ಫೋನ್‌ನ ಬ್ಯಾಟರಿ ಬೇಗನೇ ಚಾರ್ಜ್ ಆಗುತ್ತಿಲ್ಲವೇ? ಇತ್ತ ಗಮನಿಸಿ…
ಇಂಟರ್ನೆಟ್ ಬಳಕೆಯಾಗುವ ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಟರಿ ಬೇಗ ಖಾಲಿಯಾಗುತ್ತದೆ. ಅಲ್ಲದೆ, ಕೆಲವರಿಗಂತೂ ಚಾರ್ಜಿಂಗ್‌ನದ್ದೇ ಚಿಂತೆ. ಎರಡು-ಮೂರು ಗಂಟೆ ಫೋನನ್ನು ಚಾರ್ಜರ್‌ಗೆ ಸಂಪರ್ಕಿಸಿಟ್ಟರೂ ಶೇ.50 ಕೂಡ ಚಾರ್ಜ್ ಆಗಿರುವುದಿಲ್ಲ ಅಂತ ಹಲವರು ಹೇಳಿರುವುದನ್ನು ಕೇಳಿದ್ದೇನೆ. ಇಂತಹಾ ಸಮಸ್ಯೆ ಬಂದಾಕ್ಷಣ ಕೆಲವರು ಅಗ್ಗದ ದರದ ಚಾರ್ಜರ್‌ಗಳನ್ನು ಖರೀದಿಸಿದವರಿದ್ದಾರೆ, ಸಮಸ್ಯೆ ಮತ್ತೆ ಮುಂದುವರಿಯುತ್ತಲೇ ಇತ್ತು. ಈ ಅನುಭವದ ಆಧಾರದಲ್ಲಿ, ಚಾರ್ಜಿಂಗ್‌ನಲ್ಲಿ ಕೂಡ ನಾವು ಕೆಲವೊಂದು ಮೂಲಭೂತ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ ಎಂಬುದನ್ನು ತಿಳಿಸಿಕೊಡಲು ಈ ಲೇಖನ. ಹೆಚ್ಚಿನ ಚಾರ್ಜಿಂಗ್ ಸಮಸ್ಯೆಗಳಿಗೆ ಮೂಲ ಕಾರಣವೆಂದರೆ ಅಡಾಪ್ಟರ್‌ಗೆ…