ಆನ್‌ಲೈನ್‌ನಲ್ಲಿಯೂ ಮಕ್ಕಳ ರಕ್ಷಣೆ: ಪೋಷಕರಿಗೆ ಹೆಚ್ಚುವರಿ ಜವಾಬ್ದಾರಿ
ಕಳೆದ ವಾರ ಬೆಂಗಳೂರಲ್ಲೇ ನಡೆದ ಒಂದು ಘಟನೆ. ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಮುಂಬಯಿಯ ‘ಸ್ನೇಹಿತ’ನೊಬ್ಬ ಕಿರುಕುಳ ನೀಡುತ್ತಿದ್ದಾನೆ, ಕಾಲೇಜಿಗೆ ಬಂದು ಪೀಡಿಸಿದ್ದಾನೆ, ಫೋಟೋಗಳನ್ನು ತಿದ್ದುಪಡಿ ಮಾಡಿ ಬೆದರಿಸುತ್ತಿದ್ದಾನೆ ಅಂತ ಬೆಂಗಳೂರಿನ ಪಿಯು ವಿದ್ಯಾರ್ಥಿನಿಯೊಬ್ಬಳು ಪೊಲೀಸರಿಗೆ ದೂರು ನೀಡುತ್ತಾಳೆ. ಇದು ತೀರಾ ಇತ್ತೀಚಿನ ಘಟನೆ. ಸಾಮಾಜಿಕ ಜಾಲ ತಾಣದಲ್ಲಿ ಬೆಳ್ಳಗಿರುವುದೆಲ್ಲವೂ ಹಾಲಲ್ಲ ಎಂಬುದನ್ನು ಅರಿಯದ ಮುಗ್ಧ ಯುವ ಜನಾಂಗವಿಂದು, ಸೂಕ್ತ ಮಾರ್ಗದರ್ಶನವಿಲ್ಲದೆ ಇಂಟರ್ನೆಟ್ ಲೋಕದಲ್ಲಿ ದಾರಿ ತಪ್ಪುತ್ತಿದೆ ಮತ್ತು ಕಡೆಗೆ ಕಿರುಕುಳವನ್ನೂ ಅನುಭವಿಸುತ್ತಿದೆ. ಇದು ತಂತ್ರಜ್ಞಾನ ಯುಗದಲ್ಲಿ ಪೋಷಕರಿಗೆ ಹೆಚ್ಚುವರಿ…