ಟೆಕ್ ಟಾನಿಕ್: FB ಹ್ಯಾಕ್ ಆಗಿದೆಯೇ?

ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ ಎಂಬ ಬಗ್ಗೆ ಸಂದೇಹವಿದೆಯೇ? ಅಥವಾ ಪಾಸ್‌ವರ್ಡ್ ರೀಸೆಟ್ ಮಾಡಲು ನೀವು ಕೋರಿಕೆ ಸಲ್ಲಿಸದಿದ್ದರೂ, ನಿಮ್ಮ ಮೊಬೈಲ್ ಫೋನ್‌ಗೆ ಸಂದೇಶ OTP ಬಂದಿದೆಯೇ? ಬೇರೆಯವರು ನಿಮ್ಮ ಖಾತೆಯನ್ನು ಬಳಸಿದ್ದಾರೆಂಬ ಶಂಕೆ ಬಂತೇ? ಬೇರೆ ಯಾರಾದರೂ ನಿಮ್ಮ ಹೆಸರು, ನಿಮ್ಮ ಫೋಟೋ ಬಳಸಿ ತಮ್ಮದೇ ಖಾತೆ ನಡೆಸುತ್ತಿದ್ದಾರೆಯೇ? ನೀವು ಹಾಕದೇ ಇರುವ ಪೋಸ್ಟ್ ನಿಮ್ಮ ಟೈಮ್‌ಲೈನ್‌ನಲ್ಲಿ ಕಾಣಿಸುತ್ತಿದೆಯೇ? ಇದಕ್ಕಾಗಿ ಫೇಸ್‌ಬುಕ್‌ಗೆ ದೂರು ನೀಡಲು https://www.facebook.com/hacked ಎಂಬಲ್ಲಿಗೆ ಹೋಗಿ. ಅಲ್ಲಿ ಕಂಡು ಬರುವ ಸಾಧ್ಯತೆಗಳನ್ನು ಟಿಕ್…

Rate this:

KPLನಲ್ಲಿ ನವೀನ ತಂತ್ರಜ್ಞಾನ: ಗ್ಯಾಲರಿ, ಅಂಗಣ ಎರಡನ್ನೂ ತೋರಿಸಬಲ್ಲ 360 ಡಿಗ್ರಿ ಕ್ಯಾಮೆರಾ

ಕ್ರಿಕೆಟಿಗೂ ನವೀನ ತಂತ್ರಜ್ಞಾನಕ್ಕೂ ಸಮೀಪದ ನಂಟಿರುವುದು ಎಲ್ಲರಿಗೂ ಗೊತ್ತಿದೆ. ತಂತ್ರಜ್ಞಾನದ ಬಳಕೆಯು ಫಲಿತಾಂಶದ ನಿಖರತೆಯನ್ನು ಖಚಿತಪಡಿಸುತ್ತದೆಯಷ್ಟೇ ಅಲ್ಲದೆ, ವಿಶ್ಲೇಷಣೆಗೆ ನೆರವಾಗುತ್ತದೆ. ಜತೆಗೆ ಆಟಗಾರನೊಬ್ಬನ ಸಾಮರ್ಥ್ಯವೇನು, ಎಲ್ಲಿ ಕೊರತೆಯಿದೆ ಎಂಬುದನ್ನು ವಿಶ್ಲೇಷಿಸಿ ಕ್ಷಮತೆ ಸುಧಾರಣೆಯೂ ಸಹಾಯ ಮಾಡುತ್ತದೆ. ಬೌಲರ್‌ನ ಎಸೆತದ ಜಾಡನ್ನು ಟಿವಿಯಲ್ಲಿ ತೋರಿಸಬಲ್ಲ ಹಾಕ್-ಐ ತಂತ್ರಜ್ಞಾನ, ಚೆಂಡು ಬ್ಯಾಟಿಗೆ ತಗುಲಿದೆಯೇ ಇಲ್ಲವೇ ಎಂಬುದನ್ನು ಅತ್ಯಂತ ಸೂಕ್ಷ್ಮ ಅಂತರದಿಂದ ಕಂಡುಹಿಡಿದು ಬ್ಯಾಟ್ಸ್‌ಮನ್ ಔಟ್ ಆಗಿದ್ದಾನೆಯೇ ಇಲ್ಲವೇ ಎಂಬುದನ್ನು ತಿಳಿಸಬಲ್ಲ ಹಾಟ್‌ಸ್ಪಾಟ್ ತಂತ್ರಜ್ಞಾನ, ಬೌಲರ್ ಎಸೆದ ಚೆಂಡು ಎಷ್ಟು ವೇಗವಾಗಿ…

Rate this:

ದಾರಿ ತಪ್ಪಿದಾಗ ನೆರವಿಗೆ ಬರುವ ಮ್ಯಾಪ್ಸ್ ಬಳಸುವುದು ಹೇಗೆ?

ಬಹುಮುಖೀ ಕಾರ್ಯಸಾಧನೆಗೆ ನೆರವಾಗುವ ಸ್ಮಾರ್ಟ್‌ಫೋನ್‌ಗಳ ಹಲವು ಉಪಯೋಗಗಳಲ್ಲಿ ‘ಮಾರ್ಗ’ದರ್ಶನವೂ ಒಂದು. ಅಂದರೆ, ಯಾವುದಾದರೂ ಊರಿಗೆ ಹೋಗಬೇಕೆಂದಾದರೆ, ಇಲ್ಲವೇ ನಗರದೊಳಗೆ ಒಂದು ಪ್ರದೇಶದಿಂದ ಮತ್ತೊಂದಕ್ಕೆ ನಮ್ಮದೇ ಬೈಕ್, ಕಾರು ಅಥವಾ ಸೈಕಲ್‌ನಲ್ಲಿ ತಿರುಗಾಡಬೇಕೆಂದಾದರೆ, ನಮಗೆ ದಾರಿ ಗೊತ್ತಿರಬೇಕು. ಇದೆಯಲ್ಲ ಮೊಬೈಲ್ ಫೋನ್! ಅದುವೇ ನಮಗೆ ಪ್ರತಿ ತಿರುವಿನಲ್ಲಿಯೂ ಮಾರ್ಗದರ್ಶನ ನೀಡುತ್ತಾ, ದಾರಿ ತೋರುವ ಗುರುವಾಗಿಬಿಡುತ್ತದೆ. ಸ್ಮಾರ್ಟ್‌ಫೋನ್ ಅಥವಾ ಅದೇ ರೀತಿ ಕಾಣಿಸಬಲ್ಲ ಜಿಪಿಎಸ್ ನ್ಯಾವಿಗೇಶನ್ ಸಾಧನವನ್ನು ಒಳಗೊಂಡಿರುವ ಸುಲಭವಾದ ಮಾರ್ಗದರ್ಶಕ ತಂತ್ರಜ್ಞಾನವನ್ನು ಈಗೀಗ ಬಹುತೇಕ ಎಲ್ಲ ಕಾರುಗಳ ಡ್ಯಾಶ್‌ಬೋರ್ಡುಗಳಲ್ಲಿಯೂ…

Rate this:

ಟೆಕ್‌ಟಾನಿಕ್: ಬ್ಲೂವೇಲ್ ಅನ್ನೋದು ಗೇಮ್ ಅಲ್ಲ, ಅದು ಸಾವಿನಾಟ

ಮಾಧ್ಯಮಗಳಲ್ಲಿ ಎಷ್ಟೇ ವರದಿಯಾಗಿದ್ದರೂ, ಜನ ಜಾಗೃತಿ ಇನ್ನೂ ಮೂಡಿಲ್ಲವೆಂಬುದಕ್ಕೆ ಸಾಕಷ್ಟು ಪುರಾವೆ ಸಿಗುತ್ತಿದೆ. ಬ್ಲೂವೇಲ್ ಎಂಬ ಹೆಸರಿನಲ್ಲಿ ಈಗ ಸುದ್ದಿ-ಸದ್ದು ಆಗುತ್ತಿರುವುದು ಒಂದು ‘ಗೇಮ್’ ಎಂಬುದು ದಿಟವಾದರೂ, ಇದು ಡೌನ್‌ಲೋಡ್ ಮಾಡಿಕೊಂಡು ಆಡುವಂತಹಾ ಆಟ ಅಲ್ಲವೇ ಅಲ್ಲ. ಆನ್‌ಲೈನ್‌ನಲ್ಲಿರುವಾಗ, ಮಾನಸಿಕವಾಗಿ ಕುಗ್ಗಿರುವವರನ್ನೇ ಗುರಿಯಾಗಿಟ್ಟುಕೊಂಡು, ಅವರನ್ನು ಪರಿಚಯ ಮಾಡಿಕೊಂಡು, ಬಳಿಕ ಫೋನ್, ಮೆಸೇಜ್ ಮೂಲಕ ಸಂಪರ್ಕಿಸಿ ಆಟ ಆಡಿಸುವ, ಕೊನೆಗೆ ಆತ್ಮಹತ್ಯೆಗೆ ಪ್ರೇರೇಪಿಸುವ ಕೊಲ್ಲುವ ಆಟ. ಬ್ಲೂವೇಲ್ ಎಂಬುದು ಆತ್ಮಹತ್ಯೆಯ ಅಥವಾ ಸಾವಿನ ಆಟ ಅಂತಲೂ ಕರೆಯಬಹುದು. ‘ನಿಷ್ಪ್ರಯೋಜಕರು…

Rate this:

ನಿಮ್ಮ Google ಚಟುವಟಿಕೆಯ ಜಾಡು ಅಳಿಸುವುದು ಹೇಗೆ?

ನಿಮ್ಮ ಅಂಕಣ 6ನೇ ವರ್ಷಕ್ಕೆ ಮಾಹಿತಿ ತಂತ್ರಜ್ಞಾನದ ಕೆಲವೊಂದು ಸುಲಭ ತಂತ್ರೋಪಾಯಗಳು ಆ ವಿಷಯದ ಬಗ್ಗೆ ಓದಿದವರಿಗಷ್ಟೇ ಅಲ್ಲ, ಜನ ಸಾಮಾನ್ಯರಿಗೂ ತಲುಪುವಂತಾಗಲಿ ಎಂಬ ಉದ್ದೇಶದಿಂದ ವಿಜಯ ಕರ್ನಾಟಕದಲ್ಲಿ 27 ಆಗಸ್ಟ್ 2012ರಂದು ಆರಂಭಿಸಿದ ‘ಮಾಹಿತಿ@ತಂತ್ರಜ್ಞಾನ’ ಅಂಕಣ 5 ವರ್ಷಗಳನ್ನು ಪೂರೈಸಿದ ಶುಭ ಘಳಿಗೆ. ಫೋನ್, ಇಮೇಲ್ ಹಾಗೂ ನೇರ ಭೇಟಿಯಾದ ಸಂದರ್ಭದಲ್ಲಿ ತಮ್ಮಸಂದೇಹಗಳನ್ನು ಕೇಳುತ್ತಲೇ ‘ಮೇವು’ ಒದಗಿಸುತ್ತಾ, ಪ್ರತಿ ವಾರದ ಈ ಅಂಕಣವು ರೂಪುಗೊಳ್ಳಲು ಸಹಕರಿಸಿದ ಓದುಗರು, ಸಹೋದ್ಯೋಗಿಗಳೆಲ್ಲರಿಗೂ ಧನ್ಯವಾದಗಳು. ಒಬ್ಬರ ಸಮಸ್ಯೆ ಪರಿಹಾರವಾದ ರೀತಿಯಲ್ಲೇ…

Rate this:

ಟೆಕ್ ಟಾನಿಕ್: ಬ್ಲೂಟೂತ್‌ನಲ್ಲಿ ವರ್ಗಾವಣೆ

ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಹಾಗೂ ನಮ್ಮ ಸ್ಮಾರ್ಟ್ ಫೋನ್ ನಡುವೆ ಫೈಲುಗಳನ್ನು ಪರಸ್ಪರ ವರ್ಗಾಯಿಸಿಕೊಳ್ಳಲು, ಯುಎಸ್‌ಬಿ ಕೇಬಲ್ ಬೇಕೂಂತೇನೂ ಇಲ್ಲ. ಬ್ಲೂಟೂತ್ ಎಂಬ ವ್ಯವಸ್ಥೆಯ ಮೂಲಕವೂ ಸಾಧ್ಯ ಎಂಬುದು ಕೆಲವರಿಗೆ ತಿಳಿದಿಲ್ಲ. ಇದಕ್ಕಾಗಿ, ಮೊಬೈಲ್‌ನಲ್ಲಿ ಬ್ಲೂಟೂತ್ ಆನ್ ಮಾಡಿ, ಕಂಪ್ಯೂಟರಿನಲ್ಲಿ ಕಂಟ್ರೋಲ್ ಪ್ಯಾನೆಲ್‌ನಲ್ಲಿ ಡಿವೈಸಸ್ ಎಂದಿರುವಲ್ಲಿ ಬ್ಲೂಟೂತ್ ಕ್ಲಿಕ್ ಮಾಡಿದಾಗ, ಪಕ್ಕದಲ್ಲಿರುವ, ಬ್ಲೂಟೂತ್ ಆನ್ ಇರುವ ಸಾಧನಗಳ ಪಟ್ಟಿಯನ್ನು ತೋರಿಸುತ್ತದೆ. ನಿಮ್ಮ ಮೊಬೈಲ್ ಸಾಧನವನ್ನು ಕ್ಲಿಕ್ ಮಾಡಿ ಪೇರ್ ಬಟನ್ ಒತ್ತಿ. ಒಂದು ಪಿನ್ ಸಂಖ್ಯೆ ಕಾಣಿಸುತ್ತದೆ.…

Rate this:

ಶ್!!! ಇದು ಪ್ರೈವೇಟ್ ವಿಷ್ಯ!

ಅಂತರ್ಜಾಲದಲ್ಲಿ ಜಾಲಾಡುತ್ತಿರುವಾಗ ಖ್ಯಾತ ಬ್ರ್ಯಾಂಡ್‌ನ ಹೊಸ ಫೋನ್ ಬಗ್ಗೆ ಮಾಹಿತಿ ತಿಳಿದುಕೊಳ್ಳಲೆಂದು ಬ್ರೌಸ್ ಮಾಡುತ್ತಿದ್ದೆ. ಅದು ಹೇಗಿದೆ, ಏನು ವಿಶೇಷತೆ ಅಂತೆಲ್ಲ ತಿಳಿದುಕೊಂಡ ಬಳಿಕ ಬ್ರೌಸರ್ ಮುಚ್ಚಿ, ಬೇರೊಂದು ಅಂತರ್ಜಾಲ ತಾಣವನ್ನು ನೋಡಲೆಂದು ತೆರೆದೆ. ಮತ್ತದೇ ಫೋನ್ ಬ್ರ್ಯಾಂಡ್ ಕುರಿತ ಜಾಹೀರಾತು! ಅರರೆ, ಏನಾಶ್ಚರ್ಯ… ನನಗಿದು ಬೇಕಿತ್ತು, ಅದರ ಬಗ್ಗೆ ತಿಳಿದುಕೊಳ್ಳಲು/ಖರೀದಿಸಲು ಇಚ್ಛಿಸಿದೆ ಎಂಬ ವಿಷಯ ಇಂಟರ್ನೆಟ್ಟಿಗೆ ತಿಳಿದದ್ದು ಹೇಗೆ? ನನ್ನ ಮನಸ್ಸನ್ನು ಓದುವ ಶಕ್ತಿ ಅದಕ್ಕಿದೆಯೇ? ಮತ್ತೊಂದು ಪ್ರಕರಣ. ಯಾವುದೋ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳುವಾಗ ಸ್ಕ್ರೀನ್‌ನಲ್ಲಿ…

Rate this: