ಮೊಬೈಲ್‌ನೊಳಗೆ ಗೂಢಚಾರಿ: ನೀವು ತಿಳಿದಿರಬೇಕಾದ 10 ಸಂಗತಿಗಳು

ಪೆಗಾಸಸ್ ಎಂಬ ಕು-ತಂತ್ರಾಂಶವು (ಮಾಲ್-ವೇರ್) ಕರೆ ಸ್ವೀಕರಿಸದಿದ್ದರೂ, ಲಾಕ್ ಆಗಿರುವ ಫೋನ್‌ನೊಳಗೂ ಬಂದು ಕೂರಬಹುದು. ಮಿಸ್ಡ್ ಕಾಲ್ ಮೂಲಕ ಹ್ಯಾಕ್ ಮಾಡಿ, ಆ ಮೊಬೈಲ್ ಒಡೆಯರ ಅರಿವಿಗೆ ಬಾರದಂತೆ ಅದರಲ್ಲಿರುವ ಎಲ್ಲ ಮಾಹಿತಿಯನ್ನು ಪಡೆಯುವ ಪೆಗಾಸಸ್ ಸ್ಪೈವೇರ್ ಈಗ ಸದ್ದು ಮಾಡುತ್ತಿದೆ. ಇದರ ಬಗ್ಗೆ ನೀವು ತಿಳಿದಿರಲೇಬೇಕಾದ 10 ಅಂಶಗಳು ಇಲ್ಲಿವೆ: ಇಸ್ರೇಲ್ ಮೂಲದ ಎನ್‌ಎಸ್ಒ ಗ್ರೂಪ್ ಪೆಗಾಸಸ್ ಎಂಬ ಸ್ಪೈವೇರ್ ಸಿದ್ಧಪಡಿಸಿದ್ದು, ಭಯೋತ್ಪಾದನೆ ಮತ್ತು ಅಪರಾಧ ನಿಯಂತ್ರಣಕ್ಕಾಗಿ ಇದನ್ನು ಪರವಾನಗಿ ಇರುವ ಸರಕಾರಿ ಏಜೆನ್ಸಿಗಳು ಮತ್ತು…

Rate this:

ಪೆಗಾಸಸ್ ಎಂಬ ಪೆಡಂಭೂತದ ಜನಕ ಎನ್ಎಸ್ಒ: ಇಸ್ರೇಲ್ ಕಂಪನಿಯ ಹಿಂದೆ ಭಾರತೀಯನ ಜಾಡು

ಪೆಗಾಸಸ್! ಜಗತ್ತಿನಲ್ಲಿ ಇಂಟರ್ನೆಟ್ಟಿಗರನ್ನು ಪ್ರೈವೆಸಿ ಹೆಸರಲ್ಲಿ ಬೆಚ್ಚಿ ಬೀಳಿಸಿರುವ ಇನ್ನೊಂದು ಹೆಸರು. ಜಾಗತಿಕವಾಗಿ ರಾಜಕೀಯ ಮುಖಂಡರು, ಪತ್ರಕರ್ತರು, ಮಾನವ ಹಕ್ಕುಗಳ ಹೋರಾಟಗಾರರು ಮಾತ್ರವೇ ಅಲ್ಲ, ಉಗ್ರಗಾಮಿಗಳ ಕಿವಿ ಕೂಡ ಪೆಗಾಸಸ್ ಕಡೆ ನೆಟ್ಟಿರುವುದು ಸುಳ್ಳಲ್ಲ. ಇಸ್ರೇಲಿನ ಎನ್ಎಸ್ಒ ಗ್ರೂಪ್ ಟೆಕ್ನಾಲಜೀಸ್ ಎಂಬ ತಂತ್ರಜ್ಞಾನ ಕಂಪನಿಯೊಂದು ಹೊರಬಿಟ್ಟಿರುವ ತಂತ್ರಾಂಶವೇ ಪೆಗಾಸಸ್. ಕೇವಲ ಒಂದು ಮಿಸ್ಡ್ ಕಾಲ್ ಮೂಲಕವೇ (ಕರೆ ಸ್ವೀಕರಿಸಿದರೂ, ಸ್ವೀಕರಿಸದಿದ್ದರೂ) ವ್ಯಕ್ತಿಯೊಬ್ಬನ ಮೊಬೈಲ್ ಫೋನ್‌ನೊಳಗೆ ಕುಳಿತುಕೊಳ್ಳಬಲ್ಲ ಕು-ತಂತ್ರಾಂಶ (ಮಾಲ್‌ವೇರ್). ಸಂಪರ್ಕ ಸಂಖ್ಯೆಗಳು, ಕರೆ, ಎಸ್ಸೆಮ್ಮೆಸ್, ವಾಟ್ಸ್‌ಆ್ಯಪ್‌ ಸಂದೇಶಗಳು,…

Rate this: