ಆಧಾರ್ ಇದೆಯೇ? ಹತ್ತೇ ನಿಮಿಷದಲ್ಲಿ ಉಚಿತವಾಗಿ PAN ಕಾರ್ಡ್ ಪಡೆಯಿರಿ
ಆಧಾರ್ ಕಾರ್ಡ್ ಹಾಗೂ PAN (ವೈಯಕ್ತಿಕ ಗುರುತು ಸಂಖ್ಯೆ) ಕಾರ್ಡ್‌ಗಳನ್ನು ಲಿಂಕ್ ಮಾಡಲು ಮಾ.31ರ ಗಡುವು ಇದೆ ಮತ್ತು ಈಗಿನ ಕೊರೊನಾ ವೈರಸ್ ಗದ್ದಲದಲ್ಲಿ ಅದರ ದಿನಾಂಕ ವಿಸ್ತರಣೆಯಾಗಲೂಬಹುದು. ಇದುವರೆಗೆ ಪ್ಯಾನ್ ಕಾರ್ಡ್ ಮಾಡಿಸದೇ ಇದ್ದವರಿಗೆ, ಮನೆಯಲ್ಲಿರುವ ಪ್ರಾಪ್ತ ವಯಸ್ಕ (18 ವರ್ಷ ಮೇಲ್ಪಟ್ಟ) ಮಕ್ಕಳಿಗೂ, ಯಾವುದೇ ಖರ್ಚಿಲ್ಲದೆ ಪ್ಯಾನ್ ಕಾರ್ಡ್ ಮಾಡಿಸುವ ವಿಧಾನವೊಂದನ್ನು ಭಾರತ ಸರ್ಕಾರ ಒದಗಿಸಿದೆ. ಇದಕ್ಕೆ ಬೇಕಾಗಿರುವುದು ಪ್ಯಾನ್ ಕಾರ್ಡ್ ಬೇಕಾಗಿರುವವರ ಹೆಸರಿನ ಆಧಾರ್ ಕಾರ್ಡ್, ಇಂಟರ್ನೆಟ್ ಸಂಪರ್ಕ ಹಾಗೂ ಆಧಾರ್ ಕಾರ್ಡ್…