ನಿಮ್ಮ ಡೆಸ್ಕ್ಟಾಪ್ ಕ್ಲೀನ್ ಇರಲಿ
ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ: ಮೇ 19, 2014ಸದಾ ಕಾಲ ನೀವು ಕಂಪ್ಯೂಟರ್ ಮುಂದೆಯೇ ಕೂರುತ್ತಾ ಕೆಲಸ ಮಾಡುವವರಾದರೆ ನಿಮ್ಮ ಕೆಲಸ ಕಾರ್ಯಗಳನ್ನು ಎಷ್ಟರ ಮಟ್ಟಿಗೆ ಅಚ್ಚುಕಟ್ಟಾಗಿ, ಸಂಘಟಿತವಾಗಿ ಮತ್ತು ಯೋಜಿತ ರೀತಿಯಲ್ಲಿ ಮಾಡುತ್ತೀರಿ ಎಂಬುದನ್ನು ನಿಮ್ಮ ಕಂಪ್ಯೂಟರ್ ಪರದೆಯ ಡೆಸ್ಕ್ಟಾಪ್ ಹೇಳುತ್ತದೆ. ಡೆಸ್ಕ್ಟಾಪ್ನಲ್ಲೇ ಸಾಕಷ್ಟು ಫೈಲ್ಗಳನ್ನು ಸೇವ್ ಮಾಡುತ್ತೀರೆಂದಾದರೆ, ಒಂದೋ ನೀವು ಬಿಡುವಿಲ್ಲದೆ ಕೆಲಸ ಮಾಡುತ್ತೀರಿ ಎಂದು ತಿಳಿದುಕೊಂಡು ಸುಮ್ಮನಾಗಬಹುದು; ಇಲ್ಲವೇ, ನಿಮ್ಮಷ್ಟು ಉದಾಸೀನತೆ ತೋರುವವರು ಯಾರೂ ಇಲ್ಲ, ಕಂಪ್ಯೂಟರ್ನ ಬಗ್ಗೆ ನಿಮಗೆ ಕಾಳಜಿಯೇ ಇಲ್ಲ,…