ಆಂಡ್ರಾಯ್ಡ್ ಒರಿಯೋ, ಆಂಡ್ರಾಯ್ಡ್ ಒನ್, ಆಂಡ್ರಾಯ್ಡ್ ಗೋ: ಏನು ವ್ಯತ್ಯಾಸ?
ಆಂಡ್ರಾಯ್ಡ್ ಮೊಬೈಲ್ ಫೋನ್ ಬಳಸುತ್ತಿರುವ ಅನೇಕರು ಅದರ ಆವೃತ್ತಿಗಳ (ವರ್ಶನ್) ಬಗ್ಗೆ ಈಗಲೂ ಗೊಂದಲದಲ್ಲಿದ್ದಾರೆ ಅಂತ ಗೊತ್ತಾಗಿದ್ದು, ಇತ್ತೀಚೆಗೆ ಮೈಸೂರಿಗೆ ಹೋಗಿದ್ದಾಗ. ಆಂಡ್ರಾಯ್ಡ್, ನೌಗಾಟ್, ಒರಿಯೋ, ಗೋ, ಆಂಡ್ರಾಯ್ಡ್ ಒನ್… ಹೀಗೆ ಏನೇನೋ ಮಾರುಕಟ್ಟೆಯಲ್ಲಿ ಕೇಳಿಬರುತ್ತಿದೆ. ಈ ಬಗ್ಗೆ ಗೊಂದಲ ನಿವಾರಿಸಿ, ಯಾವುದು ಒಳ್ಳೆಯದು ಅಂತ ಕೇಳಿದವರು ಹಲವರು. ಈ ಕುರಿತು ಫೋನ್‌ನಲ್ಲಿಯೂ ಸಾಕಷ್ಟು ಮಂದಿ ಸಲಹೆ ಕೇಳಿದ್ದಾರೆ. ನಿಮ್ಮಲ್ಲೂ ಇರಬಹುದಾದ ಗೊಂದಲ ನಿವಾರಣೆಗಾಗಿ ಇಲ್ಲಿದೆ ಮಾಹಿತಿ. ಆಂಡ್ರಾಯ್ಡ್ ಎಂಬುದು ಸಾಫ್ಟ್‌ವೇರ್ ದಿಗ್ಗಜ ಸಂಸ್ಥೆ ಗೂಗಲ್ ಒಡೆತನದಲ್ಲಿರುವ…