ಆಂಡ್ರಾಯ್ಡ್ ಫೋನ್‌ನಲ್ಲಿ ಆ್ಯಪ್ ಅಳವಡಿಸಿಕೊಳ್ಳುವ ಮೊದಲು ಇದನ್ನು ಓದಿ!
ವಾಟ್ಸ್ಆ್ಯಪ್‌ಗೆ ಸ್ಫರ್ಧೆಯೊಡ್ಡಲು ಪತಂಜಲಿ ಸಂಸ್ಥೆ ಹೊರತಂದಿರುವ ಕಿಂಭೋ ಎಂಬ ಆ್ಯಪ್ ಬಂದಿದ್ದು, ಮಾಯವಾಗಿದ್ದು ಮತ್ತು ಅದರ ಹೆಸರಲ್ಲಿ ಸಾಕಷ್ಟು ನಕಲಿ ಆ್ಯಪ್‌ಗಳು ಬಂದು ನಮ್ಮ ಖಾಸಗಿ ಮಾಹಿತಿಯನ್ನು ಕಬಳಿಸಲು ಪ್ರಯತ್ನಿಸಿರುವ ಬಗ್ಗೆ ಕಳೆದ ವಾರ ಬರೆದಿದ್ದೆ. ಆಂಡ್ರಾಯ್ಡ್ ಸಾಧನಗಳಿಗೆ ಗೂಗಲ್‌ನ ಪ್ಲೇ ಸ್ಟೋರ್‌ನಲ್ಲಿ ಲಕ್ಷಾಂತರ ಆ್ಯಪ್‌ಗಳು ಲಭ್ಯವಿದ್ದು, ಇವುಗಳಲ್ಲಿ ಉತ್ತಮವಾದುದನ್ನು ಆಯ್ಕೆ ಮಾಡಿಕೊಳ್ಳುವುದು ತ್ರಾಸದಾಯಕ ಕೆಲಸ. ಆ್ಯಪಲ್ ಸಾಧನಗಳಿಗೆ ಹೋಲಿಸಿದರೆ, ಗೂಗಲ್ ಪ್ಲೇ ಸ್ಟೋರ್‌ಗೆ ಡೆವಲಪರ್‌ಗಳು ಆ್ಯಪ್‌ಗಳನ್ನು ತಯಾರಿಸಿ ಸೇರ್ಪಡೆಗೊಳಿಸುವುದು ತುಂಬಾ ಸುಲಭವಾಗಿರುವುದರಿಂದಾಗಿ ಇಲ್ಲಿ ಇಷ್ಟೊಂದು ಆ್ಯಪ್‌ಗಳ…