ಹಲೋ 2019, ನಾನು ಒಳಗೆ ಬರಲೇ?
ಅವಿನಾಶ್ ಬಿ. “ಎಲ್ಲರಿಗೂ ಹಲೋ! ನಾನು ಇಂಗ್ಲಿಷ್ ಕೃತಕ ಬುದ್ಧಿಮತ್ತೆಯ ಆ್ಯಂಕರ್. ಇದು ಝಿನುವಾ ಸುದ್ದಿ ಸಂಸ್ಥೆಯಲ್ಲಿ ನನ್ನ ಚೊಚ್ಚಲ ದಿನ. ನನ್ನ ಧ್ವನಿ ಮತ್ತು ರೂಪವು ಸುದ್ದಿ ಸಂಸ್ಥೆಯ ನಿಜವಾದ ವಾರ್ತಾವಾಚಕ ಝಾಂಗ್ ಜಾವೊರನ್ನು ಹೋಲುತ್ತದೆ” ಹೀಗಂತ 2018ರ ನವೆಂಬರ್ 27ರಂದು ಚೀನಾದ ವುಝೆನ್‌ನಲ್ಲಿ ನಡೆದ ವಿಶ್ವ ಇಂಟರ್ನೆಟ್ ಸಮಾವೇಶದಲ್ಲಿ ಆ ದೇಶದ ಝಿನುವಾ (Xinhua) ಸುದ್ದಿ ಸಂಸ್ಥೆಯು ಸುದ್ದಿ ಓದುವ ಹೊಸ ಆ್ಯಂಕರ್ ಅನ್ನು ಪರಿಚಯಿಸಿದಾಗ, ಇಡೀ ಜಗತ್ತೇ ಅಚ್ಚರಿಪಟ್ಟರೆ, ಮಾಧ್ಯಮ ಲೋಕವೂ ಬೆರಗಾಗಿಬಿಟ್ಟಿತು.…