ಮೈಕ್ರೋಸಾಫ್ಟ್ ಟ್ರಾನ್ಸ್‌ಲೇಟರ್: ಒಂದು ಆ್ಯಪ್, ಹಲವು ಪ್ರಯೋಜನಗಳು
ಭಾಷಾಂತರ ಸೇವೆ ಒದಗಿಸಬಲ್ಲ ‘ಮೈಕ್ರೋಸಾಫ್ಟ್ ಟ್ರಾನ್ಸ್‌ಲೇಟರ್’ ಎಂಬ ತಂತ್ರಾಂಶಕ್ಕೆ ಏಪ್ರಿಲ್ ಮಧ್ಯಭಾಗದ ವೇಳೆ ಕನ್ನಡ ಸೇರಿದಂತೆ ಐದು ಹೊಸ ಭಾರತೀಯ ಭಾಷೆಗಳು ಸೇರ್ಪಡೆಯಾದವು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡೀಪ್ ನ್ಯೂರಲ್ ನೆಟ್‌ವರ್ಕ್ಸ್ ಎಂಬ ತಂತ್ರಜ್ಞಾನಗಳನ್ನು ಆಧರಿಸಿ ಕೆಲಸ ಮಾಡುವ ಈ ತಂತ್ರಾಂಶವು ಆಂಡ್ರಾಯ್ಡ್, ಐಒಎಸ್ ಮತ್ತು ವಿಂಡೋಸ್ (ಕಂಪ್ಯೂಟರ್ ಸಹಿತ) ಕಾರ್ಯಾಚರಣಾ ವ್ಯವಸ್ಥೆಗಳಿಗೆ ಆ್ಯಪ್ ರೂಪದಲ್ಲಿ ಲಭ್ಯವಿದೆ. ಕನ್ನಡ, ಮಲಯಾಳಂ, ಪಂಜಾಬಿ, ಗುಜರಾತಿ ಹಾಗೂ ಮರಾಠಿ ಭಾಷೆಗಳು ಹೊಸದಾಗಿ ಸೇರ್ಪಡೆಯಾಗಿದ್ದರೆ, ಹಿಂದಿ, ಬಂಗಾಳಿ, ತಮಿಳು, ತೆಲುಗು ಮತ್ತು…