ಆಂಡ್ರಾಯ್ಡ್‌ನಿಂದ ವಿಂಡೋಸ್ ಫೋನ್‌ಗೆ ಸಂಪರ್ಕಗಳ ವರ್ಗಾವಣೆ ಹೇಗೆ?

ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ -102: ನವೆಂಬರ್ 17, 2014ಆಂಡ್ರಾಯ್ಡ್ ಫೋನ್ ಬಳಸುತ್ತಿರುವ ಕೆಲವರಿಗೆ ಮೈಕ್ರೋಸಾಫ್ಟ್ ವಿಂಡೋಸ್ ಫೋನ್‌ನಲ್ಲಿನ ವೈಶಿಷ್ಟ್ಯಗಳಿಂದಾಗಿ ಮತ್ತು ಕಂಪ್ಯೂಟರ್, ಲ್ಯಾಪ್‌ಟಾಪ್ ಜತೆಗೆ ಸಿಂಕ್ರನೈಸ್ ಮಾಡುವ ಅವಕಾಶವಿರುವುದರಿಂದಾಗಿ ಅದು ಇಷ್ಟವಾಗಿರಬಹುದು. ಆಂಡ್ರಾಯ್ಡ್‌ನಿಂದ ವಿಂಡೋಸ್ ಫೋನ್‌‌ಗೆ ಬದಲಾಯಿಸುವಾಗ ಮುಖ್ಯವಾಗಿ ತೊಡಕಾಗುವುದು ಸಂಪರ್ಕ ವಿವರಗಳನ್ನು (ಕಾಂಟ್ಯಾಕ್ಟ್) ವರ್ಗಾಯಿಸುವುದು. ಹೊಸ ವಿಂಡೋಸ್ ಫೋನ್‌ಗೆ ಒಂದೊಂದೇ ಸಂಖ್ಯೆಯನ್ನು ಪುನಃ ಫೀಡ್ ಮಾಡುವುದು ತೀರಾ ಕಷ್ಟ. ಸುಲಭವಾಗಿ ಸಂಪರ್ಕ ಸಂಖ್ಯೆಗಳನ್ನು ಹೇಗೆ ವರ್ಗಾಯಿಸಬಹುದೆಂಬ ಮಾಹಿತಿ ಇಲ್ಲಿದೆ. ಆಂಡ್ರಾಯ್ಡ್ ಫೋನ್‌ಗಳಿಗೆ ಗೂಗಲ್ ಖಾತೆ…

Rate this:

ಆಂಡ್ರಾಯ್ಡ್ 5 ಲಾಲಿಪಾಪ್‌ನ 5 ವಿಶೇಷತೆಗಳು

‘’ಟೆಕ್ನೋ’ ವಿಶೇಷ#ನೆಟ್ಟಿಗ ಆಂಡ್ರಾಯ್ಡ್‌ನ ಅಲಿಖಿತ ಸಂಪ್ರದಾಯದಂತೆ ಇಂಗ್ಲಿಷ್ ಅಕ್ಷರಾನುಕ್ರಮಣಿಕೆ ಪ್ರಕಾರ ‘L’ನಿಂದ ಆರಂಭವಾಗಬೇಕಿದ್ದ ಹೊಚ್ಚ ಹೊಸ 5.0 ಆವೃತ್ತಿಯ ಹೆಸರು ಕೊನೆಗೂ ಭಾರತೀಯರಿಗೂ ಇಷ್ಟವಾಗಿರುವ ‘ಲಾಲಿಪಾಪ್’ ಎಂದು ಘೋಷಣೆಯಾಗಿದೆ. ಇತ್ತೀಚಿನ 4.4.4 ಆವೃತ್ತಿಯಾಗಿರುವ ಕಿಟ್‌ಕ್ಯಾಟ್ ಕಾರ್ಯಾಚರಣಾ ವ್ಯವಸ್ಥೆಗೂ, ಲಾಲಿಪಾಪ್‌ಗೂ ಅತ್ಯಂತ ಪ್ರಮುಖವಾದ ವ್ಯತ್ಯಾಸಗಳೇನು ಎಂಬುದನ್ನು ತಿಳಿದುಕೊಳ್ಳೋಣ. ಮೊದಲ ನೋಟ…1. ಕಾರ್ಯಾಚರಣಾ ವ್ಯವಸ್ಥೆ (ಒಎಸ್) ತಕ್ಷಣಕ್ಕೆ ನೋಡುವಾಗಲೇ ಸಾಕಷ್ಟು ಬದಲಾವಣೆಗಳು ಕಾಣಿಸುತ್ತವೆ. ಹಲವು ತಿಂಗಳುಗಳಿಂದ ‘ಮೆಟೀರಿಯಲ್ ವಿನ್ಯಾಸ’ದ ಮೇಲೆ ಕೆಲಸ ಮಾಡಿದ್ದ ಗೂಗಲ್, ಲಾಲಿಪಾಪ್ ಮೂಲಕ ಅದನ್ನು ಹೊರಬಿಟ್ಟಿದೆ.…

Rate this:

ಒಂದು ಫೋನ್‌ನಿಂದ ಮತ್ತೊಂದಕ್ಕೆ ಕಾಂಟಾಕ್ಟ್ಸ್ ವರ್ಗಾಯಿಸಲು

ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ -90 ಆಗಸ್ಟ್ 25, 2014ಸ್ಮಾರ್ಟ್‌ಫೋನ್ ಬದಲಾಯಿಸುವಾಗ ಹಳೆಯ ಫೋನ್‌ನಲ್ಲಿರುವ ಕಾಂಟಾಕ್ಟ್‌ಗಳನ್ನು (ಸ್ನೇಹಿತರ ಸಂಪರ್ಕ ಸಂಖ್ಯೆ) ಹೊಸ ಫೋನ್‌ಗೆ ವರ್ಗಾಯಿಸುವುದೇ ಸಮಸ್ಯೆ. ಆದರೆ, ಇಂಟರ್ನೆಟ್ ಸಂಪರ್ಕ ಇದ್ದರೆ ಇದು ತೀರಾ ಸುಲಭ ಎಂಬುದು ಹೆಚ್ಚಿನವರಿಗೆ ತಿಳಿದಿರಲಾರದು. ಹೇಗೆಂಬುದು ತಿಳಿಯದವರಿಗಾಗಿ ಮಾಹಿತಿ ಇಲ್ಲಿದೆ. ಈ ಅಂಕಣದಲ್ಲಿ ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಯ ಫೋನ್‌ಗಳು ಹಾಗೂ ಜಿಮೇಲ್ ಐಡಿಯನ್ನು ಉದಾಹರಣೆಯಾಗಿ ತೆಗೆದುಕೊಳ್ಳಲಾಗಿದೆ. ಐಫೋನ್, ವಿಂಡೋಸ್ ಫೋನ್, ಬ್ಲ್ಯಾಕ್‌ಬೆರಿ ಫೋನ್‌ಗಳಿಗೂ ಇದು ಒಂದಿಷ್ಟು ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಅನ್ವಯವಾಗಬಹುದು. ಗೂಗಲ್…

Rate this:

ನಿಮ್ಮಲ್ಲಿರಲೇಬೇಕಾದ ಆಂಡ್ರಾಯ್ಡ್ ಆ್ಯಪ್‌ಗಳು

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ, ಫೆಬ್ರವರಿ 24, 2014ಹೊಸದಾಗಿ ಕೊಂಡುಕೊಂಡ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಮುಖ್ಯವಾಗಿ ಇರಬೇಕಾದ ಕಿರುತಂತ್ರಾಂಶಗಳು (ಆ್ಯಪ್‌ಗಳು) ಯಾವುವು ಅಂತ ಗೊಂದಲದಲ್ಲಿದ್ದರೆ ಈ ಅಂಕಣ ಓದಿ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಪರಿಪೂರ್ಣ ಪ್ರಯೋಜನ ಪಡೆಯಬೇಕಿದ್ದರೆ, ಇಂಟರ್ನೆಟ್ ಸಂಪರ್ಕ ಮತ್ತು ಜಿಮೇಲ್ ಖಾತೆ ಅತ್ಯಗತ್ಯ. ಮುಖ್ಯವಾಗಿ ಮ್ಯೂಸಿಕ್, ವೀಡಿಯೋ, ಎಫ್ಎಂ ರೇಡಿಯೋ, ಕ್ಯಾಲೆಂಡರ್, ಫೇಸ್‌ಬುಕ್ ಅಡೋಬ್ ರೀಡರ್, ಗಡಿಯಾರ, ಮ್ಯಾಪ್, ಯೂಟ್ಯೂಬ್ ಮುಂತಾದ ಆ್ಯಪ್‌ಗಳು ಹೆಚ್ಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಅಳವಡಿಕೆಯಾಗಿಯೇ ಇರುತ್ತವೆ. ಮತ್ತೆ ಕೆಲವನ್ನು ನಾವು ಜಿಮೇಲ್ ಖಾತೆಯ ಮೂಲಕ…

Rate this:

ಸ್ಮಾರ್ಟ್‌ಫೋನ್ ಬದಲಿಸುತ್ತಿದ್ದರೆ ಫೋನ್ ನಂಬರ್, ಹೆಸರು ಉಳಿಸಿಕೊಳ್ಳಿ

ವಿಜಯ ಕರ್ನಾಟಕ ಅಂಕಣ: ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. (ಫೆಬ್ರವರಿ 17, 2014 )ಇತ್ತೀಚೆಗೆ ಸಾಕಷ್ಟು ಮೊಬೈಲ್ ಫೋನ್ ಎಕ್ಸ್‌ಚೇಂಜ್ ಆಫರ್‌ಗಳು ಬರುತ್ತಿವೆ. ನೋಡಿದಾಗ ಕೊಂಡುಕೊಳ್ಳೋಣವೆನಿಸುತ್ತದೆ. ಹಳೆಯ ಆಂಡ್ರಾಯ್ಡ್ ಅಥವಾ ಬೇರಾವುದೇ ಫೋನನ್ನು ಎಕ್ಸ್‌ಚೇಂಜ್ ಮಾಡಿಯೋ, ಅಥವಾ ಬೇರೆಯವರಿಗೆ ಮಾರಾಟ ಮಾಡಿಯೋ, ಹೊಸದನ್ನು ಕೊಳ್ಳಬೇಕೆಂದಿದ್ದೀರಾದರೆ, ಎರಡು ವಿಷಯಗಳನ್ನು ಪ್ರಮುಖವಾಗಿ ನೆನಪಿಡಿ. ಮೊದಲನೆಯದು ಆ ಫೋನಿನಲ್ಲಿರುವ ಮೆಮೊರಿ ಕಾರ್ಡ್ ತೆಗೆದಿರಿಸಬೇಕು ಅಥವಾ ಫಾರ್ಮ್ಯಾಟ್ ಮಾಡಬೇಕು ಮತ್ತು ಎರಡನೆಯದು ಮೊಬೈಲ್ ಸಾಧನದ ಮೆಮೊರಿಯಲ್ಲಿರುವ ಎಲ್ಲ ವೈಯಕ್ತಿಕ ಮಾಹಿತಿಗಳೆಲ್ಲವನ್ನೂ (ಡೇಟಾ) ಅಳಿಸಿಬಿಡಬೇಕು. ಫೋನ್…

Rate this:

ಆಂಡ್ರಾಯ್ಡ್ ಫೋನ್ ಕಳೆದುಹೋದರೆ…

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ (ಫೆಬ್ರವರಿ 10, 2014)ನಿಮ್ಮ ಫೋನ್ ಕಳೆದುಹೋದರೆ ಅಥವಾ ಆಕಸ್ಮಿಕವಾಗಿ ಎಲ್ಲೋ ಮರೆತುಬಿಟ್ಟರೆ, ಅದು ದುರುಪಯೋಗವಾಗುವ ಸಾಧ್ಯತೆಗಳು ಹೆಚ್ಚು. ಅದರಲ್ಲಿ ನಿಮ್ಮ ಮಹತ್ವದ ಫೈಲುಗಳು, ಮಾಹಿತಿ ಇರುತ್ತವೆ ಮತ್ತು ಜಿಮೇಲ್ ಖಾತೆಗೂ ಲಾಗಿನ್ ಆಗಿಯೇ ಇರುತ್ತೀರಿ. ಅದು ಬೇರೆಯವರ ಕೈಗೆ ಸಿಲುಕಿ, ನಿಮಗೆ ಸಮಸ್ಯೆಯಾಗುವುದನ್ನು ತಡೆಯಲು ಮತ್ತು ಅದು ಎಲ್ಲಿದೆ ಅಂತ ಪತ್ತೆ ಹಚ್ಚಲು Andoid Device Manager ಎಂಬ ವ್ಯವಸ್ಥೆ ನೆರವಾಗುತ್ತದೆ ಎಂಬ ಬಗ್ಗೆ ಹಿಂದಿನ ವಾರದ ಅಂಕಣದಲ್ಲಿ ಪ್ರಸ್ತಾಪಿಸಿದ್ದೆ. ಈ…

Rate this:

ಹೊಸ ಆಂಡ್ರಾಯ್ಡ್ ಮೊಬೈಲ್ ಖರೀದಿಸಿದ್ದೀರಾ?

ಮಾಹಿತಿ@ತಂತ್ರಜ್ಞಾನ, ವಿಜಯ ಕರ್ನಾಟಕ ಅಂಕಣ (ಫೆಬ್ರವರಿ 3, 2014)ಟಚ್ ಸ್ಕ್ರೀನ್ ಮೊಬೈಲ್‌ಗಳ ಕ್ರೇಜ್ ಹೆಚ್ಚಾಗಿದೆ. ನೀವು ಕೂಡ ಅಂಥದ್ದೇ ಆಕರ್ಷಕ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಕೊಂಡಿದ್ದೀರಿ, ಹೇಗೆ ಪ್ರಾರಂಭಿಸಬೇಕು, ಏನೆಲ್ಲಾ ಮಾಡಬಹುದು ಎಂಬುದು ತಿಳಿಯುತ್ತಿಲ್ಲವೇ? ಮುಂದೆ ಓದಿ. ಇಂಟರ್ನೆಟ್ ಇದ್ದರೆ ಮಾತ್ರ ಸ್ಮಾರ್ಟ್‌ಫೋನಿನ ಪರಿಪೂರ್ಣ ಪ್ರಯೋಜನ ಪಡೆಯಬಹುದು ಎಂಬುದು ತಿಳಿದಿರಲಿ. ಹೀಗಾಗಿ ನಿಮ್ಮ ಸಿಮ್ ಕಾರ್ಡ್‌ನಲ್ಲಿ ಇಂಟರ್ನೆಟ್ ಸಂಪರ್ಕ ಹಾಗೂ ನಿಮಗೊಂದು ಜಿಮೇಲ್ ಖಾತೆ ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಆಂಡ್ರಾಯ್ಡ್ ಎಂಬುದು ಗೂಗಲ್ ಒಡೆತನದ ಕಾರ್ಯಾಚರಣೆ ವ್ಯವಸ್ಥೆಯಾಗಿರುವುದರಿಂದ ಜಿಮೇಲ್…

Rate this: