ಬ್ಯಾಕಪ್: ಕಂಪ್ಯೂಟರ್ ಇರುವವರೆಲ್ಲರೂ ಮಾಡಲೇಬೇಕಾದ ಕೆಲ್ಸ

ಕಂಪ್ಯೂಟರ್ ಕ್ರ್ಯಾಶ್ ಆಗಿದೆ, ಹಾರ್ಡ್ ಡಿಸ್ಕ್ ಕ್ರ್ಯಾಶ್ ಆಯಿತು, ಆಪರೇಟಿಂಗ್ ಸಿಸ್ಟಂ ಕೆಟ್ಟು ಹೋಯಿತು, ಫೈಲ್ ಡಿಲೀಟ್ ಆಯಿತು ಅಂತ ಹೇಳುತ್ತಿರುವವರನ್ನು ಕೇಳಿದ್ದೇವೆ. ಸಮಯ ಸಿಕ್ಕಾಗಲೆಲ್ಲಾ ನಮ್ಮ ಕಂಪ್ಯೂಟರಿನ ಆಪರೇಟಿಂಗ್ ಸಿಸ್ಟಂ ಸಹಿತ ಎಲ್ಲ ತಂತ್ರಾಂಶಗಳನ್ನು ಬ್ಯಾಕಪ್ (ಸುಲಭವಾಗಿ ಹೇಳುವುದಾದರೆ Copy) ಇರಿಸಿಕೊಂಡರೆ, ಇಂತಹಾ ಆಪತ್ಕಾಲದಲ್ಲಿ ಆತಂಕ ಪಡುವ ಬದಲು ಸುಲಭವಾಗಿ ರೀಸ್ಟೋರ್ ಮಾಡಬಹುದು. ಇದು ನಾವು-ನೀವು ಮಾಡಿಕೊಳ್ಳಬಹುದಾದ ತೀರಾ ಸುಲಭದ ಕೆಲಸ. ವಿಂಡೋಸ್ ಆಪರೇಟಿಂಗ್ ಸಿಸ್ಟಂ (7 ಅಥವಾ 8.1 ಆವೃತ್ತಿ) ನಲ್ಲಿ ಬ್ಯಾಕಪ್ ಮಾಡಿಕೊಳ್ಳುವ…

Rate this:

ವಿಂಡೋಸ್ 10: ನೀವು ತಿಳಿದಿರಬೇಕಾದ 6 ಸಂಗತಿಗಳು

ಮೈಕ್ರೋಸಾಫ್ಟ್ ತನ್ನ ವಿಂಡೋಸ್ ಕಾರ್ಯಾಚರಣಾ ವ್ಯವಸ್ಥೆಯ 10ನೇ ಆವೃತ್ತಿಯ ಬಗ್ಗೆ ಕಳೆದ ವಾರ ಮುನ್ನೋಟವನ್ನು ಪ್ರದರ್ಶಿಸಿದ್ದು, ವಿಂಡೋಸ್ ಬಳಕೆದಾರರಲ್ಲಿ ಆಸೆ ಚಿಗುರಿಸಿದೆ. ಈ ವರ್ಷದಲ್ಲೇ ಇದು ಗ್ರಾಹಕರಿಗೆ ಲಭ್ಯವಾಗಲಿದ್ದು, ವಿಂಡೋಸ್ 7 ಹಾಗೂ 8 ಬಳಕೆದಾರರಿಗೆ ಉಚಿತ ಅಪ್‌ಗ್ರೇಡ್ ರೂಪದಲ್ಲಿ ದೊರೆಯಲಿದೆ. ಹೊಸ ಬ್ರೌಸರ್ ಘೋಷಣೆ, ವಿಂಡೋಸ್ ಫೋನ್‌ಗಳಲ್ಲಿ ಪ್ರಸಿದ್ಧಿ ಪಡೆದಿರುವ ಕೋರ್ಟನಾ ಎಂಬ ಆಪ್ತಸಹಾಯಕ ತಂತ್ರಾಂಶವು ಡೆಸ್ಕ್‌ಟಾಪ್ ಕಂಪ್ಯೂಟರುಗಳಿಗೂ ಬರಲಿರುವುದು ಮತ್ತು ಗೂಗಲ್ ಗ್ಲಾಸ್ ಹೋಲುವ 3ಡಿ ಕನ್ನಡಕ ಕೂಡ ಮಾರುಕಟ್ಟೆಗೆ ಬರಲಿದೆ. ಅವುಗಳ ಮೇಲೆ…

Rate this:

ಆ್ಯಪ್ ಜತೆಗೆ ಒಂದು ದಿನ

ಕಾಮಿಸಿದ್ದನ್ನು ನೀಡುವ ಕಾಮಧೇನುವಾಗಿ, ಕಲ್ಪಿಸಿದ್ದನ್ನು ಧುತ್ತನೇ ಮುಂದಿಡುವ ಕಲ್ಪವೃಕ್ಷವಾಗಿ, ಚಿಂತಿಸಿದ್ದನ್ನು ಕೊಡುವ ಚಿಂತಾಮಣಿಯಾಗಿ ಅಭೀಪ್ಸಿತಾರ್ಥ ಸಿದ್ಧಿದಾಯಕವಾಗಿ, ಮನೋವೇಗದಿಂದ ಕೆಲಸ ಈಡೇರಿಸಬಲ್ಲ ಸಾಮರ್ಥ್ಯ ತಂತ್ರಜ್ಞಾನಕ್ಕಿದೆ. ಆ್ಯಪ್ ಅಂತ ಸ್ವೀಟಾಗಿ, ಕ್ಯೂಟಾಗಿ ಎಲ್ಲರ ನಾಲಿಗೆಯಲ್ಲಿ ಕುಣಿದಾಡುತ್ತಿರುವ ಈ ಅಪ್ಲಿಕೇಶನ್‌ಗಳೆಂಬ ಭ್ರಾಮಕ ಜಗತ್ತಿನಲ್ಲಿ ಏನಿದೆ, ಏನಿಲ್ಲ? ನಮ್ಮೊಂದು ದಿನದ ಬದುಕಿನ ಬಹುತೇಕ ಎಲ್ಲ ಕ್ಷಣಗಳನ್ನೂ ಈ ಆ್ಯಪ್‌ಗಳೇ ನಿಭಾಯಿಸಬಹುದು. ನಾವು ನೀವು ಸಾಮಾನ್ಯವಾಗಿ ಬಳಸುವ ಫೇಸ್‌ಬುಕ್, ವಾಟ್ಸಾಪ್, ಹ್ಯಾಂಗೌಟ್ಸ್ ಮುಂತಾದವನ್ನು ಹೊರಗಿಟ್ಟು ಇನ್ನೂ ಕೆಲವು ಆ್ಯಪ್‌ಗಳು ನಮ್ಮನ್ನು ಹೇಗೆ ಮುನ್ನಡೆಸುತ್ತವೆ? ಹೀಗೆ…

Rate this:

ಕಂಪ್ಯೂಟರಿನಲ್ಲಿ ಪ್ರತಿನಿತ್ಯ ಉಪಯೋಗವಾಗುವ ಒಂದಿಷ್ಟು ಸರಳ ಟ್ರಿಕ್ಸ್

ಬಹುತೇಕ ಎಲ್ಲರೂ ವಿಂಡೋಸ್ ಆಪರೇಟಿಂಗ್ ಸಿಸ್ಟಂ ಬಳಸುತ್ತಿರುತ್ತಾರೆ. ದೈನಂದಿನ ಕೆಲಸ ಕಾರ್ಯದಲ್ಲಿ ಸರಳವಾದ ಕೆಲವೊಂದು ಟ್ರಿಕ್‌ಗಳ ಮೂಲಕ ಸಾಕಷ್ಟು ಸಮಯ  ಉಳಿತಾಯ ಮಾಡಬಹುದು. ಅಂಥ ಕೆಲವು ಶಾರ್ಟ್‌ಕಟ್ ವಿಧಾನಗಳು ಇಲ್ಲಿವೆ. ನೀವೂ ಮಾಡಿ ನೋಡಿ, ‘ಟೈಮೇ ಇಲ್ಲ’ ಎನ್ನುವುದನ್ನು ಕೊಂಚ ಕಡಿಮೆ ಮಾಡಿ! ಟಾಸ್ಕ್ ಬಾರ್ ಪ್ರೋಗ್ರಾಂಗಳನ್ನು ತ್ವರಿತವಾಗಿ ತೆರೆಯುವುದು:ಸಾಮಾನ್ಯವಾಗಿ ಮಾನಿಟರ್ ಸ್ಕ್ರೀನ್‌ನ ಅಡಿಭಾಗದಲ್ಲಿ ಒಂದು ಪಟ್ಟಿ (ಬಾರ್) ಇರುತ್ತದೆ. ಅದರಲ್ಲಿ ನಾವು ಹೆಚ್ಚಾಗಿ ಬಳಸುವ ಅಪ್ಲಿಕೇಶನ್‌ಗಳನ್ನು ಬೇಗನೇ ಲಾಂಚ್ ಮಾಡುವುದಕ್ಕಾಗಿ, ಇಂಟರ್ನೆಟ್ ಎಕ್ಸ್‌ಪ್ಲೋರರ್ ಅಥವಾ ಬೇರೆ…

Rate this:

100: ಕಂಪ್ಯೂಟರ್ ವೇಗವಾಗಿಸಲು ಸುಲಭ ಕಾರ್ಯತಂತ್ರಗಳು

ವಿಜಯ ಕರ್ನಾಟಕ ಅಂಕಣ ಮಾಹಿತಿ@ತಂತ್ರಜ್ಞಾನ-100: ನವೆಂಬರ್ 3, 2014 ಕಂಪ್ಯೂಟರ್‌ನಲ್ಲೇನಾದರೂ ಸಮಸ್ಯೆ ಬಂದರೆ ದುರಸ್ತಿಗಾಗಿ ಒಯ್ಯುವ ಮುನ್ನ ನಾವೇ ಮಾಡಬಹುದಾದ ಕೆಲವೊಂದು ಮೂಲಭೂತ ಪರಿಹಾರ ಕ್ರಮಗಳ ಬಗ್ಗೆ ಕಳೆದ ವಾರ ಹೇಳಿದ್ದೆ. ಈ ಬಾರಿ, ಕಂಪ್ಯೂಟರ್‌ನ ವೇಗ ಹೆಚ್ಚಿಸಲು ಮತ್ತೊಂದಿಷ್ಟು ಸಲಹೆಗಳಿವೆ. ಇದು ಕೊಂಚ ಮಟ್ಟಿಗೆ ಸರಳ ಅಲ್ಲ ಅನ್ನಿಸುವುದರಿಂದ ನಿಮ್ಮ ಸ್ನೇಹಿತ ವರ್ಗದಲ್ಲಿರುವ ಕಂಪ್ಯೂಟರ್ ತಜ್ಞರ ನೆರವು ಬೇಕಾಗಬಹುದು. ಮೊದಲನೆಯದಾಗಿ ಕಂಪ್ಯೂಟರಿನಲ್ಲಿ ಇರುವ RAM ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಿ. ಹಳೆಯ ಕಂಪ್ಯೂಟರುಗಳಲ್ಲಾದರೆ 512 ಎಂಬಿ ಅಥವಾ…

Rate this:

ಕಂಪ್ಯೂಟರ್, ಮೊಬೈಲ್ ವೇಗ ಹೆಚ್ಚಿಸಲು, ಸೇಫ್ ಮೋಡ್ ಬಳಸಿ

ಮಾಹಿತಿ@ತಂತ್ರಜ್ಞಾನ ಅಂಕಣ – 97: ಅವಿನಾಶ್ ಬಿ. (ವಿಜಯ ಕರ್ನಾಟಕ, ಅಕ್ಟೋಬರ್ 13, 2014) ಇತ್ತೀಚೆಗೆ ನನ್ನ ಸ್ಮಾರ್ಟ್‌ಫೋನ್ ಪದೇ ಪದೇ ರೀಸ್ಟಾರ್ಟ್ ಆಗುವ ಸಮಸ್ಯೆಗೆ ಸಿಲುಕಿತ್ತು. ಈ ಸಮಸ್ಯೆಗೆ ಕಾರಣ ಮತ್ತು ಪರಿಹಾರ ಕಂಡುಹಿಡಿಯಲು ಅಂತರ್ಜಾಲದಲ್ಲಿ ಜಾಲಾಡಿದಾಗ ಮತ್ತು ಕಸ್ಟಮರ್ ಕೇರ್‌ಗೆ ಇಮೇಲ್ ಮೂಲಕ ಸಂಪರ್ಕಿಸಿದ ಬಳಿಕ ಉತ್ತರ ಸಿಕ್ಕಿತು. ವಿಂಡೋಸ್ ಅಥವಾ ಮ್ಯಾಕ್ ಕಂಪ್ಯೂಟರ್‌ಗಳಲ್ಲಿ ಕೂಡ ಯಾವುದೇ ಸಮಸ್ಯೆ ಬಂದಾಗ, ಅದರಲ್ಲಿನ ತಾಂತ್ರಿಕ ದೋಷಗಳನ್ನು ಪತ್ತೆ ಮಾಡಿ ಸರಿಪಡಿಸುವ ನಿಟ್ಟಿನಲ್ಲಿ (ಟ್ರಬಲ್ ಶೂಟಿಂಗ್ ಎನ್ನುತ್ತಾರೆ)…

Rate this:

ಸ್ಲೋ ಆಗಿರುವ ಕಂಪ್ಯೂಟರಿನ ವೇಗ ಹೆಚ್ಚಿಸಬೇಕೇ? ನೀವೇ ಮಾಡಿನೋಡಿ!

ಮಾಹಿತಿ@ತಂತ್ರಜ್ಞಾನ – ವಿಜಯ ಕರ್ನಾಟಕ ಅಂಕಣ-93, ಸೆಪ್ಟೆಂಬರ್ 15, 2014ಸಮಯ ಕಳೆದಂತೆ ನಮ್ಮ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಸ್ಲೋ ಆಗುವುದು ಸಹಜ. ಆರಂಭದಲ್ಲಿದ್ದಷ್ಟು ವೇಗದಲ್ಲಿ ಕೆಲಸ ಮಾಡುವುದು ಸಾಧ್ಯವಾಗದು. ಈ ರೀತಿ ನಿಧಾನಗತಿಗೆ ಸಾಕಷ್ಟು ಕಾರಣಗಳಿರುತ್ತವೆ. ಸಾಮಾನ್ಯವಾದವೆಂದರೆ, ಮೆಮೊರಿ (ಅಂದರೆ ಆಂತರಿಕ ಸ್ಟೋರೇಜ್, RAM) ಕಡಿಮೆ ಇರುವುದು, ಮಾಲ್‌ವೇರ್/ವೈರಸ್ ಬಾಧೆ, ಹಿನ್ನೆಲೆಯಲ್ಲಿ ಸಾಕಷ್ಟು ಪ್ರೋಗ್ರಾಂಗಳು ರನ್ ಆಗುತ್ತಿರುವುದು, ಹಾರ್ಡ್ ಡ್ರೈವ್‌ನಲ್ಲಿ ಸಾಕಷ್ಟು ಸ್ಥಳ ಇಲ್ಲದಿರುವುದು, ಕರಪ್ಟ್ (ದೋಷಪೂರಿತ) ಅಥವಾ ಫ್ರಾಗ್ಮೆಂಟ್ ಆಗಿರುವ ಹಾರ್ಡ್‌ಡ್ರೈವ್ ಇತ್ಯಾದಿ. ಆದರೆ, ಕಂಪ್ಯೂಟರ್…

Rate this:

ಒಂದು ಫೋನ್‌ನಿಂದ ಮತ್ತೊಂದಕ್ಕೆ ಕಾಂಟಾಕ್ಟ್ಸ್ ವರ್ಗಾಯಿಸಲು

ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ -90 ಆಗಸ್ಟ್ 25, 2014ಸ್ಮಾರ್ಟ್‌ಫೋನ್ ಬದಲಾಯಿಸುವಾಗ ಹಳೆಯ ಫೋನ್‌ನಲ್ಲಿರುವ ಕಾಂಟಾಕ್ಟ್‌ಗಳನ್ನು (ಸ್ನೇಹಿತರ ಸಂಪರ್ಕ ಸಂಖ್ಯೆ) ಹೊಸ ಫೋನ್‌ಗೆ ವರ್ಗಾಯಿಸುವುದೇ ಸಮಸ್ಯೆ. ಆದರೆ, ಇಂಟರ್ನೆಟ್ ಸಂಪರ್ಕ ಇದ್ದರೆ ಇದು ತೀರಾ ಸುಲಭ ಎಂಬುದು ಹೆಚ್ಚಿನವರಿಗೆ ತಿಳಿದಿರಲಾರದು. ಹೇಗೆಂಬುದು ತಿಳಿಯದವರಿಗಾಗಿ ಮಾಹಿತಿ ಇಲ್ಲಿದೆ. ಈ ಅಂಕಣದಲ್ಲಿ ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಯ ಫೋನ್‌ಗಳು ಹಾಗೂ ಜಿಮೇಲ್ ಐಡಿಯನ್ನು ಉದಾಹರಣೆಯಾಗಿ ತೆಗೆದುಕೊಳ್ಳಲಾಗಿದೆ. ಐಫೋನ್, ವಿಂಡೋಸ್ ಫೋನ್, ಬ್ಲ್ಯಾಕ್‌ಬೆರಿ ಫೋನ್‌ಗಳಿಗೂ ಇದು ಒಂದಿಷ್ಟು ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಅನ್ವಯವಾಗಬಹುದು. ಗೂಗಲ್…

Rate this:

ಕಂಪ್ಯೂಟರ್ ಬಳಸುವಾಗ ಕಣ್ಣುಗಳನ್ನು ರಕ್ಷಿಸಿಕೊಳ್ಳಿ

ವಿಜಯ ಕರ್ನಾಟಕದಲ್ಲಿ ಮಾಹಿತಿ@ ತಂತ್ರಜ್ಞಾನ ಅಂಕಣ 87: ಆಗಸ್ಟ್ 4, 2014 ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವುದು ಈಗ ಅನಿವಾರ್ಯ ಎಂಬ ಮಟ್ಟಕ್ಕೆ ತಲುಪಿದೆ. ಪ್ರತಿಯೊಂದು ಕ್ಷೇತ್ರವನ್ನೂ ಕಂಪ್ಯೂಟರ್ ಆವರಿಸಿಕೊಂಡಿದೆ. ಉದ್ಯೋಗದಲ್ಲಿ ಮಾತ್ರವೇ ಅಲ್ಲ, ಮನರಂಜನೆ, ಗೇಮ್ಸ್, ಚಾಟಿಂಗ್… ಇತ್ಯಾದಿಗಳಿಗಾಗಿಯೂ ಸತತವಾಗಿ ಕಂಪ್ಯೂಟರ್ ಸ್ಕ್ರೀನ್ ಅನ್ನು ನೋಡುತ್ತಿರಬೇಕಾಗುತ್ತದೆ. ಇಂತಹಾ ಪರಿಸ್ಥಿತಿಯಲ್ಲಿ ತಲೆನೋವು, ಕಣ್ಣುರಿ, ಬೆನ್ನು ನೋವು… ಮುಂತಾದವುಗಳ ಬಗ್ಗೆ ಜನ, ವಿಶೇಷವಾಗಿ ಕಂಪ್ಯೂಟರ್ ಬಳಸುತ್ತಿರುವವರು ದೂರುತ್ತಿರುವುದನ್ನು ಕೇಳಿರುತ್ತೀರಿ. ಕಂಪ್ಯೂಟರ್ ಸ್ಕ್ರೀನ್‌ಗಳಿಂದ ಹೊರಹೊಮ್ಮುವ ಬೆಳಕು ಕಣ್ಣಿಗೆ ಕಂಟಕ. ದೀರ್ಘಕಾಲ ಕಂಪ್ಯೂಟರ್…

Rate this:

ಡಿಲೀಟ್ ಆದ ಫೈಲ್‌ಗಳನ್ನು ಪುನಃ ಪಡೆಯುವುದು

ವಿಜಯ ಕರ್ನಾಟಕದಲ್ಲಿ ಮಾಹಿತಿ@ ತಂತ್ರಜ್ಞಾನ: ಜನವರಿ 13, 2014ಆಕಸ್ಮಿಕವಾಗಿ ಇಲ್ಲವೇ ಯಾವುದೇ ವೈರಸ್‌ನಿಂದ ನಿಮ್ಮದೊಂದು ಅಮೂಲ್ಯ ಡಾಕ್ಯುಮೆಂಟ್ ಅಥವಾ ಫೈಲ್ ಕಂಪ್ಯೂಟರಿನಿಂದ ಡಿಲೀಟ್ ಆಗಬಹುದು. ಹೀಗಾದಾಗ ಇಷ್ಟು ಕಾಲ ಮಾಡಿದ್ದೆಲ್ಲವೂ ವ್ಯರ್ಥವಾಯಿತು, ಮತ್ತೆ ಮೊದಲಿಂದ ಆರಂಭಿಸಬೇಕಲ್ಲಾ ಎಂದು ಬೇಸರಿಸಿಕೊಳ್ಳುವವರೇ ಹೆಚ್ಚು. ಇದರ ಬಗ್ಗೆ ಮಾಹಿತಿ ಕೊರತೆಯಿರುವವರು ಕೊರಗುವುದು ಹೆಚ್ಚು. ಆದರೆ ಫೈಲ್ ಡಿಲೀಟ್ ಆದರೆ ಆಕಾಶವೇ ಕಳಚಿಬಿದ್ದಂತೆ ಕೂರಬೇಕಾಗಿಲ್ಲ. ಡಿಲೀಟ್ ಆದ ಫೈಲುಗಳನ್ನು ವಾಪಸ್ ಪಡೆಯಬಹುದು ಮತ್ತು ವೈರಸ್ ದಾಳಿಯಿಂದ ಕರಪ್ಟ್ (Corrupt) ಆದ ಫೈಲ್‌ಗಳನ್ನು ಕೂಡ…

Rate this: