ಸರಕಾರಿ ಮಾನ್ಯತೆ ಪಡೆದ ಯುನಿಕೋಡ್, ಏನಿದು?

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-12 (ನವೆಂಬರ್ 12, 2012) ಹಲವಾರು ವರ್ಷಗಳ ನಿರೀಕ್ಷೆಯ ಬಳಿಕ ಮೊನ್ನೆ ಮೊನ್ನೆಯಷ್ಟೇ ಕರ್ನಾಟಕ ಸರಕಾರವು Unicode ಶಿಷ್ಟತೆಗೆ ಮಾನ್ಯತೆ ನೀಡಿತು ಎಂಬ ವರದಿಗಳನ್ನು ನೀವು ಇತ್ತೀಚೆಗಷ್ಟೇ ಓದಿದ್ದೀರಿ. ಏನಿದು ಅರ್ಥವಾಗಲಿಲ್ಲ ಅಂದುಕೊಂಡಿರಾ? ಕಂಪ್ಯೂಟರ್‌ನಲ್ಲಿ ಕನ್ನಡ ಓದುವವರಿಗೆ, ಬರೆಯುವವರಿಗೆ ಒಂದು ಸಮಸ್ಯೆಯ ಕುರಿತು ಗೊತ್ತು. ಅದೆಂದರೆ, ನೀವು ಏನೋ ಕನ್ನಡದಲ್ಲಿ ಟೈಪ್ ಮಾಡಿ ಇನ್ನೊಬ್ಬರಿಗೆ ಕಳುಹಿಸುತ್ತೀರಿ. ಅವರಿಗೆ ಅದನ್ನು ಓದಲಾಗುವುದಿಲ್ಲ ಅಥವಾ ತಿದ್ದಲು ಕೂಡ ಆಗುವುದಿಲ್ಲ. ಅಥವಾ ಪತ್ರಿಕೆಗಳಿಗೆ ಕಂಪ್ಯೂಟರಿನಲ್ಲಿ ಟೈಪ್ ಮಾಡಿ…

Rate this:

ಮಾಹಿತಿ@ತಂತ್ರಜ್ಞಾನ-4: ಮನೆಯಲ್ಲಿ ಲೆಸ್ ವೈರ್- Wi-Fi

ವಿಜಯ ಕರ್ನಾಟಕ ಅಂಕಣ 17 ಸೆಪ್ಟೆಂಬರ್ 12 ಯಾವುದೇ ಮೊಬೈಲ್ ಅಥವಾ ಕಂಪ್ಯೂಟರ್ ಕೊಳ್ಳಲು ಹೋದಾಗ Wi-Fi (Wireless Fidelity) ಅಥವಾ WLAN (Wireless Local Area Network) ಎಂದರೇನೆಂದು ತಲೆಕೆಡಿಸಿಕೊಂಡಿದ್ದೀರಾ? ಹಾಗಿದ್ದರೆ ಇಲ್ಲಿದೆ ಆ ಕುರಿತು ಉಪಯುಕ್ತ ಮಾಹಿತಿ. ಮೊಬೈಲ್ ಫೋನ್ ಮಾತುಕತೆ ಹೇಗೆ ವೈರ್ ಇಲ್ಲದ ಸಂವಹನವೋ, ಅದರಂತೆಯೇ ಹಾಡು, ಚಿತ್ರ, ವೀಡಿಯೋಗಳನ್ನು ಕೂಡ ವೈರ್ ಇಲ್ಲದೆಯೇ ವಿನಿಮಯ ಮಾಡಿಕೊಳ್ಳುವ ವ್ಯವಸ್ಥೆಯ ಆಧುನಿಕ ರೂಪ ವೈ-ಫೈ. ಹಿಂದಿನ ಮೊಬೈಲ್ ಫೋನ್‌ಗಳಲ್ಲಿ IR (Infrared) Port…

Rate this: