ಫೇಸ್‌ಬುಕ್: ಖಾಸಗಿ ಮಾಹಿತಿ ರಕ್ಷಣೆ ಸುಲಭ, ಸರಳ
ಡಿಜಿಟಲ್ ಕ್ರಾಂತಿಯಾಗಿದೆ. ಆದರೂ ಅದರ ಬೆನ್ನಿಗೇ ಬಂದಿರುವ ಆತಂಕಗಳ ಬಗ್ಗೆ ಅರಿವು ಕಡಿಮೆ. ಫೇಸ್‌ಬುಕ್‌ನಲ್ಲಿ ಹಲವು ಹಂತಗಳಲ್ಲಿ ನಮ್ಮ ಫೋನ್ ನಂಬರ್, ಜನ್ಮದಿನಾಂಕ, ಊರು, ಇಮೇಲ್ ಐಡಿ..ಯಂತಹ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ. ಇವೆಲ್ಲ ನಮ್ಮ ಬ್ಯಾಂಕ್ ಖಾತೆ ಅಥವಾ ಫೇಸ್‌ಬುಕ್ ಖಾತೆ ಹ್ಯಾಕ್ ಆಗುವುದಕ್ಕೂ ಕಾರಣವಾಗುತ್ತದೆ. ಈ ಕಾರಣಕ್ಕಾಗಿಯೇ ಪ್ರೈವೆಸಿ ಬಗ್ಗೆ ಸುಶಿಕ್ಷಿತರು ಆತಂಕ ವ್ಯಕ್ತಪಡಿಸುವುದು. ಫೇಸ್‌ಬುಕ್‌ನಲ್ಲಿ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿರಿಸಲು ಸರಳ ಉಪಾಯವಿದೆ. ಅದಕ್ಕೂ ಮೊದಲು, ’ಕೆಲವು ಮಾಹಿತಿಯನ್ನು ನಾವು ಇಷ್ಟವಿಲ್ಲದಿದ್ದರೂ ಬಚ್ಚಿಡಬೇಕಾಗುತ್ತದೆ’ ಎಂಬ ಸತ್ಯವನ್ನು ಅರಗಿಸಿಕೊಳ್ಳಬೇಕು.…