ಟೆಕ್ ಟಾನಿಕ್: ಕ್ರೋಮ್‌ನಲ್ಲಿ ಮೈಕ್ ಐಕಾನ್

ಗೂಗಲ್‌ನ ಕ್ರೋಮ್ ಬ್ರೌಸರ್ ಬಳಸುತ್ತಿರುವವರು ಕೆಲವೊಮ್ಮೆ ಬ್ರೌಸರ್‌ನ ತೆರೆದ ಟ್ಯಾಬ್‌ನ ಮೇಲ್ಭಾಗದ ಬಲತುದಿಯಲ್ಲಿ (ಬ್ರೌಸರ್ ಮುಚ್ಚಲು ಇರುವ X ಗುರುತು ಪಕ್ಕದಲ್ಲಿ) ಮೈಕ್ ರೀತಿಯ ಐಕಾನ್ ಕಾಣಿಸಿಕೊಂಡಿದ್ದನ್ನು ನೋಡಿರಬಹುದು. ಇದರ ಕೆಲಸವೇನು ಮತ್ತು ಇದು ಕೆಲವೊಮ್ಮೆ ಮಾತ್ರ ಯಾಕಾಗಿ ಕಾಣಿಸಿಕೊಳ್ಳುತ್ತದೆ? ವೀಡಿಯೋ ಅಥವಾ ಆಡಿಯೋ ಪ್ಲೇ ಆಗುತ್ತಿರುವ ಟ್ಯಾಬ್‌ನಲ್ಲಿ ಮಾತ್ರವೇ ಈ ಐಕಾನ್ ಕಾಣಿಸಿಕೊಳ್ಳುತ್ತದೆ. ಸಾಕಷ್ಟು ಟ್ಯಾಬ್‌ಗಳನ್ನು ತೆರೆದಿಟ್ಟುಕೊಂಡು (ಒಂದೊಂದರಲ್ಲಿ ಒಂದೊಂದು ವೆಬ್ ಪುಟ) ಕೆಲಸ ಮಾಡುತ್ತಾರೆ. ದಿಢೀರನೇ ಸದ್ದು ಕೇಳಿಸಿದಾಗ ಯಾವುದರಲ್ಲಿ ವೀಡಿಯೊ ಅಥವಾ ಆಡಿಯೊ…

Rate this:

ಹ್ಯಾಕರ್‌ಗಳಿಂದ ರಕ್ಷಿಸಿಕೊಳ್ಳಲು ಮೇಲ್, ಫೋನ್, ಬ್ರೌಸರ್ ಸುರಕ್ಷಿತವಾಗಿಟ್ಟುಕೊಳ್ಳಿ

ಭಾರತದಲ್ಲಿ ಗೂಗಲ್ ಸೇವೆ ಬಳಸದಿರುವ ವ್ಯಕ್ತಿಯೇ ಇಲ್ಲ ಎನ್ನಬಹುದೇನೋ. ಜಿಮೇಲ್ ಇಮೇಲ್, ಹ್ಯಾಂಗೌಟ್ಸ್, ಕ್ರೋಮ್ ಬ್ರೌಸರ್, ಮೊಬೈಲ್ ಆಪರೇಟಿಂಗ್ ಸಿಸ್ಟಂ (ಆಂಡ್ರಾಯ್ಡ್), ಗೂಗಲ್ ಮ್ಯಾಪ್, ಗೂಗಲ್ ಕ್ಯಾಲೆಂಡರ್, ಸರ್ಚ್ ಎಂಜಿನ್… ಹೀಗೆ ಕಂಪ್ಯೂಟರಲ್ಲಿ ತೊಡಗಿಕೊಂಡವರಿಗೆ ಪ್ರತಿಯೊಂದು ಕೂಡ ಅತ್ಯುಪಯುಕ್ತ ವ್ಯವಸ್ಥೆಗಳನ್ನು ಅಮೆರಿಕದ ತಂತ್ರಜ್ಞಾನ ದಿಗ್ಗಜ ಸಂಸ್ಥೆಯಾಗಿರುವ ಗೂಗಲ್ ಒದಗಿಸಿದೆ. ಜನ ಸಾಮಾನ್ಯರಿಗೆ ಹತ್ತಿರವಾಗುತ್ತಲೇ, ಆನ್‌ಲೈನ್ ಚಟುವಟಿಕೆಯ ವೇಳೆ ಸುರಕ್ಷಿತವಾಗಿರುವುದರ ಬಗ್ಗೆಯೂ ಅದು ಮಾಹಿತಿ ನೀಡುತ್ತದೆ. ಇದಕ್ಕಾಗಿಯೇ ಗೂಗಲ್ ಟಿಪ್ಸ್ ಎಂಬ ಜಾಲ ತಾಣವನ್ನೂ ತೆರೆದಿದೆ. ಸದಾ ಕಾಲ…

Rate this:

ಇಂಟರ್ನೆಟ್ ಜಾಲಾಡಲು ಬ್ರೌಸರ್‌ಗಳು

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-21 (ಜನವರಿ 21, 2013) ಇಂಟರ್ನೆಟ್‌ನಲ್ಲಿ ವಿವಿಧ ವೆಬ್‌ತಾಣಗಳನ್ನು ಜಾಲಾಡಬೇಕಿದ್ದರೆ, ಕಂಪ್ಯೂಟರ್ ಜೊತೆಗೆ ಇಂಟರ್ನೆಟ್ ಸಂಪರ್ಕವೊಂದು ಎಷ್ಟು ಮೂಲಭೂತ ಆವಶ್ಯಕತೆಯೋ, ಅದನ್ನು ಜಾಲಾಡಲು ಬ್ರೌಸರ್ ಎಂಬ ತಂತ್ರಾಂಶ ಬೇಕಿರುವುದೂ ಅಷ್ಟೇ ಮುಖ್ಯ. ಯಾವುದೇ ಇಂಟರ್ನೆಟ್ ಕೆಫೆಗೋ, ಅಥವಾ ನೀವು ಹೊಸದಾಗಿ ಕೊಂಡುಕೊಂಡ ಕಂಪ್ಯೂಟರಿನೊಳಗೋ, ಇಂಟರ್ನೆಟ್ ಜಾಲಾಡುವುದಕ್ಕೆ ಇಂಗ್ಲಿಷಿನಲ್ಲಿ e ಎಂದು ಬರೆದಿರುವ ಐಕಾನ್ ಒಂದನ್ನು ಕ್ಲಿಕ್ ಮಾಡಿದರೆ, ಅದರಲ್ಲಿ ನಿಮಗೆ ಬೇಕಾದ ಸೈಟುಗಳ ಯುಆರ್‌ಎಲ್ (ವೆಬ್ ವಿಳಾಸ) ಹಾಕಿ ಎಂಟರ್ ಕೊಟ್ಟರೆ ಅದು…

Rate this: