ಅಣ್ಣಾ ಹೋರಾಟ: ದಾರಿ ತಪ್ಪಿಸುತ್ತಿದ್ದಾರೆ ಎಚ್ಚರ!
ಒಬ್ಬ ಅಣ್ಣಾ ಹಜಾರೆ ಇಡೀ ದೇಶವನ್ನು ಭ್ರಷ್ಟಾಚಾರದ ವಿರುದ್ಧ ಒಗ್ಗೂಡಿಸಿದ್ದಾರೆ. ನಾವೆಲ್ಲರೂ ಸೇರಿ, ನಮ್ಮ ನಾಯಕರು ಅಂತ ಸಂಸತ್ತಿಗೆ ಆರಿಸಿ ಕಳುಹಿಸಿಕೊಟ್ಟು, ಸರಕಾರ ಚಲಾಯಿಸಲೆಂದು ಜನಾದೇಶ ಪಡೆದು ಹೋದವರೆಲ್ಲಾ ಈಗ ಕುಳಿತಲ್ಲೇ ಪತರಗುಟ್ಟಲಾರಂಭಿಸಿದ್ದಾರೆ. ಅಣ್ಣಾ ಹಜಾರೆಯೆಂಬ ಅಹಿಂಸಾವಾದಿಯ ಹೋರಾಟದ ಶಕ್ತಿಯೆದುರು ಏನು ಮಾಡಬೇಕೆಂದು ಅರಿಯದೆ ಅವರೆಲ್ಲರೂ ಒಂದರ್ಥದಲ್ಲಿ ದಿಕ್ಕುಗೆಟ್ಟವರಂತೆ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ಕೊಡುತ್ತಿದ್ದಾರೆ. ಒಟ್ಟೂ 11 ದಿನಗಳನ್ನು ಅವಲೋಕಿಸಿ ನೋಡಿದರೆ, ನಮ್ಮ ದೇಶವನ್ನು ಮುನ್ನಡೆಸುವ, ಎದೆಗಾರಿಕೆಯುಳ್ಳ, ದಿಟ್ಟ ನಿರ್ಧಾರ ಕೈಗೊಳ್ಳುವ ನಾಯಕನೊಬ್ಬನ ಕೊರತೆ ಎದ್ದು…