ಸಹಾಯದ ಕೋರಿಕೆಯಿರುವ ಸ್ನೇಹಿತರ ಇ-ಮೇಲ್ ಬಗ್ಗೆ ಎಚ್ಚರ!
ಫೇಸ್‌ಬುಕ್‌ನಲ್ಲಿನ ನಮ್ಮ ಖಾಸಗಿ ಮಾಹಿತಿಯು ಕೇಂಬ್ರಿಜ್ ಅನಲಿಟಿಕಾ ಸಂಸ್ಥೆಯ ಪಾಲಾಗಿರುವುದು, ಆ ಬಳಿಕ ಜಿಮೇಲ್ ಮಾಹಿತಿಯೂ ಆ್ಯಪ್ ಡೆವಲಪರ್‌ಗಳಿಗೆ ಸೋರಿಕೆಯಾಗಿದೆ ಅಂತ ಸುದ್ದಿಯಾಗಿರುವುದು – ಅಂತರ್ಜಾಲದಲ್ಲಿ ನಮ್ಮ ಪ್ರೈವೆಸಿ ಅಥವಾ ಖಾಸಗಿತನ/ಗೌಪ್ಯತೆ ಕಾಯ್ದುಕೊಳ್ಳಬೇಕಾದುದರ ಅಗತ್ಯದ ಬಗ್ಗೆ ಮತ್ತೆ ಮತ್ತೆ ನಮ್ಮನ್ನು ಎಚ್ಚರಿಸಿದೆ. ನಮ್ಮ ಇಮೇಲ್ ಖಾತೆಯ ಬಗ್ಗೆ ಎಚ್ಚರಿಕೆ ವಹಿಸಲೇಬೇಕು, ಯಾಕೆಂದರೆ ಹೆಚ್ಚಿನವರು ಆಂಡ್ರಾಯ್ಡ್ ಮೊಬೈಲ್ ಫೋನ್ ಬಳಸುತ್ತಿರುವುದರಿಂದಾಗಿ, ಅದಕ್ಕೆ ಸಂಬಂಧಿಸಿದಂತೆ, ಗೂಗಲ್ ಒದಗಿಸಿರುವ ಜಿಮೇಲ್ ಎಂಬ ಇಮೇಲ್ ಸಂವಹನ ಖಾತೆ ಬೇಕೇಬೇಕು. ಆದರೆ, ನಿಮ್ಮ ಇಮೇಲ್…