ಜೆಬ್ರಾನಿಕ್ಸ್ ಪ್ರಿಸಂ Review: ಬಣ್ಣಬಣ್ಣದ LED ದೀಪವುಳ್ಳ ಬ್ಲೂಟೂತ್ ಸ್ಪೀಕರ್

ಎಲೆಕ್ಟ್ರಾನಿಕ್ ಯುಗದ ಕ್ರಾಂತಿಯು ಅದೆಷ್ಟೋ ಸಾಧನಗಳನ್ನು ಮೂಲೆಗುಂಪು ಮಾಡುತ್ತಿದೆ. ಬಲ್ಬು, ಸ್ಪೀಕರ್, ಹೋಂ ಥಿಯೇಟರ್ ಸಿಸ್ಟಂ, ನೈಟ್ ಲ್ಯಾಂಪ್, ಎಫ್ಎಂ ರೇಡಿಯೋ, ಬ್ಲೂಟೂತ್ ಸ್ಪೀಕರ್, ಯುಎಸ್‌ಬಿ ಮೂಲಕ ಪ್ಲೇ ಮಾಡಬಹುದಾದ ಸ್ಪೀಕರ್… ಇವೆಲ್ಲವೂ ಒಂದರಲ್ಲಿಯೇ ಮಿಳಿತವಾಗಿ ಬರುವ ಸಾಕಷ್ಟು ಸಾಧನಗಳು ಈಗ ಮಾರುಕಟ್ಟೆಯಲ್ಲಿವೆ. ಅದರ ಸಾಲಿಗೆ ಹೊಸ ಸೇರ್ಪಡೆ ಜೆಬ್ರಾನಿಕ್ಸ್ ಕಂಪನಿ ಹೊರತಂದಿರುವ ಪ್ರಿಸಂ. ಎರಡು ವಾರಗಳ ಕಾಲ ಬಳಸಿದ ನೋಡಿದಾಗ ಕಂಡುಬಂದ ವಿಷಯಗಳು ಇಲ್ಲಿವೆ. ನೋಡಲು ಪುಟ್ಟ ಪೆಟ್ಟಿಗೆಯಂತಿರುವ ಇದು ಹಗುರವಾಗಿದೆ ಮತ್ತು ಇದರ ಆಕರ್ಷಣೆ…

Rate this: