ಯುಟಿಎಸ್ ಆ್ಯಪ್: ಪ್ಲ್ಯಾಟ್‌ಫಾರ್ಮ್ ಟಿಕೆಟ್, ಜನರಲ್ ಟಿಕೆಟ್‌ಗೆ ಕ್ಯೂ ನಿಲ್ಲಬೇಕಿಲ್ಲ!
ದೇಶಾದ್ಯಂತ ಡಿಜಿಟಲ್ ಕ್ರಾಂತಿ ಆಗುವಾಗ ದೇಶದ ಅತಿದೊಡ್ಡ ಸಂಪರ್ಕ ಜಾಲವನ್ನು ಹೊಂದಿರುವ ರೈಲ್ವೇ ಇಲಾಖೆ ಕೂಡ ಅದಕ್ಕೆ ತಕ್ಕಂತೆ ಬದಲಾಗುತ್ತಾ ಬಂದಿದೆ. ಈಗಾಗಲೇ ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸುವಿಕೆಗೆ ಐಆರ್‌ಸಿಟಿಸಿ ಎಂಬ ಜಾಲತಾಣ ಮತ್ತು ಅದರ ಆ್ಯಪ್‌ಗಳು ಪ್ರಯಾಣಿಕರ ನೆರವಿಗೆ ಬರುತ್ತಿವೆ. ಭಾರತೀಯ ರೈಲ್ವೇ ಆಹಾರ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ತನ್ನ ಅಧಿಕೃತ IRCTC Rail Connect ಎಂಬ ಅಧಿಕೃತ ಆ್ಯಪ್ ಅಷ್ಟೇ ಅಲ್ಲದೆ, ಇತರರು ಕೂಡ ಅದನ್ನೇ ಹೋಲುವ ಸಾಕಷ್ಟು ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ ಮತ್ತು ಅದರ…