ಫೇಸ್‌ಬುಕ್‌ನಿಂದ ತಾತ್ಕಾಲಿಕವಾಗಿ, ಶಾಶ್ವತವಾಗಿ ಹೊರಬರುವುದು ಹೇಗೆ?

ತಲೆಬುಡವಿಲ್ಲದ ಫೇಕ್ ಸುದ್ದಿಗಳು, ವ್ಯರ್ಥ ರಾಜಕೀಯ ಚರ್ಚೆಗಳು, ಸತ್ವಹೀನ ವ್ಯರ್ಥಾಲಾಪಗಳು, ಫೇಕ್ ಸ್ನೇಹಿತರು, ಖಾಸಗಿತನಕ್ಕೆ ಭಂಗ ತರುವ ಇಂಟರ್ನೆಟ್ ಚಾಳಿ, ಜತೆಗೆ ನಮ್ಮ ಮಾಹಿತಿ ಸೋರಿ ಹೋಗುವಿಕೆಯಂತಹಾ ಅಲ್ಲೋಲ ಕಲ್ಲೋಲದ ಕಾರಣದಿಂದಾಗಿ, ಫೇಸ್‌ಬುಕ್‌ನಿಂದ ಹೊರಬಂದರೆ ಸಾಕು ಅಂತ ಅಂದುಕೊಳ್ಳುವವರ ಸಂಖ್ಯೆಗೇನೂ ಕೊರತೆಯಿಲ್ಲ. ಬೇಡಪ್ಪಾ ಫೇಸ್‌ಬುಕ್ ಸಹವಾಸ ಅಂದುಕೊಂಡವರಿದ್ದಾರೆ. ಫೇಸ್‌ಬುಕ್ ಖಾತೆ ಇದ್ದರಲ್ಲವೇ ಅದರತ್ತ ಕಣ್ಣು ಹಾಯಿಸಲೇಬೇಕು ಎಂಬ ತುಡಿತ? ಫೇಸ್‌ಬುಕ್‌ನಲ್ಲಿ ಖಾತೆಯೇ ಇಲ್ಲದಿದ್ದರೆ? ಅತ್ತ ಕಡೆ ತಲೆಹಾಕಲೇಬೇಕೆಂದಿಲ್ಲ! ಆದರೆ, ಇರುವ ಖಾತೆಯನ್ನು ಇಲ್ಲದಂತೆ ಮಾಡುವುದು ಹೇಗೆ ಎಂಬುದೇ…

Rate this: