Zeb-Soul: ಬ್ಲೂಟೂತ್ ಇಯರ್‌ಫೋನ್ ಹೇಗಿದೆ?
ಡಿಜಿಟಲ್ ಸಾಧನಗಳ ತಯಾರಿಕೆಯಲ್ಲಿ ದೇಶೀಯವಾಗಿ ಹೆಸರು ಮಾಡುತ್ತಿರುವ ಜೆಬ್ರಾನಿಕ್ಸ್ ಕಂಪನಿಯು ಇತ್ತೀಚೆಗೆ ಜೆಬ್-ಸೋಲ್ ಹೆಸರಿನಲ್ಲಿ ಬ್ಲೂಟೂತ್ ನೆಕ್‌ಬ್ಯಾಂಡ್ ಸ್ಪೀಕರ್ ಹೊರತಂದಿದೆ. ಇದು ವೈರ್‌ಲೆಸ್ ಬ್ಲೂಟೂತ್ ಇಯರ್‌ಫೋನ್ ಆಗಿದ್ದು, ನೋಡಲು ಆಕರ್ಷಕವಾಗಿದೆ. ಕತ್ತಿನ ಸುತ್ತ ಚೆನ್ನಾಗಿ ಕೂರುತ್ತದೆ. ಇದರ ಇಯರ್ ಬಡ್‌ಗಳು ಬಳಕೆಯಲ್ಲಿಲ್ಲದಿರುವಾಗ ಪರಸ್ಪರ ಬೆಸೆಯುವಂತೆ ಅಯಸ್ಕಾಂತವಿದೆ. ಇದರ ಮತ್ತೊಂದು ವಿಶೇಷತೆ ಎಂದರೆ 11.5 ಗಂಟೆಗಳ ಪ್ಲೇಬ್ಯಾಕ್ ಸಮಯ. ಅಂದರೆ, ಸಂಪೂರ್ಣವಾಗಿ ಚಾರ್ಜ್ ಆಗಲು 2 ಗಂಟೆ ಬೇಕಿದ್ದು, ಈ ಬ್ಯಾಟರಿ ಮೂಲಕ ನಿರಂತರವಾಗಿ 11.5 ಗಂಟೆ ಹಾಡುಗಳನ್ನು…