‌ವೈಫೈ ಡೇಟಾ ಕಾರ್ಡ್: ಒಂದೇ ಸಿಮ್‌, ಹಲವು ಸಾಧನಗಳಿಗೆ ಇಂಟರ್ನೆಟ್‌

ಮಾಹಿತಿ@ತಂತ್ರಜ್ಞಾನ ಅಂಕಣ – 96: ಅವಿನಾಶ್ ಬಿ. (ವಿಜಯ ಕರ್ನಾಟಕ, ಅಕ್ಟೋಬರ್ 06, 2014) ಅಂತರ್ಜಾಲ ಈಗ ಬದುಕಿನ ಅವಿಭಾಜ್ಯ ಅಂಗವಾಗಿರುವ ಕಾರಣಕ್ಕೆ ಹೆಚ್ಚಾಗಿ ಮನೆಗಳಲ್ಲಿ, ಕಚೇರಿಗಳಲ್ಲಿ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸಂಪರ್ಕ ಇರುತ್ತದೆ. ಮನೆಯಲ್ಲಾದರೆ ಅದಕ್ಕೆ ವೈರ್‌ಗಳು, ಕೇಬಲ್‌ಗಳ ಕಿರಿಕಿರಿ. ಹೀಗಾಗಿಯೇ ಪುಟ್ಟದಾದ ಇಂಟರ್ನೆಟ್ ಡಾಂಗಲ್‌ಗಳು ಎಂದು ಕರೆಯಲಾಗುವ, ಎಲ್ಲಿ ಬೇಕಾದರೂ ಹೊತ್ತೊಯ್ಯಬಹುದಾದ ಯುಎಸ್‌ಬಿ ಡೇಟಾ ಕಾರ್ಡ್‌ಗಳು ಜನಪ್ರಿಯವಾಗಿವೆ. ಈ ನಿಟ್ಟಿನಲ್ಲಿ ಬಿಎಸ್ಸೆನ್ನೆಲ್, ಏರ್‌ಟೆಲ್, ವೊಡಾಫೋನ್, ಟಾಟಾ ಡೊಕೊಮೊ, ರಿಲಯನ್ಸ್, ಎಂಟಿಎಸ್, ಐಡಿಯಾ, ಏರ್‌ಸೆಲ್ ಮುಂತಾದ ಎಲ್ಲ…

Rate this:

ಇಂಟರ್ನೆಟ್ ಇಲ್ಲದೆ ಗೂಗಲ್ ಮೇಲ್ ಉಪಯೋಗಿಸುವುದು

ವಿಜಯ ಕರ್ನಾಟಕ ಅಂಕಣ ಮಾಹಿತಿ@ತಂತ್ರಜ್ಞಾನ 91- ಸೆಪ್ಟೆಂಬರ್ 1, 2014ಎಲ್ಲಾದರೂ ದೂರ ಅಂದರೆ ಇಂಟರ್ನೆಟ್ ಸಂಪರ್ಕವಿಲ್ಲದ ರಿಮೋಟ್ ಪ್ರದೇಶಕ್ಕೆ ಹೋಗಿರುತ್ತೀರಿ ಅಥವಾ ವಿಮಾನದಲ್ಲೋ, ರೈಲಿನಲ್ಲೋ ಪ್ರಯಾಣಿಸುತ್ತಿರುವಾಗ, ಪ್ರಯಾಣದ ಸಮಯವನ್ನು ಸದುಪಯೋಗ ಮಾಡಿಕೊಳ್ಳಬೇಕೆಂಬ ಕಾರಣಕ್ಕೆ, ಲ್ಯಾಪ್‌ಟಾಪ್ ಮೂಲಕ ಜಿಮೇಲ್‌ನಲ್ಲಿರುವ ಇಮೇಲ್‌ಗಳನ್ನು ಚೆಕ್ ಮಾಡಬೇಕು, ಅದರಲ್ಲಿನ ವಿವರಗಳನ್ನು ಓದಬೇಕು ಎಂದು ಅನ್ನಿಸುತ್ತಿದೆ. ಆದರೆ ಇಂಟರ್ನೆಟ್ ಇಲ್ಲದ ಚಿಂತೆ. ಹೀಗಿರುವಾಗ ಏನು ಮಾಡಬಹುದು? ಇಂಥವರಿಗಾಗಿಯೇ ಗೂಗಲ್‌ನ ಜಿಮೇಲ್ ತಂಡವು ಒಂದು ಆಯ್ಕೆಯನ್ನು ಒದಗಿಸಿದೆ. ಅದೇ ಆಫ್‌ಲೈನ್ ಜಿಮೇಲ್. ಇದರ ಮೂಲಕ, ಇಂಟರ್ನೆಟ್…

Rate this:

ಮೊಬೈಲ್, ಕಂಪ್ಯೂಟರಲ್ಲಿ ಕನ್ನಡದಲ್ಲಿ ಬರೆಯೋದು ಈಗ ತುಂಬಾ ಸುಲಭ

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕದಲ್ಲಿ ಅವಿನಾಶ್ ಬಿ. ಅಂಕಣ, ಮಾರ್ಚ್ 03, 2014ಅಂತರ್ಜಾಲದಲ್ಲಿ ಕನ್ನಡದ ಬಳಕೆ ಹೆಚ್ಚಾದರೆ, ಕನ್ನಡಕ್ಕೆ ಶ್ರೇಯಸ್ಸು. ಆದರೆ, ಇಂಟರ್ನೆಟ್‌ನಲ್ಲಿ ಕಂಗ್ಲಿಷ್ (ಕನ್ನಡವನ್ನು ಓದಲು ತ್ರಾಸವಾಗುವ ರೀತಿಯಲ್ಲಿ ಇಂಗ್ಲಿಷ್‌ನಲ್ಲಿ ಬರೆಯುವ ವಿಧಾನ) ಬಳಕೆ ಆತಂಕಕಾರಿಯಾಗಿ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣಗಳು ಹಲವು. ಕನ್ನಡ ಬಳಕೆ ತುಂಬಾ ಸುಲಭವೆಂಬ ಜ್ಞಾನವಿಲ್ಲದಿರುವುದು; ಅದಕ್ಕೆ ದೊಡ್ಡ ತಂತ್ರಾಂಶವೇ ಬೇಕೆಂಬ ಅಜ್ಞಾನ; ಇಂಗ್ಲಿಷ್ ಅಕ್ಷರಗಳಿರುವ ಕೀಬೋರ್ಡ್‌ನಲ್ಲಿ ಇಂಗ್ಲಿಷ್ ಬದಲು ಕನ್ನಡವನ್ನು ಟೈಪ್ ಮಾಡುವುದು (ಲಿಪ್ಯಂತರಣ) ತೀರಾ ಕಷ್ಟ ಎಂಬ ಭಾವನೆ. ಆದರೆ ಇಂಗ್ಲಿಷಿನಲ್ಲಿಯೇ…

Rate this:

ಇಂಗ್ಲಿಷ್‌ಗಿಂತ ಪ್ರಾದೇಶಿಕ ಭಾಷೆಗಳ ಅಂತರ್‌‘ಜಾಲ’ ದೊಡ್ಡದು!

13-01-13ರಂದು ವಿಜಯ ಕರ್ನಾಟಕ ಮುಖಪುಟದಲ್ಲಿ ಪ್ರಕಟವಾದ ನನ್ನ ಲೇಖನಬೆಂಗಳೂರು: ‘ಇಂಗ್ಲಿಷ್ ಗೊತ್ತಿರುವವರಿಗೆ ಮಾತ್ರವೇ ಇಂಟರ್ನೆಟ್’ ಎಂಬ ಮಿಥ್ಯೆಗೆ ಪ್ರತಿಯಾಗಿ, ಗ್ರಾಮಾಂತರ ಪ್ರದೇಶವಾಸಿಗಳೂ ಅಂತರ್ಜಾಲವನ್ನು ಹೆಚ್ಚು ಹೆಚ್ಚು ಜಾಲಾಡತೊಡಗುತ್ತಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ಇಂಟರ್ನೆಟ್ ಬಳಕೆ ಹೆಚ್ಚಾಗುತ್ತಿರುವ ಕುರಿತು ಭಾರತೀಯ ಇಂಟರ್ನೆಟ್ ಮತ್ತು ಮೊಬೈಲ್ ಒಕ್ಕೂಟ (ಐಎಎಂಎಐ) ಬಿಡುಗಡೆಗೊಳಿಸಿದ ವರದಿಯು ಬೆಳಕು ಚೆಲ್ಲಿದೆ. ಇಂಗ್ಲಿಷ್ ತಿಳಿವಳಿಕೆ ಕಡಿಮೆ ಇರುವುದರಿಂದಾಗಿ, ಪ್ರಾದೇಶಿಕ ಭಾಷೆಗಳ ವೆಬ್ ಸೈಟ್ ವೀಕ್ಷಿಸುವವರ ಸಂಖ್ಯೆ ವೃದ್ಧಿಯ ವೇಗವು ನಗರ ಪ್ರದೇಶಕ್ಕಿಂತಲೂ ಗ್ರಾಮಾಂತರ ಭಾರತದಲ್ಲಿ ಹೆಚ್ಚಾಗುತ್ತಿದೆ ಎಂದಿದೆ ಈ…

Rate this: