Memory Card ಖರೀದಿಸುವ ಮುನ್ನ ನೀವು ತಿಳಿದಿರಬೇಕಾದ ವಿಚಾರಗಳು

‘ಅಂಗೈಯಲ್ಲಿ ಜಗತ್ತು’ ಎಂಬುದಕ್ಕೆ ಸ್ಮಾರ್ಟ್ ಫೋನ್‌ಗಳು ಪರ್ಯಾಯವಾಗಿಬಿಟ್ಟಿವೆ ಮತ್ತು ಅವುಗಳಲ್ಲಿರುವ ಅತ್ಯಾಧುನಿಕ ಕ್ಯಾಮೆರಾಗಳ ಮೂಲಕ ಈಗ ಎಲ್ಲರೂ ಫೋಟೋಗ್ರಾಫರುಗಳೇ ಆಗಿಬಿಟ್ಟಿದ್ದಾರೆ. ಇದರ ಜತೆಗೆ ಸೆಲ್ಫೀ, ಲೈವ್ ವೀಡಿಯೋ ಇತ್ಯಾದಿತ್ಯಾದಿ. ಹೀಗಿರುವುದರಿಂದ ಆಡಿಯೋ, ವೀಡಿಯೋ, ಫೋಟೋ ಫೈಲುಗಳನ್ನು ಸೇವ್ ಮಾಡಿಟ್ಟುಕೊಳ್ಳಲು ಸ್ಮಾರ್ಟ್‌ಫೋನ್‌ಗಳಲ್ಲಿ ಇರುವ ಜಾಗ ಸಾಲುತ್ತಿಲ್ಲ. ಈ ಫೈಲುಗಳನ್ನು ಪದೇ ಪದೇ ಕಂಪ್ಯೂಟರಿಗೆ ವರ್ಗಾಯಿಸಿ ಫೋನಲ್ಲಿ ಸ್ಥಳಾವಕಾಶ ಮಾಡಿಕೊಳ್ಳುವುದು ಕಷ್ಟದ ಕೆಲಸ. ಈ ಸಮಸ್ಯೆ ಪರಿಹಾರಕ್ಕೆ ಬಂದವು ಎಕ್ಸ್‌ಟರ್ನಲ್ ಮೆಮೊರಿ ಕಾರ್ಡುಗಳು. ಫೋನ್, ಕ್ಯಾಮೆರಾ ಅಥವಾ ಯಾವುದೇ ಅನ್ಯ…

Rate this:

ಆಧಾರ್‌ಗೆ ಮೊಬೈಲ್, ಪ್ಯಾನ್ ಕಾರ್ಡ್ ಲಿಂಕ್: OTP ಕೊಟ್ಟು ಮೋಸ ಹೋಗದಿರಿ

ಜನಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ (ವಿಜಯ ಕರ್ನಾಟಕ ಅಂಕಣ): 06 ಜೂನ್ 2017 ಅವಿನಾಶ್ ಬಿ. ಆಧಾರ್ ಕಾರ್ಡ್ ಎಂಬುದು ನಮ್ಮ ಜೀವನದಲ್ಲಿ ಎಷ್ಟು ಹಾಸುಹೊಕ್ಕಾಗಿದೆ ಎಂದರೆ, ಇದು ಕೇವಲ ನಮ್ಮ ಗುರುತನ್ನು ತಿಳಿಯಪಡಿಸುವ ಕಾರ್ಡ್ ಆಗಿ ಮಾತ್ರವೇ ಉಳಿದಿಲ್ಲ. ಜತೆಗೆ, ಸರಕಾರಿ ಸೇವಾ ಸೌಲಭ್ಯಗಳನ್ನು ಪಡೆಯುವುದು, ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವುದು, ಬ್ಯಾಂಕ್ ಖಾತೆ, ಪಾಸ್‌ಪೋರ್ಟ್… ಹೀಗೆ ಎಲ್ಲ ದಾಖಲೆಗಳಿಗೂ ಮೂಲಾಧಾರವಾಗುತ್ತಿದೆ. ಈಗಂತೂ ಹೊಸದಾಗಿ ಸಿಮ್ ಕಾರ್ಡ್ ಖರೀದಿಸಲು ಇದು ಬೇಕೇ ಬೇಕು. ದೊಡ್ಡ ಮೌಲ್ಯದ ಹಳೆಯ…

Rate this:

ಆ್ಯಪ್ ಜತೆಗೆ ಒಂದು ದಿನ

ಕಾಮಿಸಿದ್ದನ್ನು ನೀಡುವ ಕಾಮಧೇನುವಾಗಿ, ಕಲ್ಪಿಸಿದ್ದನ್ನು ಧುತ್ತನೇ ಮುಂದಿಡುವ ಕಲ್ಪವೃಕ್ಷವಾಗಿ, ಚಿಂತಿಸಿದ್ದನ್ನು ಕೊಡುವ ಚಿಂತಾಮಣಿಯಾಗಿ ಅಭೀಪ್ಸಿತಾರ್ಥ ಸಿದ್ಧಿದಾಯಕವಾಗಿ, ಮನೋವೇಗದಿಂದ ಕೆಲಸ ಈಡೇರಿಸಬಲ್ಲ ಸಾಮರ್ಥ್ಯ ತಂತ್ರಜ್ಞಾನಕ್ಕಿದೆ. ಆ್ಯಪ್ ಅಂತ ಸ್ವೀಟಾಗಿ, ಕ್ಯೂಟಾಗಿ ಎಲ್ಲರ ನಾಲಿಗೆಯಲ್ಲಿ ಕುಣಿದಾಡುತ್ತಿರುವ ಈ ಅಪ್ಲಿಕೇಶನ್‌ಗಳೆಂಬ ಭ್ರಾಮಕ ಜಗತ್ತಿನಲ್ಲಿ ಏನಿದೆ, ಏನಿಲ್ಲ? ನಮ್ಮೊಂದು ದಿನದ ಬದುಕಿನ ಬಹುತೇಕ ಎಲ್ಲ ಕ್ಷಣಗಳನ್ನೂ ಈ ಆ್ಯಪ್‌ಗಳೇ ನಿಭಾಯಿಸಬಹುದು. ನಾವು ನೀವು ಸಾಮಾನ್ಯವಾಗಿ ಬಳಸುವ ಫೇಸ್‌ಬುಕ್, ವಾಟ್ಸಾಪ್, ಹ್ಯಾಂಗೌಟ್ಸ್ ಮುಂತಾದವನ್ನು ಹೊರಗಿಟ್ಟು ಇನ್ನೂ ಕೆಲವು ಆ್ಯಪ್‌ಗಳು ನಮ್ಮನ್ನು ಹೇಗೆ ಮುನ್ನಡೆಸುತ್ತವೆ? ಹೀಗೆ…

Rate this:

ಸೇವೆ ಸರಿಯಿಲ್ಲವೇ? ಮೊಬೈಲ್ ನಂಬರ್ ಅದೇ ಇರಲಿ, ಸೇವಾ ಕಂಪನಿಯನ್ನೇ ಬದಲಿಸಿ

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-18 (ಡಿಸೆಂಬರ್ 24, 2012) ನಿಮ್ಮ ಮೊಬೈಲ್ ಆಪರೇಟರ್‌ರ ಸೇವೆ ಸರಿ ಇಲ್ಲ ಅಥವಾ ನೀವು ಇರುವ ಊರಿನಲ್ಲಿ ಸರಿಯಾಗಿ ಮೊಬೈಲ್ ಸಿಗ್ನಲ್ ಸಿಗುತ್ತಿಲ್ಲ, ಬೇರೆ ಕಂಪನಿಯ ಸಿಮ್ ತೆಗೆದುಕೊಂಡರೆ ಮೊಬೈಲ್ ನಂಬರ್ ಕೂಡ ಬದಲಾಗುತ್ತದೆ ಎಂದು ಇನ್ನು ಚಿಂತಿಸಬೇಕಾಗಿಲ್ಲ. ನೀವೀಗ ಆಪರೇಟರರನ್ನೇ ಬದಲಾಯಿಸಬಹುದು. ಇದು ಸುಲಭ ಮತ್ತು ತ್ವರಿತ. ಭಾರತ ಸರಕಾರವು ಈ ಒಳ್ಳೆಯ ಸೌಕರ್ಯವನ್ನು ಒದಗಿಸಿಕೊಟ್ಟಿರುವುದು ಬಹುಶಃ ಗ್ರಾಮೀಣ ಭಾಗಗಳಲ್ಲಿ ಇರುವವರಿಗೆ ಗೊತ್ತಿರಲಾರದು. ಗೊತ್ತಿದ್ದರೂ ಹೇಗೆ ಮಾಡುವುದು ಎಂಬ ಮಾಹಿತಿ…

Rate this:

ನಿಮ್ಮ ಫೋಟೋಗಳನ್ನು ತಿದ್ದಲು ಸರಳ, ಉಚಿತ ತಂತ್ರಾಂಶಗಳು

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-16 (ಡಿಸೆಂಬರ್ 10, 2012) ನಿಮ್ಮ ಬದುಕಿನ ಸುಂದರ ಕ್ಷಣಗಳನ್ನು ಡಿಜಿಟಲ್ ಕ್ಯಾಮರಾದಲ್ಲಿ ಸೆರೆಹಿಡಿದ್ದೀರಿ. ಒಂದೊಂದು ಫೋಟೋ ಕೂಡ 1 ಎಂಬಿ ಅಥವಾ ಹೆಚ್ಚು ಗಾತ್ರವನ್ನು ಹೊಂದಿರುತ್ತವೆ. ಇದನ್ನೇ ನಿಮ್ಮ ಬ್ಲಾಗಿಗೆ ಅಥವಾ ವೆಬ್‌ಸೈಟಿಗೆ ಏರಿಸಿಬಿಟ್ಟರೆ, ನಿಮ್ಮ ಡೇಟಾ ಶುಲ್ಕವನ್ನು (ಇಂಟರ್ನೆಟ್ ಸಂಪರ್ಕದ ಪ್ಲ್ಯಾನ್‌ಗಳನ್ನು ಅವಲಂಬಿಸಿ) ಅದು ಹೀರುವುದು ಖಂಡಿತಾ. ಇದಕ್ಕಾಗಿ ನೀವು ನಿಮ್ಮ ವೆಬ್‌ಸೈಟಿಗೆ ಅಪ್‌ಲೋಡ್ ಮಾಡುವ ಫೋಟೋಗಳ ಗಾತ್ರವನ್ನು ಕಿರಿದುಗೊಳಿಸಿದರೆ ಡೇಟಾ ವೆಚ್ಚವನ್ನೂ ತಗ್ಗಿಸಬಹುದು, ಶೀಘ್ರವೇ ಅಪ್‌ಲೋಡ್ ಮಾಡುವುದಕ್ಕೂ ಅನುಕೂಲ.…

Rate this:

ಇಮೇಲ್‌ನಲ್ಲಿ ಸ್ಪ್ಯಾಮ್: ತಡೆಯುವುದೆಂತು?

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-14 (ನವೆಂಬರ್ 26, 2012)  ಅಂತರಜಾಲದಲ್ಲಿ ತೊಡಗಿಸಿಕೊಂಡವರಿಗೆ ಇ-ಮೇಲ್ ಎಂಬುದೊಂದು ಐಡೆಂಟಿಟಿ. ಅದಿಲ್ಲದೆ ಯಾವುದೇ ವ್ಯವಹಾರಗಳೂ ಇಂದು ನಡೆಯುವುದೇ ಇಲ್ಲ ಎಂಬ ಪರಿಸ್ಥಿತಿಯಿದೆ. ಆನ್‌ಲೈನ್‌ನಲ್ಲಿ ಲಭ್ಯವಾಗುವ ಯಾವುದೇ ಸೇವೆಗಳನ್ನು ಬಳಸಬೇಕಿದ್ದರೆ, ಉದಾಹರಣೆಗೆ, ಉದ್ಯೋಗದ ಹುಡುಕಾಟಕ್ಕಾಗಿ, ಏನನ್ನಾದರೂ ಖರೀದಿಸುವುದಕ್ಕೆ, ನಿಮ್ಮ ಫೈಲುಗಳನ್ನು ಸುರಕ್ಷಿತವಾಗಿ ಇರಿಸುವುದಕ್ಕೆ, ಪತ್ರಿಕೆಗಳನ್ನು ಓದುವುದಕ್ಕೆ… ಹೀಗೆ ಎಲ್ಲದಕ್ಕೂ ಇ-ಮೇಲ್ ಬೇಕೇಬೇಕು. ಪರಿಸ್ಥಿತಿ ಹೀಗಿರುವಾಗ, ಯಾವುದೇ ಸೇವೆಯನ್ನು ಬಳಸಿದಾಗ ನೀವು ನಮೂದಿಸುವ ಇಮೇಲ್‌ಗಳನ್ನು ತಮ್ಮ ಉತ್ಪನ್ನಗಳ ಪ್ರಚಾರಕ್ಕಾಗಿ ಬಳಸಲಾಗುತ್ತದೆ ಅಥವಾ ವೈರಸ್ ತಂತ್ರಾಂಶವನ್ನು…

Rate this:

ಸರಕಾರಿ ಮಾನ್ಯತೆ ಪಡೆದ ಯುನಿಕೋಡ್, ಏನಿದು?

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-12 (ನವೆಂಬರ್ 12, 2012) ಹಲವಾರು ವರ್ಷಗಳ ನಿರೀಕ್ಷೆಯ ಬಳಿಕ ಮೊನ್ನೆ ಮೊನ್ನೆಯಷ್ಟೇ ಕರ್ನಾಟಕ ಸರಕಾರವು Unicode ಶಿಷ್ಟತೆಗೆ ಮಾನ್ಯತೆ ನೀಡಿತು ಎಂಬ ವರದಿಗಳನ್ನು ನೀವು ಇತ್ತೀಚೆಗಷ್ಟೇ ಓದಿದ್ದೀರಿ. ಏನಿದು ಅರ್ಥವಾಗಲಿಲ್ಲ ಅಂದುಕೊಂಡಿರಾ? ಕಂಪ್ಯೂಟರ್‌ನಲ್ಲಿ ಕನ್ನಡ ಓದುವವರಿಗೆ, ಬರೆಯುವವರಿಗೆ ಒಂದು ಸಮಸ್ಯೆಯ ಕುರಿತು ಗೊತ್ತು. ಅದೆಂದರೆ, ನೀವು ಏನೋ ಕನ್ನಡದಲ್ಲಿ ಟೈಪ್ ಮಾಡಿ ಇನ್ನೊಬ್ಬರಿಗೆ ಕಳುಹಿಸುತ್ತೀರಿ. ಅವರಿಗೆ ಅದನ್ನು ಓದಲಾಗುವುದಿಲ್ಲ ಅಥವಾ ತಿದ್ದಲು ಕೂಡ ಆಗುವುದಿಲ್ಲ. ಅಥವಾ ಪತ್ರಿಕೆಗಳಿಗೆ ಕಂಪ್ಯೂಟರಿನಲ್ಲಿ ಟೈಪ್ ಮಾಡಿ…

Rate this:

ಪ್ರಜಾಪ್ರಭುತ್ವದ ಆಧಾರ ಸ್ತಂಭಗಳು ಕೊಳೆಯಾಗಿವೆ ನೋಡಿದಿರಾ?

  ಅದೆಷ್ಟೋ ಕೋರ್ಟು ತೀರ್ಪುಗಳು ಇಡೀ ದೇಶದ ಜನತೆಯ ಜೀವನವನ್ನೇ ಬದಲಾಯಿಸಿದ ಪ್ರಕರಣಗಳು ನಮ್ಮ ಕಣ್ಣ ಮುಂದಿವೆ. ಭ್ರಷ್ಟರಿಗೆ, ಧನ ಮದವುಳ್ಳವರಿಗೆ, ಅಧಿಕಾರ ಮದವುಳ್ಳವರಿಗೆ ನ್ಯಾಯಾಲಯಗಳು ತಕ್ಕ ಪಾಠ ಕಲಿಸಿ ಜೈಲಿಗಟ್ಟುತ್ತಿರುವಾಗ ನಿಟ್ಟುಸಿರುಬಿಟ್ಟದ್ದು ರಾಜಕಾರಣಿಗಳೇನಲ್ಲ, ಇದೇ ಜನ ಸಾಮಾನ್ಯ ಮಾತ್ರ ಎಂಬುದನ್ನು ನಾವಿಲ್ಲಿ ಗಮನಿಸಬೇಕು. ಸರಕಾರದ ಪ್ರತೀ ಇಲಾಖೆಯಲ್ಲಿಯೂ ಲಂಚಕ್ಕೆ ಕೈಯೊಡ್ಡುವ ಸರಕಾರೀ ಬಕಾಸುರರಿರುವುದು ಸಾಮಾನ್ಯ, ಇವರಿಂದಾಗಿ ಬಸವಳಿದು ಹೈರಾಣಾಗಿರುವ ಬಡ ತೆರಿಗೆದಾರ ಪ್ರಜೆಗೆ ಬಹುಶಃ ಇತ್ತೀಚಿನ ದಿನಗಳಲ್ಲಿ ಎರಡು ವಿಷಯಗಳು ಅರಿವಿಗೆ ಬಂದಿದ್ದಿರಬಹುದು. ಒಂದನೆಯದು, ಲಂಚ…

Rate this:

ಶಾಲೆಗೆ ಹೊರಟೆವು ನಾವು….

ಶಾಲೆ ಶುರುವಾಯ್ತು! ಅಮ್ಮಂದಿರಿಗೆ ‘ಮಕ್ಕಳು ಚೆನ್ನಾಗಿ ಓದಲಪ್ಪಾ’ ಎಂಬ ತಳಮಳವಾದರೆ, ಅಪ್ಪಂದಿರಿಗೆ, ‘ಉಫ್, ಈ ಶಾಲೆಗಳೂ ಉದ್ಯಮಗಳಾಗುತ್ತಿವೆ, ಬೆಲೆ ಏರಿಕೆಯ ದಿನಗಳಲ್ಲಿ ಫೀಸು ಎಷ್ಟೂಂತ ಹೊಂದಿಸಲಿ. ಪೈಪೋಟಿಯ ಈ ಯುಗದಲ್ಲಿ ಶಾಲೆಗಳ ಫೀಸಿನಲ್ಲಿಯೇ ಪೈಪೋಟಿ ಇರುವಂತಿದೆ’ ಎಂಬ ಚಿಂತೆ. ಆದರೆ ಅದೇ, ಶಾಲೆಗೆ ಹೋಗಲೇಬೇಕಾದ ಮಕ್ಕಳಿಗೆ ಮಾತ್ರ, ಮನಸ್ಸಿನೊಳಗಿನ ತಳಮಳದ ನಡುವೆಯೇ ಹೊಸ ಗೆಳೆಯರು, ಹೊಸ ಪುಸ್ತಕ, ಹೊಸ ಪೆನ್ನು, ಹೊಸಾಹೊಸ ಡ್ರೆಸ್ಸು… ಇವುಗಳ ಕನಸು. ಬಿರು ಬೇಸಿಗೆ ಕಳೆದು, ಮಳೆಗಾಲ ಶುರುವಾಗುವುದರೊಂದಿಗೇ ಆರಂಭವಾಗುವ ಶಾಲೆಯ ದಿನಗಳಲ್ಲಿ…

Rate this: