ಯೂಟ್ಯೂಬ್ ವೀಡಿಯೊದಿಂದ ಆಡಿಯೋ ಪಡೆಯುವುದು ಸುಲಭ

ಗೂಗಲ್ ಒಡೆತನದ ವೀಡಿಯೋಗಳ ಭಂಡಾರ ಯೂಟ್ಯೂಬ್, ಅದೆಷ್ಟೋ ಸುಮಧುರ ಹಾಡುಗಳನ್ನೂ ನೋಡಲು ಅನುವು ಮಾಡುತ್ತದೆ. ಆದರೆ ಸರಿಯಾಗಿ ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೆ ಅದು ಸುರುಳಿ ಸುತ್ತುತ್ತಾ (ಬಫರಿಂಗ್) ಇದ್ದರೆ, ಕೇಳುವಿಕೆಯ ಆನಂದಕ್ಕೆ ಅಡ್ಡಿಯಾಗಬಹುದು. ಅಥವಾ ಪ್ರಯಾಣಿಸುತ್ತಿರುವಾಗ ಮೊಬೈಲ್ ಫೋನ್ ಮೂಲಕ ಕಿವಿಗಾನಿಸಿಕೊಂಡು ಯೂಟ್ಯೂಬ್ ನೋಡಿದರೆ, ಬ್ಯಾಟರಿ ಬೇಗ ಖಾಲಿಯಾಗುವ ಆತಂಕ. ಹೀಗಾಗಿ, ಇದೇ ವೀಡಿಯೊ ಹಾಡನ್ನು ಎಂಪಿ3 ಎಂಬ ಮ್ಯೂಸಿಕ್ ಫೈಲ್ ಆಗಿ ಪರಿವರ್ತಿಸಿದರೆ ಈ ಸಮಸ್ಯೆಗಳು ಪರಿಹಾರವಾಗುತ್ತವೆ. ಮತ್ತು ಪದೇ ಪದೇ ಕೇಳುವುದಕ್ಕೆ ಇಂಟರ್ನೆಟ್ ಸಂಪರ್ಕವೂ ಬೇಕಾಗಿರುವುದಿಲ್ಲ.…

Rate this: