iOS 12: ಫೋನ್ ಗೀಳು ಕಡಿಮೆ ಮಾಡಲು ‘ಸ್ಕ್ರೀನ್ ಟೈಮ್’ ಮದ್ದು
ಆ್ಯಪಲ್ ಇತ್ತೀಚೆಗೆ ಅತ್ಯಾಧುನಿಕವಾದ ಕಾರ್ಯಾಚರಣಾ ವ್ಯವಸ್ಥೆ ಐಒಎಸ್ -12 ಎಲ್ಲ ಸಾಧನಗಳಿಗೂ ಬಿಡುಗಡೆ ಮಾಡಿದೆ. ಐಫೋನ್ 5ಎಸ್ ಹಾಗೂ ನಂತರದ ಮಾಡೆಲ್‌ಗಳಿಗೆ ಇದರ ಅಪ್‌ಡೇಟ್ ಭಾರತದಲ್ಲೂ ಲಭ್ಯ. ಹಳೆಯ ಸಮಸ್ಯೆಗಳು ಐಒಎಸ್ 12ರಲ್ಲಿ ಪರಿಹಾರ ಕಂಡಿವೆ ಮತ್ತು ಹೊಸದಾಗಿ ಅನಿಮೋಜಿ, ಮೆಮೋಜಿ ಎಂಬ ವೈಯಕ್ತಿಕ ಅವತಾರ, ನೋಟಿಫಿಕೇಶನ್‌ಗಳ ಗುಚ್ಛ, ಕಾರ್ಯನಿರ್ವಹಣೆಯಲ್ಲಿ ಸುಧಾರಣೆ ಜತೆಗೆ ಕೆಲವೊಂದು ಅತ್ಯುಪಯುಕ್ತ ವೈಶಿಷ್ಟ್ಯಗಳೂ ಸೇರ್ಪಡೆಯಾಗಿವೆ. ತಿಂಗಳ ಕಾಲ ಬಳಸಿದ ಬಳಿಕ ನನ್ನ ಗಮನಕ್ಕೆ ಬಂದ ಪ್ರಮುಖ ವೈಶಿಷ್ಟ್ಯಗಳು ಇಲ್ಲಿವೆ. ಕಾರ್ಯಕ್ಷಮತೆ: ಐಫೋನ್ 5ಎಸ್…