iPhone ನಲ್ಲಿ ಕನ್ನಡ ಕೀಬೋರ್ಡ್ ಅಳವಡಿಸಿಕೊಳ್ಳುವುದು ಹೇಗೆ?
ಆ್ಯಪಲ್ ಬಳಕೆದಾರರಿಗೆ (ಆ್ಯಪಲ್ 5ಎಸ್ ನಂತರದ ಮೊಬೈಲ್ ಫೋನ್) ಈಗ ಕನ್ನಡ ಕೀಬೋರ್ಡ್ ಲಭ್ಯವಾಗಿದೆ ಎಂಬುದನ್ನು ಕಳೆದ ವಾರ ಓದಿದ್ದೀರಿ. ಇದು ಪ್ರಕಟವಾದ ಬಳಿಕ ಅದನ್ನು ಹೇಗೆ ಇನ್‌ಸ್ಟಾಲ್ ಮಾಡಿಕೊಳ್ಳುವುದು, ಏನು ಮಾಡಬೇಕು ಅಂತೆಲ್ಲ ಓದುಗರು ಫೋನ್/ಇಮೇಲ್ ಮೂಲಕ ಕೇಳಿಕೊಂಡಿದ್ದಾರೆ. ಆ್ಯಪಲ್ ಐಫೋನ್ 8 ಆವೃತ್ತಿ ಇತ್ತೀಚೆಗೆ ಬಿಡುಗಡೆಯಾದ ಬಳಿಕ ಹಳೆಯ ಆವೃತ್ತಿಗಳ ಬೆಲೆಯೂ ಇಳಿಕೆಯಾಗಿರುವುದರಿಂದ ಹೆಚ್ಚಿನವರು ಆ್ಯಪಲ್ ಐಫೋನ್‌ಗಳ ಒಡೆತನ ಹೊಂದಿ ಹೆಮ್ಮೆ ಪಟ್ಟುಕೊಂಡಿದ್ದಾರಾದರೂ, ಕನ್ನಡ ಕೀಬೋರ್ಡ್ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದರು. ಅದಕ್ಕೀಗ ಆ್ಯಪಲ್‌ನ ಹೊಸ…