ಫೋನ್‌ನ ಬ್ಯಾಟರಿ ಬೇಗನೇ ಚಾರ್ಜ್ ಆಗುತ್ತಿಲ್ಲವೇ? ಇತ್ತ ಗಮನಿಸಿ…

ಇಂಟರ್ನೆಟ್ ಬಳಕೆಯಾಗುವ ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಟರಿ ಬೇಗ ಖಾಲಿಯಾಗುತ್ತದೆ. ಅಲ್ಲದೆ, ಕೆಲವರಿಗಂತೂ ಚಾರ್ಜಿಂಗ್‌ನದ್ದೇ ಚಿಂತೆ. ಎರಡು-ಮೂರು ಗಂಟೆ ಫೋನನ್ನು ಚಾರ್ಜರ್‌ಗೆ ಸಂಪರ್ಕಿಸಿಟ್ಟರೂ ಶೇ.50 ಕೂಡ ಚಾರ್ಜ್ ಆಗಿರುವುದಿಲ್ಲ ಅಂತ ಹಲವರು ಹೇಳಿರುವುದನ್ನು ಕೇಳಿದ್ದೇನೆ. ಇಂತಹಾ ಸಮಸ್ಯೆ ಬಂದಾಕ್ಷಣ ಕೆಲವರು ಅಗ್ಗದ ದರದ ಚಾರ್ಜರ್‌ಗಳನ್ನು ಖರೀದಿಸಿದವರಿದ್ದಾರೆ, ಸಮಸ್ಯೆ ಮತ್ತೆ ಮುಂದುವರಿಯುತ್ತಲೇ ಇತ್ತು. ಈ ಅನುಭವದ ಆಧಾರದಲ್ಲಿ, ಚಾರ್ಜಿಂಗ್‌ನಲ್ಲಿ ಕೂಡ ನಾವು ಕೆಲವೊಂದು ಮೂಲಭೂತ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ ಎಂಬುದನ್ನು ತಿಳಿಸಿಕೊಡಲು ಈ ಲೇಖನ. ಹೆಚ್ಚಿನ ಚಾರ್ಜಿಂಗ್ ಸಮಸ್ಯೆಗಳಿಗೆ ಮೂಲ ಕಾರಣವೆಂದರೆ ಅಡಾಪ್ಟರ್‌ಗೆ…

Rate this:

ಟೆಕ್ ಟಾನಿಕ್: ಸ್ಮಾರ್ಟ್‌ಫೋನ್‌ ಬ್ಯಾಟರಿಯದ್ದೇ ಚಿಂತೆಯೇ?

ಸ್ಮಾರ್ಟ್‌ಫೋನ್‌ ಖರೀದಿಸುವಾಗ ಹೆಚ್ಚಿನವರು ಅದರ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಗಮನ ಹರಿಸುತ್ತಾರೆ. ಆದರೆ, ಬೇರೆಲ್ಲಾ ಒಳ್ಳೆಯ ವೈಶಿಷ್ಟ್ಯಗಳಿರುವ ಸ್ಮಾರ್ಟ್‌ಫೋನ್‌ನಲ್ಲಿ ಬ್ಯಾಟರಿಯದ್ದೇ ಒಂದು ಸಮಸ್ಯೆ, ಉಳಿದೆಲ್ಲವೂ ಅದ್ಭುತವಾಗಿದೆ ಅಂತ ಅನ್ನಿಸಿದ್ದಿದೆಯೇ? ಕೇವಲ ಅದೊಂದು ವಿಚಾರಕ್ಕಾಗಿ ಮಾತ್ರ ಈ ಫೋನ್‌ ಖರೀದಿಸಲು ಹಿಂದೇಟು ಹಾಕಿದ್ದೀರಾ? ಒಂದು ಸರಳ ಪರಿಹಾರವೆಂದರೆ, ಬ್ಯಾಟರಿ ಬ್ಯಾಂಕ್‌ ಅಥವಾ ಪೋರ್ಟೆಬಲ್‌ ಬ್ಯಾಟರಿಯನ್ನು ಪ್ರತ್ಯೇಕವಾಗಿ ಖರೀದಿಸುವುದು. 10ಸಾವಿರ mAh ಸಾಮರ್ಥ್ಯದ ಬ್ಯಾಟರಿ ಬ್ಯಾಂಕ್‌ ಖರೀದಿಸಿದರೆ, ಬೇಕಾದಾಗಲೆಲ್ಲಾ ನಿಮ್ಮ ಸ್ಮಾರ್ಟ್‌ಫೋನ್‌ ಅಥವಾ ಡಿಜಿಟಲ್‌ ಕ್ಯಾಮರಾದ ಬ್ಯಾಟರಿಯನ್ನು ಚಾರ್ಜ್‌ ಮಾಡಬಹುದು.

Rate this:

ಬ್ಯಾಟರಿ ಚಾರ್ಜ್ ಮಾಡಲು ವಿದ್ಯುತ್ ಕಡಿತದ ಸಮಸ್ಯೆಯೇ? ಪವರ್ ಬ್ಯಾಂಕ್ ಇದೆ!

ವಿಜಯ ಕರ್ನಾಟಕ ಅಂಕಣ, ಮಾಹಿತಿ @ ತಂತ್ರಜ್ಞಾನ: ನವೆಂಬರ್ 11, 2013 ಆಂಡ್ರಾಯ್ಡ್ ಇರಲಿ, ಬೇರಾವುದೇ ಮೊಬೈಲ್ ಅಥವಾ ಟ್ಯಾಬ್ಲೆಟ್, ಸ್ಮಾರ್ಟ್‌ಫೋನ್, ಫ್ಯಾಬ್ಲೆಟ್‌ಗಳಿರಲಿ; ಎಲ್ಲಕ್ಕೂ ಅತೀ ಹೆಚ್ಚು ಕಾಡುವ ಸಮಸ್ಯೆಯೆಂದರೆ ಬ್ಯಾಟರಿ. ಬಳಕೆ ಹೆಚ್ಚು ಮಾಡಿದಷ್ಟೂ ಅದರ ಬ್ಯಾಟರಿ ಚಾರ್ಜ್ ದಿಢೀರನೇ ಖಾಲಿಯಾಗಿಬಿಡುತ್ತದೆ. ತಂತ್ರಜ್ಞಾನದಲ್ಲಿ ಎಷ್ಟೇ ಸುಧಾರಣೆ ಮಾಡಲಾಗಿದ್ದರೂ, ಬ್ಯಾಟರಿ ಪವರ್ ಹೆಚ್ಚು ಕಾಲ ಬರುವುದು ಹೇಗೆಂಬುದರತ್ತ ಮೊಬೈಲ್ ಸಾಧನ ತಯಾರಿಸುವ ಕಂಪನಿಗಳು ಹೆಚ್ಚು ಗಮನ ಹರಿಸಿದಂತಿಲ್ಲ. ಆಂಡ್ರಾಯ್ಡ್, ವಿಂಡೋಸ್, ಬ್ಲ್ಯಾಕ್‌ಬೆರಿ, ಐಒಎಸ್ (ಆ್ಯಪಲ್), ಸಿಂಬಿಯಾನ್ ಮುಂತಾದ…

Rate this:

ಸ್ಮಾರ್ಟ್‌ಫೋನ್ ಬ್ಯಾಟರಿ ಪದೇ ಪದೇ ರೀಚಾರ್ಜ್ ಮಾಡಬೇಕಾಗುತ್ತದೆಯೇ? ಹೀಗೆ ಮಾಡಿ

ವಿಜಯ ಕರ್ನಾಟಕ ಅಂಕಣ ಮಾಹಿತಿ@ತಂತ್ರಜ್ಞಾನ– 37 – ಜೂನ್ 3, 2013 ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ಬೇಗನೇ ಚಾರ್ಜ್ ಕಳೆದುಕೊಳ್ಳುತ್ತದೆ ಎಂಬುದು ಹೆಚ್ಚಿನವರ ಕೊರಗು. ಇವು ಇಂಟರ್ನೆಟ್ ಮೂಲಕ ನಾವು ಸದಾ ಆನ್‌ಲೈನ್‌ನಲ್ಲಿ ಇರುವಂತೆ ನೋಡಿಕೊಳ್ಳುತ್ತವೆಯಾದರೂ, ಅದಕ್ಕಾಗಿ ಸಾಕಷ್ಟು ವಿದ್ಯುಚ್ಛಕ್ತಿ ವ್ಯಯವಾಗುತ್ತದೆ. ಸಾಮಾನ್ಯವಾಗಿ, ಕೇವಲ ಮಾತುಕತೆಗಾಗಿ ನಿಮ್ಮ ಸ್ಮಾರ್ಟ್‌ಫೋನನ್ನು ಬಳಸಿದರೆ ಎರಡು ಮೂರು ದಿನ ಬ್ಯಾಟರಿ ರೀಚಾರ್ಜ್ ಮಾಡುವ ಅಗತ್ಯವಿರುವುದಿಲ್ಲ. ಆದರೆ ಇಂಟರ್ನೆಟ್, ವಿಶೇಷವಾಗಿ 2ಜಿ ಗಿಂತಲೂ 3ಜಿ ಸಂಪರ್ಕವನ್ನು ಬಳಸಿದರೆ ಹೆಚ್ಚಿನ ಪ್ರಮಾಣದಲ್ಲಿ ಬ್ಯಾಟರಿ ಶಕ್ತಿ ಬೇಕಾಗುತ್ತದೆ…

Rate this:

ಮೊಬೈಲ್ ಬ್ಯಾಟರಿಯಲ್ಲಿ ಚಾರ್ಜ್ ನಿಲ್ಲುವುದಿಲ್ಲವೇ?

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ-5: ವಿಕ ಅಂಕಣ 24-ಸೆಪ್ಟೆಂಬರ್-2012 ಮೊಬೈಲ್ ಫೋನ್‌ನ ಬ್ಯಾಟರಿಯಲ್ಲಿ ಚಾರ್ಜ್ ಉಳಿಯೋದೇ ಇಲ್ಲ ಅಂತ ಪರಿತಪಿಸುತ್ತಿದ್ದೀರಾ? ಕಂಪ್ಯೂಟರುಗಳ ಥರಾನೇ ಕೆಲಸ ಮಾಡುವ ಸ್ಮಾರ್ಟ್‌ಫೋನ್‌ಗಳನ್ನು ಸದಾ ಪ್ಲಗ್‌ಗೆ ಸಿಲುಕಿಸಿಡುವುದು ಸಾಧ್ಯವಿಲ್ಲ. ಹಲವಾರು ಅಪ್ಲಿಕೇಶನ್‌ಗಳು ರನ್ ಆಗುತ್ತಿರುವಾಗ ಬ್ಯಾಟರಿಯ ಹೀರಿಕೊಳ್ಳುವಿಕೆಯೂ ಹೆಚ್ಚಾಗುತ್ತಾ ಹೋಗುತ್ತದೆ. ಹೀಗಾಗಿ 1000 – 1200 mAhಗಿಂತ ಹೆಚ್ಚು ಸಾಮರ್ಥ್ಯದ ಬ್ಯಾಟರಿ ಇರುವ ಸ್ಮಾರ್ಟ್ ಫೋನ್‌ಗಳನ್ನೇ ಖರೀದಿಸುವುದು ಸ್ಮಾರ್ಟ್ ಹೆಜ್ಜೆ. ಸ್ಮಾರ್ಟ್‌ಫೋನ್‌ಗಳು ಎಂಪಿ3 ಪ್ಲೇಯರ್‌ಗಳಾಗಿ, ಇಮೇಲ್‌ಗಾಗಿ, ಡಿಜಿಟಲ್ ಕ್ಯಾಮರಾ ಆಗಿ, ಗೇಮಿಂಗ್ ಸಾಧನವಾಗಿ ಮತ್ತು ಟಿವಿಯಾಗಿಯೂ…

Rate this: