Digikannada

ಹೊಸ ವೆಬ್ ತಾಣಕ್ಕೆ ಬನ್ನಿ

ಎಲ್ಲರಿಗೂ ನಮಸ್ತೇ. 2006ರಿಂದಲೂ ಕಾರ್ಯನಿರ್ವಹಿಸುತ್ತಿದ್ದ ಈ ವೆಬ್ಲಾಗ್‌ಗೆ ವೆಬ್ ರೂಪ ಕೊಡುವ ಸಮಯ. ಇದಕ್ಕಾಗಿ http://www.digikannada.com ಎಂಬ ತಾಣ ಸಿದ್ಧವಾಗಿದೆ. ಇದರಲ್ಲಿರುವ ಎಲ್ಲ ಅಂಶಗಳು ಜೊತೆಗೆ ಹೊಸ ಲೇಖನಗಳು, ವರದಿಗಳು ಆ ತಾಣದಲ್ಲಿ ಪ್ರಕಟವಾಗಲಿವೆ. ಓದುತ್ತಾ, ಸಲಹೆ ನೀಡುತ್ತಾ, ಪ್ರಶ್ನೆಗಳನ್ನು ಕೇಳುತ್ತಾ, ನನ್ನಿಂದ ಬರೆಸುತ್ತಿರುವವರೆಲ್ಲರಿಗೂ ಧನ್ಯವಾದಗಳು. ಇದುವರೆಗೆ ನೀಡಿದ ಪ್ರೋತ್ಸಾಹ ಮುಂದೆಯೂ ಇರಲಿ. Digiಕನ್ನಡ ತಾಣದಲ್ಲಿ ಸಿಗೋಣ. -ಧನ್ಯವಾದಗಳು -ಅವಿನಾಶ್ ಬಿ.

Rate this:

Android 10 ಇರುವ OnePlus 7T ಭಾರತದಲ್ಲಿ ಲಭ್ಯ, OnePlus TV ಬಿಡುಗಡೆ

90 Hz ಡಿಸ್‍ಪ್ಲೇಯೊಂದಿಗೆ ಒನ್‍ಪ್ಲಸ್ ಟಿ7 ಮತ್ತು ಇಂಟರ್ ಕನೆಕ್ಟಿವಿಟಿ ಸಾಮರ್ಥ್ಯದ OnePlus TV ಬಿಡುಗಡೆಯೊಂದಿಗೆ ಹೊಸ ಮೈಲಿಗಲ್ಲು ಹೊಸದಿಲ್ಲಿ (27 ಸೆಪ್ಟೆಂಬರ್ 2019): ಜಾಗತಿಕ ತಂತ್ರಜ್ಞಾನ ಬ್ರ್ಯಾಂಡ್ ಆಗಿರುವ ಒನ್‍ಪ್ಲಸ್ ಹೊಸದಾದ ಮತ್ತು ಬಹುನಿರೀಕ್ಷಿತ ಒನ್‍ಪ್ಲಸ್ 7ಟಿ ಸ್ಮಾರ್ಟ್ ಫೋನನ್ನು ಗುರುವಾರ ಇಲ್ಲಿನ ಇಂದಿರಾಗಾಂಧಿ ಅರೆನಾದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ವರ್ಷದ ಆರಂಭದಲ್ಲಿ ಒನ್‍ಪ್ಲಸ್ 7 ಸರಣಿಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಈ ಬಹುನಿರೀಕ್ಷಿತ ಒನ್‍ಪ್ಲಸ್ 7ಟಿ ಸ್ಮಾರ್ಟ್‍ಫೋನ್…

Rate this:

ಕ್ಯಾಮೆರಾ ಪ್ರಿಯರಿಗಾಗಿ Honor 10 lite ಭಾರತದಲ್ಲಿ ಬಿಡುಗಡೆ, ಬೆಲೆ ಎಷ್ಟು ಗೊತ್ತೇ?

ಹೊಸದಿಲ್ಲಿ: ಚೀನಾದಲ್ಲಿ ಈಗಾಗಲೇ ಬಿಡುಗಡೆಯಾಗಿ ಜನಪ್ರಿಯತೆ ಗಳಿಸಿರುವ ಹಾನರ್ 10 ಲೈಟ್ ಎಂಬ ವಿನೂತನ, ಕ್ಯಾಮೆರಾ ಕೇಂದ್ರಿತ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಮಂಗಳವಾರ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. 24 ಮೆಗಾ ಪಿಕ್ಸೆಲ್ ಸೆಲ್ಫೀ ಕ್ಯಾಮೆರಾ ಹಾಗೂ ಎಐ ಆಧಾರಿತ ಕ್ಯಾಮೆರಾ ಈ ಫೋನ್‌ನ ವಿಶೇಷತೆಗಳಲ್ಲೊಂದು. ಫ್ಲಿಪ್‌ಕಾರ್ಟ್ ಹಾಗೂ ಹ್ಯುವೈ ಹಾನರ್ ಕಂಪನಿಯ ವೆಬ್ ತಾಣಗಳಲ್ಲಿ ಇದು ಮುಂದಿನ ವಾರದಿಂದ ಲಭ್ಯವಾಗಲಿದ್ದು, ಮುಂಗಡ ಬುಕಿಂಗ್ ಆರಂಭವಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಆಧಾರದಲ್ಲಿ ದೃಶ್ಯಗಳನ್ನು ಗುರುತಿಸಿ, ಅದಕ್ಕೆ ಅನುಗುಣವಾಗಿ ಉತ್ತಮ…

Rate this: