ವರ್ಕ್ ಫ್ರಂ ಹೋಂ?: ಮೊಬೈಲನ್ನೇ ವೈಫೈ ಹಾಟ್‌ಸ್ಪಾಟ್ ಆಗಿಸುವುದು ಹೀಗೆ!

ವರ್ಕ್ ಫ್ರಂ ಹೋಮ್? ಇಂಟರ್ನೆಟ್ ಸಂಪರ್ಕ ತತ್‌ಕ್ಷಣಕ್ಕೆ ಸಿಗುತ್ತಿಲ್ಲವಾದರೆ, ನಿಮ್ಮ ಮೊಬೈಲನ್ನೇ ವೈಫೈ ಹಾಟ್‌ಸ್ಪಾಟ್ ಆಗಿ ಪರಿವರ್ತಿಸಿ, ಕಂಪ್ಯೂಟರಿಗೆ ಇಂಟರ್ನೆಟ್ ಸಂಪರ್ಕ ಒದಗಿಸುವ ವಿಧಾನ ಇಲ್ಲಿದೆ. ಕೊರೊನಾ ವೈರಸ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್‌ಡೌನ್. ಹೀಗಾಗಿ ವರ್ಕ್ ಫ್ರಂ ಹೋಮ್ ಅಂದರೆ ಮನೆಯಲ್ಲೇ ಕುಳಿತು ಕಚೇರಿ ಕೆಲಸ ನಿರ್ವಹಿಸುವುದಕ್ಕೆ ಆದ್ಯತೆ. ಆದರೆ, ಇಂಟರ್ನೆಟ್ ಸೇವೆ ನೀಡುವ ಟೆಲಿಕಾಂ ಕಂಪನಿಗಳು ಕೂಡ ಕಸ್ಟಮರ್ ಕೇರ್‌ಗೆ ಕರೆ ಮಾಡಿದರೆ ಸ್ಪಂದಿಸುತ್ತಿಲ್ಲ, ಹೊಸದಾಗಿ ವೈಫೈ ಹಾಟ್‌ಸ್ಪಾಟ್ ಅಥವಾ ಬ್ರಾಡ್‌ಬ್ಯಾಂಡ್ ಸಂಪರ್ಕ…

Rate this:

ಕಂಪ್ಯೂಟರ್‌ನಿಂದ Instagram ಗೆ ಫೋಟೋ ಅಪ್‌ಲೋಡ್ ಮಾಡುವುದು ಹೀಗೆ!

ಫೇಸ್‌ಬುಕ್, ಟ್ವಿಟರ್ ಮುಂತಾದವುಗಳ ಬಳಿಕ ಈಗ ಸದ್ದು ಮಾಡುತ್ತಿರುವ ಆನ್‌ಲೈನ್ ಸೋಷಿಯಲ್ ಮೀಡಿಯಾ ತಾಣವೆಂದರೆ ಇನ್‌ಸ್ಟಾಗ್ರಾಂ. ಇದು ಕೂಡ ವಾಟ್ಸ್ಆ್ಯಪ್‌ನಂತೆಯೇ ಫೇಸ್‌ಬುಕ್ ಒಡೆತನದಲ್ಲಿರುವ ತಾಣ. ಹೀಗಾಗಿ ಫೇಸ್‌ಬುಕ್ ಖಾತೆ ಹೊಂದಿದ್ದವರು ಇನ್‌ಸ್ಟಾಗ್ರಾಂನಲ್ಲಿ ಕೂಡ ನೇರವಾಗಿ ಖಾತೆ ತೆರೆಯುವುದು ಸುಲಭ. ಇದರಲ್ಲಿ ಹೆಚ್ಚಾಗಿ ಚಿತ್ರಗಳು, ವೀಡಿಯೊಗಳಲ್ಲದೆ, ನಮ್ಮ ಸ್ಟೋರಿಗಳನ್ನು ಹಂಚಿಕೊಳ್ಳಬಹುದು. ಇಲ್ಲಿ ಖಾತೆ ತೆರೆದರೆ, ಫೇಸ್‌ಬುಕ್ ತಾಣದಲ್ಲಿರುವ ಯಾವುದೇ ಸ್ನೇಹಿತರು ಇನ್‌ಸ್ಟಾಗ್ರಾಂ ಸೇರಿದಾಗ ನಿಮಗೂ ನೋಟಿಫಿಕೇಶನ್ ಬರುತ್ತಾ ಇರುತ್ತದೆ. ಈ ಕಿರು ತಾಣದಲ್ಲಿ ಚಿತ್ರ ಮತ್ತು ವೀಡಿಯೊಗಳದ್ದೇ ಕಾರುಬಾರು…

Rate this:

ಸೈಬರ್ ಕೆಫೆಗಳಲ್ಲಿ ಕಂಪ್ಯೂಟರ್ ಬಳಸುವ ಮುನ್ನ ಇದನ್ನು ಓದಿ

ತಂತ್ರಜ್ಞಾನದ ಪ್ರಗತಿಯ ಭರದಲ್ಲಿ ನಮ್ಮ ಪ್ರೈವೆಸಿಯ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳಲು ಬಹುಶಃ ನಮಗೆ ಸಮಯ ಸಾಲುತ್ತಿಲ್ಲ. ನಮ್ಮದೇ ಸ್ವಂತ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಇದ್ದರೆ ಅಷ್ಟೇನೂ ಸಮಸ್ಯೆಯಾಗಲಾರದು. ಆದರೆ, ಸೈಬರ್ ಕೆಫೆ/ಕಂಪ್ಯೂಟರ್ ಸೆಂಟರ್, ಆಫೀಸ್ ಅಥವಾ ಬೇರಾವುದೇ ಸಾರ್ವಜನಿಕ ಕಂಪ್ಯೂಟರ್‌ಗಳನ್ನು ಬಳಸುವಾಗ ನಮ್ಮ ವೆಬ್ ಜಾಲಾಟದ (ಬ್ರೌಸಿಂಗ್) ಕುರುಹುಗಳೆಲ್ಲವೂ ಆ ಕಂಪ್ಯೂಟರಿನಲ್ಲಿ ಉಳಿಯುತ್ತವೆ ಮತ್ತು ಅದನ್ನು ಮತ್ತೊಬ್ಬರು ಬಂದು ಪುನಃ ನೋಡಬಹುದು, ದುರ್ಬಳಕೆ ಮಾಡಬಹುದು ಎಂಬ ವಿಚಾರ ಜನ ಸಾಮಾನ್ಯರಲ್ಲಿ ಬಹುತೇಕರಿಗೆ ತಿಳಿದಿಲ್ಲ. ಕಂಪ್ಯೂಟರ್ ಸೆಂಟರಿಗೆ ಹೋಗುವುದು,…

Rate this:

G-Talk ಗೆ ಬೈಬೈ: ಕ್ರೋಮ್ ಬ್ರೌಸರ್‌ನಲ್ಲಿ ಹ್ಯಾಂಗೌಟ್ ಅಳವಡಿಸಿಕೊಳ್ಳಿ

ಜಿ-ಟಾಕ್ ಯಾರಿಗೆ ಗೊತ್ತಿಲ್ಲ? ಗೂಗಲ್ (ಜಿಮೇಲ್) ಖಾತೆ ಹೊಂದಿದ್ದವರಿಗೆ ತಿಳಿದಿರುವ ಕ್ಷಿಪ್ರ ಸಂದೇಶವಾಹಕ, ಅಂದರೆ ಚಾಟಿಂಗ್ (ಇನ್‌ಸ್ಟೆಂಟ್ ಮೆಸೇಜಿಂಗ್) ತಂತ್ರಾಂಶವಿದು. ಕೆಲವೇ ವರ್ಷಗಳ ಹಿಂದೆ ಸ್ಮಾರ್ಟ್‌ಫೋನ್‌ಗಳಲ್ಲಿ ಕೂಡ ಜಿ-ಟಾಕ್ ಆ್ಯಪ್ ಇತ್ತಾದರೂ ಅದನ್ನು ಬಲವಂತವಾಗಿ ಹ್ಯಾಂಗೌಟ್ಸ್‌ಗೆ ಗೂಗಲ್ ಬದಲಿಸಿತ್ತು. ಆದರೆ, ಫೆ.16ರಂದು ಈ ಜನಪ್ರಿಯ ಜಿ-ಟಾಕ್ ಎಂಬ ಸಂವಹನ ತಂತ್ರಾಂಶದ ಅವಸಾನವಾಗಲಿದ್ದು, ಓರ್ಕುಟ್ ಎಂಬ ಸಾಮಾಜಿಕ ಜಾಲತಾಣದಂತೆಯೇ ಇತಿಹಾಸ ಸೇರಿಹೋಗಲಿದೆ. GTalk ಎಂಬ ಹಗುರವಾದ, ಬಳಕೆಗೆ ಸುಲಭ ತಂತ್ರಾಂಶ ಬಳಸುತ್ತಿದ್ದವರೆಲ್ಲರೂ ಕೆಲವು ದಿನಗಳಿಂದ ಈ ಕುರಿತ ಸಂದೇಶವನ್ನು…

Rate this:

ಫೇಸ್‌ಬುಕ್‌ನಲ್ಲಿ ವೀಡಿಯೋ ಕ್ಲಿಕ್ ಮಾಡುವ ಮುನ್ನ ಎಚ್ಚರ!

ಫೇಸ್‌ಬುಕ್‌ನಲ್ಲಿ ವಹಿಸಲೇಬೇಕಾದ ಎಚ್ಚರಿಕೆ. ಯಾವತ್ತೂ ಕೂಡ ಅಶ್ಲೀಲ ವೀಡಿಯೋಗಳ ಲಿಂಕ್‌ಗಳನ್ನು ಕ್ಲಿಕ್ ಮಾಡಲೇಬೇಡಿ. ಇದನ್ನು ನಮ್ಮ ಸಾಮಾಜಿಕ ಜಾಲ ತಾಣದ ನಿಯಮಗಳಲ್ಲಿ ಒಂದನ್ನಾಗಿಸಿಕೊಳ್ಳುವುದಷ್ಟೇ ಅಲ್ಲ, ಇದರ ಹಿಂದೆ ಮತ್ತೊಂದು ಬಲುದೊಡ್ಡ ಕಾರಣವೂ ಇದೆ. ಈಗಾಗಲೇ ನಿಮ್ಮ ಸ್ನೇಹಿತರ ಬಳಗದಲ್ಲಿ ಅಶ್ಲೀಲ ಚಿತ್ರಗಳ ವೀಡಿಯೋಗಳಿರುವುದು ಹಾಗೂ ಅದಕ್ಕೆ ನಿಮ್ಮನ್ನು ಟ್ಯಾಗ್ ಮಾಡಿರುವುದರಿಂದ ಸಾಕಷ್ಟು ಮಂದಿ ಕಸಿವಿಸಿ ಅನುಭವಿಸಿರಬಹುದು. ನಿಮ್ಮ ಸ್ನೇಹಿತರು ಅಂಥವರಿರಲಾರರು ಎಂಬ ಬಗ್ಗೆ ನಿಮಗೆ ಸ್ಪಷ್ಟ ಅರಿವಿದ್ದರೂ, ಆತ/ಆಕೆ ಹಾಗೆ ಮಾಡಿದರಲ್ಲಾ ಎಂದು ಅಚ್ಚರಿ ಪಡುತ್ತೀರಿ. ಇದರ…

Rate this:

ಬ್ಯಾಕಪ್: ಕಂಪ್ಯೂಟರ್ ಇರುವವರೆಲ್ಲರೂ ಮಾಡಲೇಬೇಕಾದ ಕೆಲ್ಸ

ಕಂಪ್ಯೂಟರ್ ಕ್ರ್ಯಾಶ್ ಆಗಿದೆ, ಹಾರ್ಡ್ ಡಿಸ್ಕ್ ಕ್ರ್ಯಾಶ್ ಆಯಿತು, ಆಪರೇಟಿಂಗ್ ಸಿಸ್ಟಂ ಕೆಟ್ಟು ಹೋಯಿತು, ಫೈಲ್ ಡಿಲೀಟ್ ಆಯಿತು ಅಂತ ಹೇಳುತ್ತಿರುವವರನ್ನು ಕೇಳಿದ್ದೇವೆ. ಸಮಯ ಸಿಕ್ಕಾಗಲೆಲ್ಲಾ ನಮ್ಮ ಕಂಪ್ಯೂಟರಿನ ಆಪರೇಟಿಂಗ್ ಸಿಸ್ಟಂ ಸಹಿತ ಎಲ್ಲ ತಂತ್ರಾಂಶಗಳನ್ನು ಬ್ಯಾಕಪ್ (ಸುಲಭವಾಗಿ ಹೇಳುವುದಾದರೆ Copy) ಇರಿಸಿಕೊಂಡರೆ, ಇಂತಹಾ ಆಪತ್ಕಾಲದಲ್ಲಿ ಆತಂಕ ಪಡುವ ಬದಲು ಸುಲಭವಾಗಿ ರೀಸ್ಟೋರ್ ಮಾಡಬಹುದು. ಇದು ನಾವು-ನೀವು ಮಾಡಿಕೊಳ್ಳಬಹುದಾದ ತೀರಾ ಸುಲಭದ ಕೆಲಸ. ವಿಂಡೋಸ್ ಆಪರೇಟಿಂಗ್ ಸಿಸ್ಟಂ (7 ಅಥವಾ 8.1 ಆವೃತ್ತಿ) ನಲ್ಲಿ ಬ್ಯಾಕಪ್ ಮಾಡಿಕೊಳ್ಳುವ…

Rate this:

ಟೆಕ್ ಟಾನಿಕ್: ಕೀಬೋರ್ಡ್‌ನಲ್ಲಿ Esc ಬಟನ್

ಕಂಪ್ಯೂಟರ್ ಕೀಬೋರ್ಡ್‌ನಲ್ಲಿ Esc ಎಂದು ಬರೆದಿರುವ ಕೀಲಿ ಯಾಕಾಗಿ ಇದೆ ಎಂಬ ಬಗ್ಗೆ ಜನ ಸಾಮಾನ್ಯರಲ್ಲಿ ಸೋಜಿಗ ಇರಬಹುದು. ಕೀಬೋರ್ಡ್‌ನಲ್ಲಿ ಎಲ್ಲದಕ್ಕೂ Yes ಹೇಳಲು Enter ಬಟನ್ ಹೇಗೆ ಇದೆಯೋ, ಯಾವುದೇ ಕಾರ್ಯಕ್ಕೆ No ಅಂತ ಹೇಳಲು ಇರುವುದೇ ಈ Esc ಅಥವಾ ಎಸ್ಕೇಪ್ ಬಟನ್. ಎಂಟರ್ ಒತ್ತಿದರೆ, ಯಾವುದೇ ಸ್ಕ್ರೀನ್‌ನಲ್ಲಿ ಅತ್ಯಂತ ಪ್ರಮುಖವಾದ ಬಟನ್ ಸಕ್ರಿಯವಾಗುತ್ತದೆ. ಯಾವುದೇ ಕಾರ್ಯವನ್ನು ರದ್ದುಗೊಳಿಸಲು, ಮುಚ್ಚಲು ಈ Esc ಬಟನ್ ಇದೆ. ವಾಸ್ತವವಾಗಿ ಇದು Cancel ಬಟನ್‌ನ ಕೆಲಸವನ್ನೇ ಮಾಡುತ್ತದೆ.…

Rate this:

ವಿಂಡೋಸ್ 10: ನೀವು ತಿಳಿದಿರಬೇಕಾದ 6 ಸಂಗತಿಗಳು

ಮೈಕ್ರೋಸಾಫ್ಟ್ ತನ್ನ ವಿಂಡೋಸ್ ಕಾರ್ಯಾಚರಣಾ ವ್ಯವಸ್ಥೆಯ 10ನೇ ಆವೃತ್ತಿಯ ಬಗ್ಗೆ ಕಳೆದ ವಾರ ಮುನ್ನೋಟವನ್ನು ಪ್ರದರ್ಶಿಸಿದ್ದು, ವಿಂಡೋಸ್ ಬಳಕೆದಾರರಲ್ಲಿ ಆಸೆ ಚಿಗುರಿಸಿದೆ. ಈ ವರ್ಷದಲ್ಲೇ ಇದು ಗ್ರಾಹಕರಿಗೆ ಲಭ್ಯವಾಗಲಿದ್ದು, ವಿಂಡೋಸ್ 7 ಹಾಗೂ 8 ಬಳಕೆದಾರರಿಗೆ ಉಚಿತ ಅಪ್‌ಗ್ರೇಡ್ ರೂಪದಲ್ಲಿ ದೊರೆಯಲಿದೆ. ಹೊಸ ಬ್ರೌಸರ್ ಘೋಷಣೆ, ವಿಂಡೋಸ್ ಫೋನ್‌ಗಳಲ್ಲಿ ಪ್ರಸಿದ್ಧಿ ಪಡೆದಿರುವ ಕೋರ್ಟನಾ ಎಂಬ ಆಪ್ತಸಹಾಯಕ ತಂತ್ರಾಂಶವು ಡೆಸ್ಕ್‌ಟಾಪ್ ಕಂಪ್ಯೂಟರುಗಳಿಗೂ ಬರಲಿರುವುದು ಮತ್ತು ಗೂಗಲ್ ಗ್ಲಾಸ್ ಹೋಲುವ 3ಡಿ ಕನ್ನಡಕ ಕೂಡ ಮಾರುಕಟ್ಟೆಗೆ ಬರಲಿದೆ. ಅವುಗಳ ಮೇಲೆ…

Rate this:

ಹ್ಯಾಕರ್‌ಗಳಿಂದ ರಕ್ಷಿಸಿಕೊಳ್ಳಲು ಮೇಲ್, ಫೋನ್, ಬ್ರೌಸರ್ ಸುರಕ್ಷಿತವಾಗಿಟ್ಟುಕೊಳ್ಳಿ

ಭಾರತದಲ್ಲಿ ಗೂಗಲ್ ಸೇವೆ ಬಳಸದಿರುವ ವ್ಯಕ್ತಿಯೇ ಇಲ್ಲ ಎನ್ನಬಹುದೇನೋ. ಜಿಮೇಲ್ ಇಮೇಲ್, ಹ್ಯಾಂಗೌಟ್ಸ್, ಕ್ರೋಮ್ ಬ್ರೌಸರ್, ಮೊಬೈಲ್ ಆಪರೇಟಿಂಗ್ ಸಿಸ್ಟಂ (ಆಂಡ್ರಾಯ್ಡ್), ಗೂಗಲ್ ಮ್ಯಾಪ್, ಗೂಗಲ್ ಕ್ಯಾಲೆಂಡರ್, ಸರ್ಚ್ ಎಂಜಿನ್… ಹೀಗೆ ಕಂಪ್ಯೂಟರಲ್ಲಿ ತೊಡಗಿಕೊಂಡವರಿಗೆ ಪ್ರತಿಯೊಂದು ಕೂಡ ಅತ್ಯುಪಯುಕ್ತ ವ್ಯವಸ್ಥೆಗಳನ್ನು ಅಮೆರಿಕದ ತಂತ್ರಜ್ಞಾನ ದಿಗ್ಗಜ ಸಂಸ್ಥೆಯಾಗಿರುವ ಗೂಗಲ್ ಒದಗಿಸಿದೆ. ಜನ ಸಾಮಾನ್ಯರಿಗೆ ಹತ್ತಿರವಾಗುತ್ತಲೇ, ಆನ್‌ಲೈನ್ ಚಟುವಟಿಕೆಯ ವೇಳೆ ಸುರಕ್ಷಿತವಾಗಿರುವುದರ ಬಗ್ಗೆಯೂ ಅದು ಮಾಹಿತಿ ನೀಡುತ್ತದೆ. ಇದಕ್ಕಾಗಿಯೇ ಗೂಗಲ್ ಟಿಪ್ಸ್ ಎಂಬ ಜಾಲ ತಾಣವನ್ನೂ ತೆರೆದಿದೆ. ಸದಾ ಕಾಲ…

Rate this:

108: ಮೊಬೈಲ್‌ನಲ್ಲಿ ಕಂಪ್ಯೂಟರ್ ಜಾಲಾಡಿ; ಬೇರೆಲ್ಲೋ ಇರುವ ಕಂಪ್ಯೂಟರನ್ನೂ ನಿಯಂತ್ರಿಸಿ

ಕಚೇರಿಯಲ್ಲಿ ಕಂಪ್ಯೂಟರಲ್ಲಿ ಟೈಪ್ ಮಾಡಿಟ್ಟ ಇಮೇಲ್ ಅನ್ನು ಮನೆಯಿಂದಲೇ ಮುಂದುವರಿಸಬೇಕೇ? ದೂರದಲ್ಲೆಲ್ಲೋ ಇರುವ ನಿಮ್ಮ ಡೆಸ್ಕ್‌ಟಾಪ್‌ನಲ್ಲಿರುವ ಫೈಲನ್ನು ನಿಮ್ಮ ಮೊಬೈಲ್ ಮೂಲಕವೇ ಓದಬೇಕೇ? ಸಾಧ್ಯವಿಲ್ಲ ಎಂದುಕೊಂಡಿರಾ? ಇದು ಸಾಧ್ಯ ಮತ್ತು ತೀರಾ ಸುಲಭ ಕೂಡ. ಇಂಟರ್ನೆಟ್ ಸಂಪರ್ಕವಿದ್ದರೆ ಜಗತ್ತೇ ಅಂಗೈಯಲ್ಲಿ ಅಂತ ಹೇಳೋದು ಇದಕ್ಕೇ. ಟೀಮ್ ವ್ಯೂವರ್ ಎಂಬೊಂದು ಉಚಿತ ತಂತ್ರಾಂಶದ ಮೂಲಕ ಬೆಂಗಳೂರಿನಿಂದ ಕುಳಿತು ಮಂಗಳೂರಿನಲ್ಲಿರುವ ಕಂಪ್ಯೂಟರನ್ನು ನಿಯಂತ್ರಿಸಬಹುದು. ಸಾಫ್ಟ್‌ವೇರ್ ಉದ್ಯೋಗಿಗಳಲ್ಲಿ ಹೆಚ್ಚು ಮನೆಮಾತಾಗಿರುವ ಈ ತಂತ್ರಾಂಶವನ್ನು ಯಾರು ಬೇಕಿದ್ದರೂ ಸುಲಭವಾಗಿ ಉಪಯೋಗಿಸಬಹುದು. ಮನೆಯಲ್ಲಿ ಕಂಪ್ಯೂಟರ್…

Rate this: