ಕೊರೋನಾ ವೈರಸ್: ಯಕ್ಷಗಾನ ಹಾಡುಗಳ ಮೂಲಕ ಜನಜಾಗೃತಿ

ಬೆಂಗಳೂರು: ಕರಾವಳಿಯ ಜೀವನಾಡಿಯೇ ಆಗಿರುವ ಯಕ್ಷಗಾನ ಜನ ಜಾಗೃತಿಯಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ಮಹಾಮಾರಿಯಂತಹಾ ಕಾಯಿಲೆಗಳು ಬಂದಾಗ ಅದರ ಬಗ್ಗೆ ಜನಜಾಗೃತಿ ಮೂಡಿಸುವ ಏಡ್ಸ್ ಅಸುರ ಸಂಹಾರದಂತಹಾ ಯಕ್ಷಗಾನ ಪ್ರಸಂಗಗಳನ್ನೇ ಪ್ರದರ್ಶಿಸಿ ಸೈ ಅನ್ನಿಸಿಕೊಂಡ ಯಕ್ಷಗಾನ ರಂಗವು ಈಗ ಜಾಗತಿಕವಾಗಿ ಆತಂಕ ಮೂಡಿಸಿರುವ ಕೊರೊನಾ ವೈರಸ್‌ಗೂ ಸ್ಪಂದಿಸಿದೆ. ದಕ್ಷಿಣೋತ್ತರ ಕನ್ನಡ ಜಿಲ್ಲೆಗಳು ಮತ್ತು ಕಾಸರಗೋಡು, ಮಲೆನಾಡು ಪ್ರದೇಶಗಳಲ್ಲಿ ಮನರಂಜನೆಯೊಂದಿಗೆ ಮಾಹಿತಿಯನ್ನೂ, ಪೌರಾಣಿಕ ಅರಿವನ್ನೂ ಪ್ರಸಾರ ಮಾಡುತ್ತಿರುವ ಯಕ್ಷಗಾನ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಲಾವಿದರಿಗೂ ಕೊರೋನಾ ವೈರಸ್ ಬಿಸಿ ತಟ್ಟಿದೆ.…

Rate this:

ಮೊಬೈಲ್‌ನಲ್ಲಿ ಡಾರ್ಕ್ ಮೋಡ್ ಎಂಬ ಹೊಸ ಟ್ರೆಂಡ್: ಏನಿದು, ನಮಗೇನು ಲಾಭ?

ಕಳೆದ ಎರಡೇ ಎರಡು ವರ್ಷಗಳಲ್ಲಿ ಮೊಬೈಲ್ ಅವಲಂಬನೆ ಜಾಸ್ತಿಯಾಗಿಬಿಟ್ಟಿದೆ ಎಂಬುದು ನಿಮ್ಮ ಗಮನಕ್ಕೆ ಬಂದಿದೆಯೇ? ಅದರಲ್ಲೂ ವಾಟ್ಸ್ಆ್ಯಪ್, ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂಗಳ ಬಳಕೆ ಹೆಚ್ಚಾಗಿದೆ; ಮಕ್ಕಳಾದರೆ ಗೇಮ್ಸ್‌ನಲ್ಲಿ (ದೊಡ್ಡವರೂ ಕೂಡ!) ಮುಳುಗೇಳುತ್ತಿದ್ದಾರೆ. ಇದರ ನೇರ ಪರಿಣಾಮವಾಗುತ್ತಿರುವುದು ನಮ್ಮ ಕಣ್ಣುಗಳ ಮೇಲೆ ಎಂಬುದು ಸರ್ವವಿದಿತ. ಹಾಗೂ ಕಣ್ಣಿಗೇ ನಿದ್ದೆ ಹತ್ತುವುದರಿಂದಾಗಿ ನಿದ್ದೆಯ ಮೇಲೂ, ಪರಿಣಾಮವಾಗಿ ತತ್ಸಂಬಂಧಿತ ಅನಾರೋಗ್ಯಗಳಿಗೂ ಮೊಬೈಲ್ ಫೋನೆಂಬ ಮಾಯಾಲೋಕವು ನಮಗರಿವಿಲ್ಲದಂತೆಯೇ ಕಾರಣವಾಗುತ್ತಿರುವುದು ದಿಟ. ನಿದ್ದೆಗೆ ಕಾರಣವಾಗುವ ಹಾರ್ಮೋನುಗಳಲ್ಲಿ ಮೆಲಟೋನಿನ್ ಕೂಡ ಒಂದು. ಆದರೆ ಮೊಬೈಲ್, ಟ್ಯಾಬ್ಲೆಟ್,…

Rate this:

ಫೇಸ್‌ಬುಕ್‌: ಖಾಸಗಿ ಮಾಹಿತಿ ರಕ್ಷಣೆ ಸುಲಭ, ಸರಳ

ಡಿಜಿಟಲ್ ಕ್ರಾಂತಿಯಾಗಿದೆ. ಆದರೂ ಅದರ ಬೆನ್ನಿಗೇ ಬಂದಿರುವ ಆತಂಕಗಳ ಬಗ್ಗೆ ಅರಿವು ಕಡಿಮೆ. ಫೇಸ್‌ಬುಕ್‌ನಲ್ಲಿ ಹಲವು ಹಂತಗಳಲ್ಲಿ ನಮ್ಮ ಫೋನ್‌ ನಂಬರ್, ಜನ್ಮದಿನಾಂಕ, ಊರು, ಇಮೇಲ್ ಐಡಿ..ಯಂತಹ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ. ಇವೆಲ್ಲ ನಮ್ಮ ಬ್ಯಾಂಕ್ ಖಾತೆ ಅಥವಾ ಫೇಸ್‌ಬುಕ್ ಖಾತೆ ಹ್ಯಾಕ್ ಆಗುವುದಕ್ಕೂ ಕಾರಣವಾಗುತ್ತದೆ. ಈ ಕಾರಣಕ್ಕಾಗಿಯೇ ಪ್ರೈವೆಸಿ ಬಗ್ಗೆ ಸುಶಿಕ್ಷಿತರು ಆತಂಕ ವ್ಯಕ್ತಪಡಿಸುವುದು. ಫೇಸ್‌ಬುಕ್‌ನಲ್ಲಿ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿರಿಸಲು ಸರಳ ಉಪಾಯವಿದೆ. ಅದಕ್ಕೂ ಮೊದಲು, ’ಕೆಲವು ಮಾಹಿತಿಯನ್ನು ನಾವು ಇಷ್ಟವಿಲ್ಲದಿದ್ದರೂ ಬಚ್ಚಿಡಬೇಕಾಗುತ್ತದೆ’ ಎಂಬ ಸತ್ಯವನ್ನು ಅರಗಿಸಿಕೊಳ್ಳಬೇಕು.…

Rate this:

OTT: ಭೃಂಗದ ಬೆನ್ನೇರಿ ಬಂದ ಮನರಂಜನಾ ವಿಲಾಸ

ಟೆಲಿಕಾಂ ರಂಗದ ಕ್ರಾಂತಿಯಿಂದಾಗಿ ಸ್ಥಿರ ದೂರವಾಣಿಯಿಂದ ಸಂಚಾರಿ ದೂರವಾಣಿಗೆ ನಮ್ಮ ಸ್ಥಾನಮಾನವನ್ನು ಏರಿಸಿಕೊಂಡ ಬಳಿಕ, ಕಿರು ಸಂದೇಶ ಸೇವೆ (ಎಸ್ಎಂಎಸ್) ಕೇವಲ ಅಧಿಕೃತ ಸಂವಹನಕ್ಕೆ ಸೀಮಿತವಾಗಿಬಿಟ್ಟಿರುವುದನ್ನು ಹೆಚ್ಚಿನವರು ಗಮನಿಸಿರಬಹುದು. ಫೀಚರ್ ಫೋನ್‌ಗಳು ಸ್ಮಾರ್ಟ್ ಫೋನ್‌ಗಳಾಗಿ ಬದಲಾದಾಗ, ಜನರು ದಿನದ ಜಂಜಡವನ್ನು ಕಳೆಯಲು, ಒತ್ತಡ, ಕಾರ್ಯಬಾಹುಳ್ಯದ ನಡುವೆ ಮನಸ್ಸನ್ನು ಒಂದಿಷ್ಟು ಪ್ರಫುಲ್ಲಿತಗೊಂಡು ನವಚೈತನ್ಯ ಪಡೆದುಕೊಳ್ಳಲು ಮನೋರಂಜನೆಗಾಗಿಯೇ ಇವನ್ನು ಬಳಸಲಾರಂಭಿಸಿದರು. ಸ್ಮಾರ್ಟ್ ಹೆಸರಿನಲ್ಲಿ ತಂತ್ರಜ್ಞಾನವು ಬೆಳೆದ ಬಗೆಯಿದು. ಮೊಬೈಲ್ ಸೇವಾ ಕ್ಷೇತ್ರದ ಪೈಪೋಟಿ ರಂಗಕ್ಕೆ ಜಿಗಿದ ಜಿಯೋ, ಅಂತರಜಾಲ ಜಾಲಾಟದ…

Rate this:

ಭಾರತದ ಹೊರಗೆ ವಾಟ್ಸ್ಆ್ಯಪ್ ಪಾವತಿ ವ್ಯವಸ್ಥೆ

ದೇಶದಲ್ಲಿ ಡಿಜಿಟಲ್ ಕ್ರಾಂತಿಗೆ ಹೆಚ್ಚು ಒತ್ತು ನೀಡಲಾಗುತ್ತಿರುವ ಹಂತದಲ್ಲಿ ಬಳಕೆದಾರರನ್ನು ಸೆಳೆದುಕೊಳ್ಳಲು ಸಾಕಷ್ಟು ತಂತ್ರಜ್ಞಾನ ಕಂಪನಿಗಳು ತಮ್ಮದೇ ಆದ ಡಿಜಿಟಲ್ ವ್ಯಾಲೆಟ್ ಮೂಲಕ ಪ್ರಯತ್ನ ನಡೆಸುತ್ತಲೇ ಬಂದಿವೆ. ಭಾರತದಲ್ಲಿ ಅತೀ ಹೆಚ್ಚು ಬಳಕೆಯಲ್ಲಿರುವ ಸಾಮಾಜಿಕ ಸಂವಹನಾ ಆ್ಯಪ್ ‘ವಾಟ್ಸ್ಆ್ಯಪ್’ನ ಪೇಮೆಂಟ್ ಬ್ಯಾಂಕ್ ಕುರಿತು ಸಾಕಷ್ಟು ಕುತೂಹಲಗಳಿದ್ದವು. ಇದೀಗ ಹೊಚ್ಚ ಹೊಸ ಸುದ್ದಿಯೆಂದರೆ, ವಾಟ್ಸ್ಆ್ಯಪ್ ಪೇ ಎಂಬ ಪಾವತಿ ವ್ಯವಸ್ಥೆಯು ಇನ್ನಾರು ತಿಂಗಳಲ್ಲಿ ಭಾರತ ಹೊರತಾಗಿ ಆರು ದೇಶಗಳಿಗೆ ಲಭ್ಯವಾಗಲಿದೆ. ಕಳೆದ ಒಂದು ವರ್ಷದಿಂದ ಫೇಸ್‌ಬುಕ್ ಒಡೆತನದ ವಾಟ್ಸ್ಆ್ಯಪ್ ತನ್ನ…

Rate this:

ಅಗ್ಗದ ದರದಲ್ಲಿ ಉತ್ತಮ ಬ್ಯಾಟರಿ ಸಾಮರ್ಥ್ಯದ Tecno Spark Go Plus

ಕೈಗೆಟಕುವ ದರದಲ್ಲಿ ಅತ್ಯಾಧುನಿಕ ತಾಂತ್ರಿಕ ವೈಶಿಷ್ಟ್ಯಗಳಿರುವ ಫೋನ್‌ಗಳ ಮೂಲಕ ಈಗಾಗಲೇ ಗಮನ ಸೆಳೆದಿರುವ ಹಾಂಕಾಂಗ್ ಮೂಲದ ಟ್ರಾನ್ಸಿಯಾನ್ ಕಂಪನಿಯು ಇದೀಗ ತನ್ನ ಟೆಕ್‌ನೋ ಮಾದರಿಯ ಸ್ಪಾರ್ಕ್ ಸರಣಿಯಲ್ಲಿ ‘ಗೋ ಪ್ಲಸ್’ ಎಂಬ ವಿನೂತನ ಸ್ಮಾರ್ಟ್ ಫೋನನ್ನು ಈ ವರ್ಷಾರಂಭದಲ್ಲಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅಬ್ಬರದ ಅತ್ಯಾಧುನಿಕ ವೈಶಿಷ್ಟ್ಯಗಳ ನಡುವೆ, ಕನಿಷ್ಠ ಅಗತ್ಯತೆಗಳನ್ನು ಪೂರೈಸಬಲ್ಲ ಮತ್ತು ಅಗ್ಗದ ದರದಲ್ಲಿ ಒಳ್ಳೆಯ ಬ್ಯಾಟರಿ, ಕ್ಯಾಮೆರಾ ಇರುವ ಫೋನ್ ಬೇಕೆಂಬ ತುಡಿತ ಇರುವವರನ್ನೇ ಗಮನದಲ್ಲಿಟ್ಟುಕೊಂಡು ಈ ಮಾದರಿಯ ಬಜೆಟ್ ಫೋನ್‌ಗಳನ್ನು…

Rate this: