ಆ್ಯಪ್ ಅಳವಡಿಸಿಕೊಳ್ಳುವ ಮುನ್ನ ಎಚ್ಚರಿಕೆ ವಹಿಸಿ
ಡಿಜಿಟಲ್ ಕ್ರಾಂತಿಯ ಈ ಯುಗದಲ್ಲಿ ಪ್ರೈವೆಸಿ ಅಥವಾ ನಮ್ಮ ಸ್ವಂತ ವಿಷಯಗಳ ಕುರಿತಾದ ಗೌಪ್ಯತೆ (ಖಾಸಗಿ ಮಾಹಿತಿಯ ರಕ್ಷಣೆ) ಎಂಬುದರ ಬಗ್ಗೆ ಈಗ ಜಾಗೃತಿ ಮೂಡಿದೆ. ಆದರೂ ನಾವೇ ತಪ್ಪು ಮಾಡುತ್ತಿದ್ದೇವೆ. ವಿಶೇಷವಾಗಿ ಈಗಿನ ಮೊಬೈಲ್ ಫೋನ್‌ಗಳಲ್ಲಿ ಮತ್ತೊಬ್ಬರಿಗೆ ಇಷ್ಟವಾದ, ಭಾರಿ ಸದ್ದು ಮಾಡುತ್ತಿರುವ ಆ್ಯಪ್ ಅಂತ ನಾವು ಕೂಡ ಇನ್‌ಸ್ಟಾಲ್ ಮಾಡಿಕೊಂಡಿರುತ್ತೇವೆ. ನಮಗೆ ಬೇಕುಬೇಕಾದ ಮತ್ತು ಬೇಡವಾದ ಆ್ಯಪ್‌ಗಳನ್ನೂ ಅಳವಡಿಸಿಕೊಂಡು, ಅದು ಕೇಳಿದ ಅನುಮತಿಗಳಿಗೆಲ್ಲಾ (ಹೆಚ್ಚಿನ ಸಮಯದಲ್ಲಿ ಅದು ಏನನ್ನು ಕೇಳುತ್ತಿದೆ ಎಂಬುದನ್ನು ಓದದೆಯೇ) ‘ಯಸ್,…