ಆಂಡ್ರಾಯ್ಡ್ ಪೈ ಕಾರ್ಯಾಚರಣಾ ಆವೃತ್ತಿಯ ಒನ್‌ಪ್ಲಸ್ 6ಟಿ ಭಾರತದಲ್ಲಿ ಬಿಡುಗಡೆ

ಅವಿನಾಶ್ ಬಿ, ಹೊಸದಿಲ್ಲಿ: ಭಾರತದಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್ ವಲಯದಲ್ಲಿ ನಂ.1 ಸ್ಥಾನಕ್ಕೇರಿರುವ ಚೀನಾದ ಒನ್‌ಪ್ಲಸ್, ತನ್ನ ಅತ್ಯಾಧುನಿಕ ಫ್ಲ್ಯಾಗ್‌ಶಿಪ್ ಫೋನ್ ‘ಒನ್‌ಪ್ಲಸ್ 6ಟಿ’ ಮಾದರಿಯನ್ನು ಮಂಗಳವಾರ ರಾತ್ರಿ ಇಲ್ಲಿನ ಇಂದಿರಾ ಗಾಂಧಿ ಸ್ಟೇಡಿಯಂನ KDJW ಅಂಗಣದಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಭಾರತೀಯ ಗ್ರಾಹಕರಿಗಾಗಿ ಬಿಡುಗಡೆಗೊಳಿಸಿತು. ಭಾರತೀಯ ಮಾರುಕಟ್ಟೆಗೆ Oneplus 6T ಅನಾವರಣಗೊಳಿಸಿದ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಸಹ ಸಂಸ್ಥಾಪಕ ಕಾರ್ಲ್ ಪೈ, ಹಿಂದಿನ ಒನ್‌ಪ್ಲಸ್ 6 ಫೋನ್‌ಗಳಿಗೂ ಬುಧವಾರದಿಂದ ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಕ್ಯಾಮೆರಾದ ಹೊಸ ವೈಶಿಷ್ಟ್ಯವು…

Rate this:

ಹಗುರ, ಆಕರ್ಷಕ, ಕ್ಯಾಮೆರಾ ಕೇಂದ್ರಿತ Vivo V11 Pro

ಚೀನಾದ ಟೆಲಿಫೋನ್ ಕಂಪನಿಗಳಲ್ಲಿ ಹೆಚ್ಚು ಸದ್ದು ಮಾಡುತ್ತಿರುವವುಗಳಲ್ಲಿ ಪ್ರಮುಖವಾದದ್ದು ವಿವೊ. ಇದರ ವಿ ಸರಣಿಯ ಫೋನ್‌ಗಳು ಭಾರತದಲ್ಲಿ ಆಕರ್ಷಣೆ ಹೆಚ್ಚಿಸಿಕೊಂಡಿದ್ದು, ಇದೀಗ ಸ್ಕ್ರೀನ್ ಮೇಲೆಯೇ ಫಿಂಗರ್‌ಪ್ರಿಂಟ್ ಅನ್‌ಲಾಕ್ ವ್ಯವಸ್ಥೆ ಇರುವ ಮೊದಲ ಫೋನ್ ಬಂದಿದೆ. ಅದುವೇ ವಿವೋ ವಿ11 ಪ್ರೋ (Vivo V11 Pro). 26 ಸಾವಿರ ರೂ. ಒಳಗಿನ ಲೇಟೆಸ್ಟ್ ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಯಿರುವ ಈ ಫೋನ್ ಹೇಗಿದೆ? ನೋಡೋಣ ಬನ್ನಿ. ಇದು ಸೆಲ್ಫೀಯನ್ನೇ ಗುರಿಯಾಗಿರಿಸಿಕೊಂಡು ಬಂದಿರುವ ಫೋನ್ ಎನ್ನಲಡ್ಡಿಯಿಲ್ಲ. ಬೆಲೆ ನೋಡಿದರೆ ಮಧ್ಯಮ ವರ್ಗದವರಿಗೆ…

Rate this:

ಕ್ಯಾಮೆರಾ ಕೇಂದ್ರಿತ Tecno Camon i 2x ಹೇಗಿದೆ?

ಹಾಂಕಾಂಗ್ ಮೂಲದ ಟ್ರಾನ್ಸಿಯಾನ್ ಕಂಪನಿಯು ಭಾರತದಲ್ಲಿ ನಿಧಾನವಾಗಿ ತನ್ನ ಪ್ರಭಾವ ಬೀರಲಾರಂಭಿಸಿದೆ. ಅವರ ಟೆಕ್‌ನೋ ಬ್ರ್ಯಾಂಡ್‌ನ ಕ್ಯಾಮಾನ್ ಸರಣಿಯ ಫೋನ್‌ಗಳು ಹೆಸರಿನಲ್ಲೇ ಇರುವಂತೆ ಕ್ಯಾಮೆರಾಕ್ಕೆ ಹೆಚ್ಚು ಒತ್ತು ನೀಡುವ ಸ್ಮಾರ್ಟ್ ಫೋನ್‌ಗಳು. ಇದರ ಕ್ಯಾಮಾನ್ ಐ 2ಎಕ್ಸ್ ಎಂಬ ಫೋನ್ ಹೇಗಿದೆ? ಮೊದಲು ಇದರ ವಿಶೇಷತೆ ಬಗ್ಗೆ ನೋಡೋಣ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ (13 ಹಾಗೂ 5 ಮೆಗಾಪಿಕ್ಸೆಲ್) ಇದೆ ಹಾಗೂ ಸೆಲ್ಫೀ ಕ್ಯಾಮೆರಾ ಎಐ (ಕೃತಕ ಬುದ್ಧಿಮತ್ತೆ) ಆಧಾರಿತ 16 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಜತೆಗೆ…

Rate this:

OnePlus 6 ಹೇಗಿದೆ?: ಪ್ರೀಮಿಯಂ ಲುಕ್, ಸ್ನ್ಯಾಪ್‌ಡ್ರ್ಯಾಗನ್ ಲೇಟೆಸ್ಟ್ ಪ್ರೊಸೆಸರ್

ಇತ್ತೀಚೆಗಷ್ಟೇ ಚೀನಾ ಮೂಲದ ಒನ್ ಪ್ಲಸ್ ಸ್ಮಾರ್ಟ್ ಫೋನ್ ಭಾರತದಲ್ಲಿ ಪ್ರೀಮಿಯಂ ಫೋನ್‌ಗಳ ವಿಭಾಗದಲ್ಲಿ ನಂ.1 ಪಟ್ಟಕ್ಕೇರಿದೆ. ಇದಕ್ಕೆ ಕಾರಣ, ಕಡಿಮೆ ಸಂಖ್ಯೆಯ ಮಾಡೆಲ್‌ಗಳನ್ನು ಮಾರುಕಟ್ಟೆಗೆ ಬಿಟ್ಟಿರುವುದು, ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿರುವುದು ಮತ್ತು ಭಾರತೀಯ ಬಳಕೆದಾರರ ಧ್ವನಿಗೆ ಓಗೊಟ್ಟಿರುವುದು ಎಂದು ಒನ್‌ಪ್ಲಸ್ ಸಂಸ್ಥಾಪಕ ಹಾಗೂ ಸಿಇಒ ಆಗಿರುವ ಪೀಟ್ ಲಾವು ಹೇಳಿದ್ದರು. ಇಂಥ ಕಂಪನಿಯ ಒನ್ ಪ್ಲಸ್ 6 ಮಾಡೆಲನ್ನು ಒಂದು ತಿಂಗಳ ಕಾಲ ಬಳಕೆ ಮಾಡಿದ ಬಳಿಕ ಅದು ಹೇಗಿದೆ? ಎಂಬ ವಿವರ ಇಲ್ಲಿದೆ. ಇದು…

Rate this:

ಅದ್ಭುತ ಬ್ಯಾಟರಿ, ಅದ್ಭುತ ಸೆಲ್ಫೀ ನೀಡುವ ಬಜೆಟ್ ಫೋನ್ ಇನ್ಫಿನಿಕ್ಸ್ ನೋಟ್ 5

ಚೀನಾದ ಮೊಬೈಲುಗಳು ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಭಾರಿ ಪ್ರಭಾವ ಬೀರುತ್ತಿರುವಂತೆಯೇ, ಬೇರೆ ದೇಶಗಳ ಕೆಲವು ಫೋನ್‌ಗಳು ಕೂಡ ಸದ್ದಿಲ್ಲದೆ ತಮ್ಮದೇ ಆದ ಮಾರುಕಟ್ಟೆ ಸ್ಥಾಪಿಸತೊಡಗಿವೆ. ಅಂಥದ್ದರಲ್ಲಿ ಹಾಂಕಾಂಗ್ ಮೂಲದ ಟ್ರಾನ್ಸ್‌ಶನ್ ಕಂಪನಿಯೂ ಒಂದು. ಇದರ ಭಾಗವೇ ಆಗಿರುವ ಇನ್ಫಿನಿಕ್ಸ್ ಮೊಬಿಲಿಟಿ ಕಂಪನಿಯು ಹೊಚ್ಚ ಹೊಸ ಆಂಡ್ರಾಯ್ಡ್ ಒನ್ ಆವೃತ್ತಿಯ ಇನ್ಫಿನಿಕ್ಸ್ ನೋಟ್ 5 (Infinix Note 5) ಬಿಡುಗಡೆ ಮಾಡಿದ್ದು, ಅದ್ಭುತ ಬ್ಯಾಟರಿ ಸಾಮರ್ಥ್ಯ ಮತ್ತು ಅತ್ಯುತ್ತಮ ಸೆಲ್ಫೀ ಫೋಟೋಗಳಿಗಾಗಿ ಗಮನ ಸೆಳೆಯಿತು. ಸುಲಭವಾಗಿ ಹೇಳುವುದಾದರೆ,…

Rate this:

ಐಫೋನ್ ಅಥವಾ ಆಂಡ್ರಾಯ್ಡ್ ಫೋನ್: ಯಾವುದು ಬೆಸ್ಟ್?

ಐಫೋನ್ 8, 8 ಪ್ಲಸ್, ಎಕ್ಸ್ ಆವೃತ್ತಿಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ. ಇಂಥ ಸಮಯದಲ್ಲಿ ಆ್ಯಪಲ್‌ನ ಹಳೆಯ ಆವೃತ್ತಿಯ ಫೋನ್‌ಗಳು ಈಗ ಆಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆಯ ಉತ್ತಮ ಫೋನ್‌ಗಳ ಬೆಲೆಗೇ ಲಭ್ಯವಾಗತೊಡಗಿವೆ. ಹೀಗಿರುವುದರಿಂದಾಗಿ, ಆಂಡ್ರಾಯ್ಡ್ ಫೋನ್ ತೆಗೆದುಕೊಳ್ಳುವುದು ಒಳ್ಳೆಯದೇ ಅಥವಾ ಪ್ರತಿಷ್ಠೆಯ ಪ್ರಶ್ನೆಯೂ ಆಗಿರುವ ಆ್ಯಪಲ್ ಐಫೋನ್ ಖರೀದಿಸುವುದೋ ಅಂತ ಹಲವರು ನನ್ನಲ್ಲಿ ವಿಚಾರಿಸಿದ್ದಾರೆ. ಇಂಥವರ ಸಂದೇಹಗಳಿಗೆ ಉತ್ತರಿಸುವ ಪ್ರಯತ್ನ. ಮೊದಲನೆಯದಾಗಿ ಹೇಳುವುದಿದ್ದರೆ, ಆಂಡ್ರಾಯ್ಡ್ ಮತ್ತು ಐಫೋನ್ ಕಾರ್ಯಾಚರಣಾ ವ್ಯವಸ್ಥೆಗಳು ತೀರಾ ಅನ್ನುವಷ್ಟೇನೂ ಭಿನ್ನವಾಗಿಲ್ಲ. ಆದರೆ, ಪ್ರಮುಖ ವ್ಯತ್ಯಾಸ…

Rate this: