ಜಯಲಲಿತಾ ಜೈಲಿಗೆ; ನಮಗೆ, ನಮ್ಮ ರಾಜಕಾರಣಿಗಳಿಗೆ ಪಾಠ ಇದೆ…

ಜಯಲಲಿತಾ ಜೈಲಿಗೆ ಹೋಗಿದ್ದು ಬಿಸಿಬಿಸಿ ಚರ್ಚೆಯ ಸಂಗತಿ; ಅದು ಕೂಡ ತಮಿಳುವಿರೋಧಿ ಸೆಂಟಿಮೆಂಟುಗಳು ಜಾಸ್ತಿ ಇರೋ ಬೆಂಗಳೂರಲ್ಲಿ… ಇಂತಹಾ ಪರಿಸ್ಥಿತಿಯಲ್ಲಿ ತಮಿಳುನಾಡಿನಿಂದ ಅದೆಷ್ಟು ಜನ ಇಲ್ಲಿ ಬಂದರು, ಜಯಲಲಿತಾರಿಗಾಗಿ ಅವರ ರಾಜ್ಯದಲ್ಲಿ ಅದೆಷ್ಟು ಮಂದಿ ಅತ್ತರು, ಅದೆಷ್ಟು ಮಂದಿ ಆತ್ಮಹತ್ಯೆ ಮಾಡಿಕೊಂಡರು ಹಾಗೂ ಹೃದಯಾಘಾತದಿಂದ ಸಾವನ್ನಪ್ಪಿದರು! ಯಾಕೆ ಹೀಗೆ, ಆಕೆ ಏನು ಮಾಡಿದ್ದರು… ನಮ್ಮ ರಾಜಕಾರಣಿಗಳಿಗಿಂತ ಜಯಾ ಹೇಗೆ ಭಿನ್ನ? ಈ ಪ್ರಸಂಗದಿಂದ ಎರಡು ಸಂದೇಶಗಳಿವೆ. ಒಂದನೆಯದು ಪ್ರಾದೇಶಿಕ ಪಕ್ಷಗಳ ಪ್ರಾಮುಖ್ಯತೆ. ಪ್ರಬಲವಾದ ಪ್ರಾದೇಶಿಕ ಪಕ್ಷವಿದ್ದರೆ, ಖಂಡಿತವಾಗಿ…

Rate this:

ಕೋಮುವಾದಿಗಳು, ಜಾತ್ಯತೀತರು ಮತ್ತು ಪಕ್ಷಾಂತರಿಗಳು!

ರಾಜಕೀಯ ಕ್ಷೇತ್ರದಲ್ಲಿ ಹಿಂದಿನಿಂದಲೂ ಅಸ್ತಿತ್ವದಲ್ಲಿದ್ದ, ಅತ್ಯಂತ ಹೆಚ್ಚು ಟೀಕೆಗೆ, ನಿಂದನೆಗೆ, ವ್ಯಂಗ್ಯಕ್ಕೆ, ದೂಷಣೆಗೆ, ಛೀ-ಥೂಗಳಿಗೆ ಗುರಿಯಾಗಿದ್ದ ಸಂಪ್ರದಾಯವೊಂದು ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಮಹತ್ವ ಪಡೆದುಕೊಳ್ಳುತ್ತಿದೆ. ಅದೇ ಪಕ್ಷಾಂತರ. ಅಲ್ಲಿಂದಿಲ್ಲಿಗೆ ಜಿಗಿಯುತ್ತಾ ರಾಜಕೀಯದಲ್ಲಿ ಪಕ್ಷ-ಸಿದ್ಧಾಂತಗಳೆಲ್ಲ “ಹೇಳಲು ಮಾತ್ರ” ಎಂಬ ಭಾವನೆ ಮೂಡಿಸುವಲ್ಲಿ ಈ ಪಕ್ಷಾಂತರಿಗಳ ಪಾತ್ರ ಮಹತ್ವದ್ದು. ಯಾವ ರಾಜಕೀಯ ಪಕ್ಷದಲ್ಲಿಯೂ ತತ್ವ ಸಿದ್ಧಾಂತಗಳೆಂಬ ಪದಗಳಿಲ್ಲ, ರಾಜಕೀಯ ಕ್ಷೇತ್ರವು “ವಸುಧೈವ ಕುಟುಂಬಕಂ” ಎಂಬಂತೆ. ಎಲ್ಲರೂ ಇಲ್ಲಿ ಒಂದೇ, ಜಾತಿ-ಮತ ಭೇದಗಳಿಲ್ಲ. ತಪ್ಪು-ಒಪ್ಪುಗಳ ಮಧ್ಯೆ ವ್ಯತ್ಯಾಸವಿಲ್ಲ, ಪ್ರಾಮಾಣಿಕರು-ಅಪ್ರಾಮಾಣಿಕರಿಗೆ ಭಿನ್ನತೆ ಇಲ್ಲ,…

Rate this: