ಸುಲಭ, ಅಗ್ಗ: ನಮ್ಮದೇ ವೆಬ್ ಸೈಟ್ ಮಾಡುವುದು ಹೇಗೆ?

ಕರ್ನಾಟಕ ಪ್ರವಾಸೋದ್ಯಮ ವೆಬ್‌ಸೈಟನ್ನು ಹೊಸದಾಗಿ ರೂಪಿಸಲು 10 ಕೋಟಿ ರೂ. ಯೋಜನೆ ರೂಪಿಸಲಾಗಿದೆ ಎಂಬ ಸರಕಾರಿ ಅಧಿಕಾರಿಯೊಬ್ಬರ ಮಾತು ಕಳೆದ ವಾರವಿಡೀ ಅಂತರ್ಜಾಲದಲ್ಲಿ ಭಾರಿ ಚರ್ಚೆಗೆ ಗ್ರಾಸವಾಯಿತು. ‘ಒಂದು ವೆಬ್ ಸೈಟ್ ರೂಪಿಸಲು ಕೋಟ್ಯಂತರ ರೂಪಾಯಿ ಯಾಕೆ, ನಾಲ್ಕೈದು ಸಾವಿರ ರೂಪಾಯಿಯಲ್ಲಿ ನಾನೇ ಮಾಡಿಕೊಡುತ್ತೇನೆ, ಉಳಿದ ಹಣ ನನಗೇ ಕೊಡಿ’ ಅಂತ ಕಾಲೆಳೆದವರೂ ಇದ್ದರು. ಹಾಗಿದ್ದರೆ, ನಮ್ಮದೇ ವೆಬ್ ಸೈಟ್ ಹೊಂದುವುದು ಅಷ್ಟೊಂದು ಕಷ್ಟವೇ? ಇಲ್ಲ. ತೀರಾ ಸುಲಭ ಮತ್ತು ಅದಕ್ಕೆ ಲಕ್ಷಾಂತರ ರೂಪಾಯಿಯೂ ಬೇಕಾಗಿಲ್ಲ. ಇದು…

Rate this: