ನೋಕಿಯಾ ಬ್ರ್ಯಾಂಡ್ ತೆರೆಮರೆಗೆ…. ಒಂದು ಹಿನ್ನೋಟ

ಟೆಕ್-Know ಲೇಖನ: ನವೆಂಬರ್ 3, ವಿಜಯ ಕರ್ನಾಟಕ : ನೆಟ್ಟಿಗನೋಕಿಯಾ ಫೋನ್‌ಗಳಿಗೂ ಭಾರತಕ್ಕೂ ತಾದಾತ್ಮ್ಯ ನಂಟು. ಹಳ್ಳಿ ಹಳ್ಳಿಗೂ ನೋಕಿಯಾ ಚಿರಪರಿಚಿತ. ಫಿನ್ಲೆಂಡ್ ಎಂಬ ಪುಟ್ಟ ದೇಶದಿಂದ ಜಗತ್ತಿನಾದ್ಯಂತ ತನ್ನ ಸುಂದರ, ಸುದೃಢ ಮೊಬೈಲ್ ಫೋನ್‌ಗಳ ಮೂಲಕ ಕನಸುಗಳನ್ನು ಬೆಸೆದ, ಅತ್ಯುತ್ತಮ ಬ್ಯಾಟರಿ ಸಾಮರ್ಥ್ಯಕ್ಕಾಗಿ ಈಗಲೂ ಜನ ಮಾನಸದಲ್ಲಿ ಸ್ಥಾನ ಪಡೆದಿರುವ ನೋಕಿಯಾ, ಈಗ 730 ಶತಕೋಟಿ ಡಾಲರ್ ವಹಿವಾಟಿನ ಮೂಲಕ ಮೈಕ್ರೋಸಾಫ್ಟ್ ತೆಕ್ಕೆಯೊಳಗೆ ಸೇರಿಕೊಂಡಿದೆ. ಭಾರತದಲ್ಲಿ ಫೋನ್‌ಗಳು ತಯಾರಾಗುತ್ತಿರುವ ಚೆನ್ನೈಯ ಅದರ ಘಟಕವನ್ನೂ ಮುಚ್ಚಲಾಗುತ್ತಿದೆ. ನೋಕಿಯಾ…

Rate this: