟರುಗಳು, ಸ್ಮಾರ್ಟ್‌ಫೋನ್ ಮುಂತಾದ ಎಲೆಕ್ಟ್ರಾನಿಕ್ ಸಾಧನಗಳಿಗೆ ಆ್ಯಂಟಿ-ವೈರಸ್ ತಂತ್ರಾಂಶಗಳನ್ನು…

Rate this: