ಜಿಮೇಲ್‌ನಲ್ಲಿ ಬೇಡವಾದ ಮೇಲ್‌ಗಳನ್ನು ನಿವಾರಿಸಿ, ಸ್ಥಳಾವಕಾಶ ಹೆಚ್ಚಿಸಿಕೊಳ್ಳಿ
ಮಾಹಿತಿ@ತಂತ್ರಜ್ಞಾನ ವಿಜಯ ಕರ್ನಾಟಕ ಅಂಕಣ 94: ಸೆಪ್ಟೆಂಬರ್ 22, 2014ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವ್ಯವಹಾರಗಳು ಹೆಚ್ಚಾಗುತ್ತಿವೆ. ಫೇಸ್‌ಬುಕ್, ಟ್ವಿಟರ್ ಮಾತ್ರವಲ್ಲದೆ ಹಲವಾರು ಚಿತ್ರವಿಚಿತ್ರ ಸೇವೆಗಳಿಗೆ, ಆ್ಯಪ್‌ಗಳಿಗೆ ನಮಗರಿವಿದ್ದೋ, ಇಲ್ಲದೆಯೋ ನಾವು ನಮ್ಮ ಇಮೇಲ್ ಖಾತೆಯನ್ನು ಬಳಸಿಯೇ ಲಾಗಿನ್/ಸೈನ್ ಅಪ್ ಆಗಿಬಿಡುತ್ತೇವೆ. ಈ ಕಾರಣದಿಂದಾಗಿ, ನಮ್ಮ ಇಮೇಲ್ ವಿಳಾಸ ಬಟಾಬಯಲಾಗುತ್ತಿದೆ. ಇದರಿಂದಾಗಿ ಸ್ಪ್ಯಾಮ್ (ಅನಗತ್ಯ, ಮಾರುಕಟ್ಟೆ ಉದ್ದೇಶಕ್ಕಾಗಿಯೇ ಇರುವ) ಸಂದೇಶಗಳ ಹಾವಳಿಯೂ ಜಾಸ್ತಿಯಾಗುತ್ತಿದೆ. ಇದಲ್ಲದೆ, ಇಮೇಲ್ ಮೂಲಕ ಫೋಟೋ, ವೀಡಿಯೋ ಅಟ್ಯಾಚ್ಮೆಂಟ್ ಕಳುಹಿಸುವುದು ಮತ್ತು ಸ್ವೀಕರಿಸುವ ಪ್ರಕ್ರಿಯೆಯೂ ಜಾಸ್ತಿಯಾಗತೊಡಗಿದೆ.…