Memory Card ಖರೀದಿಸುವ ಮುನ್ನ ನೀವು ತಿಳಿದಿರಬೇಕಾದ ವಿಚಾರಗಳು
‘ಅಂಗೈಯಲ್ಲಿ ಜಗತ್ತು’ ಎಂಬುದಕ್ಕೆ ಸ್ಮಾರ್ಟ್ ಫೋನ್‌ಗಳು ಪರ್ಯಾಯವಾಗಿಬಿಟ್ಟಿವೆ ಮತ್ತು ಅವುಗಳಲ್ಲಿರುವ ಅತ್ಯಾಧುನಿಕ ಕ್ಯಾಮೆರಾಗಳ ಮೂಲಕ ಈಗ ಎಲ್ಲರೂ ಫೋಟೋಗ್ರಾಫರುಗಳೇ ಆಗಿಬಿಟ್ಟಿದ್ದಾರೆ. ಇದರ ಜತೆಗೆ ಸೆಲ್ಫೀ, ಲೈವ್ ವೀಡಿಯೋ ಇತ್ಯಾದಿತ್ಯಾದಿ. ಹೀಗಿರುವುದರಿಂದ ಆಡಿಯೋ, ವೀಡಿಯೋ, ಫೋಟೋ ಫೈಲುಗಳನ್ನು ಸೇವ್ ಮಾಡಿಟ್ಟುಕೊಳ್ಳಲು ಸ್ಮಾರ್ಟ್‌ಫೋನ್‌ಗಳಲ್ಲಿ ಇರುವ ಜಾಗ ಸಾಲುತ್ತಿಲ್ಲ. ಈ ಫೈಲುಗಳನ್ನು ಪದೇ ಪದೇ ಕಂಪ್ಯೂಟರಿಗೆ ವರ್ಗಾಯಿಸಿ ಫೋನಲ್ಲಿ ಸ್ಥಳಾವಕಾಶ ಮಾಡಿಕೊಳ್ಳುವುದು ಕಷ್ಟದ ಕೆಲಸ. ಈ ಸಮಸ್ಯೆ ಪರಿಹಾರಕ್ಕೆ ಬಂದವು ಎಕ್ಸ್‌ಟರ್ನಲ್ ಮೆಮೊರಿ ಕಾರ್ಡುಗಳು. ಫೋನ್, ಕ್ಯಾಮೆರಾ ಅಥವಾ ಯಾವುದೇ ಅನ್ಯ…