ಗೂಗ್ಲಾಸುರನಿಗೆ ನಮಸ್ಕಾರ

ಏಯ್ ಮರೀ, ನಿನ್ನ ಹೆಸರೇನು? ‘ಅಲಕ್ಷಿತಾ’ ‘ಇದೂ ಒಂದು ಹೆಸರಾ’ ಅಂತ ನಾನಂದ್ಕೋತೀನಿ, ಆದ್ರೆ ಬಾಯ್ಬಿಟ್ಟು ಹೇಳಲ್ಲ. ‘ನನ್ನ ಅಣ್ಣನ್ ಹೆಸ್ರು ಏನ್ ಗೊತ್ತಾ, ನಿಂದನ್!’ ‘ಓಹ್.’ ಇದೊಂದು ಟ್ರೆಂಡ್. ಹುಡುಗ ಆದ್ರೆ ಮೂರು-ಮೂರುವರೆ ಅಕ್ಷರದ ಹೆಸ್ರು, ಹುಡ್ಗಿಯಾದ್ರೆ ನಾಲ್ಕಕ್ಷರ ಅಥ್ವಾ ಎರಡಕ್ಷರ. ಅದರಲ್ಲಿ ಹೊಸತನ ಇರ್ಬೇಕು, ಯಾರೂ ಇಟ್ಟಿರಬಾರದು, ಅನನ್ಯವಾಗಿರ್ಬೇಕು ಅನ್ನೋ ಅಭಿಲಾಷೆ, ಆಕಾಂಕ್ಷೆ ಬೇರೆ. ಹೌದು, ಅಭಿಲಾಷ್ ಅಂತಂದ್ರೆ ಹುಡ್ಗ, ಅಭಿಲಾಷಾ ಅಂದ್ರೆ ಹುಡ್ಗಿ; ವಸಂತಾ ಹುಡುಗಿ, ವಸಂತ್ ಹುಡುಗ. ಆಕಾಂಕ್ಷಾ ಇದ್ದದ್ದು, ಆಕಾಂಕ್ಷ್…

Rate this:

ಬದಲಾವಣೆ ಜಗದ ನಿಯಮ #HappyFathersDay

ಮಕ್ಕಳು ದೊಡ್ಡವರಾಗುತ್ತಿದ್ದಾರೆ, ಅಪ್ಪ ಚಿಕ್ಕೋನಾಗುತ್ತಾ ಹೋಗುತ್ತಾನೆ ಮಕ್ಕಳು ಮಾತನಾಡಲಾರಂಭಿಸುತ್ತಾರೆ, ಅಪ್ಪ ಮೌನಿಯಾಗಲಾರಂಭಿಸಿದ್ದಾನೆ ಮಕ್ಕಳು ಮುಂದೆ ನಡೆಯಲಾರಂಭಿಸಿದ್ದಾರೆ, ಅಪ್ಪ ಹಿಂದುಳಿಯತೊಡಗುತ್ತಾನೆ ಬದಲಾವಣೆ ಜಗದ ನಿಯಮ #HappyFathersDay ‘ಅಪ್ಪ’ ಪದವೀಧರರಿಗೆ, ಅಮ್ಮನೂ ಆಗಬಲ್ಲ ಅಪ್ಪಂದಿರಿಗೆ, ಅಪ್ಪನ ಹೊಣೆಯನ್ನು ನಿಭಾಯಿಸುತ್ತಿರುವ ಅಮ್ಮಂದಿರಿಗೆ, ಅಪ್ಪನಂತೆ ಸಲಹುವ All Father Figures! Happy Fathers Day! -ಅವಿನಾಶ್ ಬಿ.

Rate this:

ಚೆನ್ನೈ ಮ್ಯೂಸಿಕ್ ಅಕಾಡೆಮಿಯಲ್ಲಿ ಯಕ್ಷಗಾನದ ಧ್ವನಿ

ಚೆನ್ನೈ ಮ್ಯೂಸಿಕ್ ಅಕಾಡೆಮಿ! ಸಂಗೀತ ಕ್ಷೇತ್ರದ ಜ್ಞಾನಿಗಳ ಜನಜನಿತ ಹೆಸರು; ಸಂಗೀತ ಕಲಾವಿದರ ಕನಸಿನ ವೇದಿಕೆ. ಒಂದಲ್ಲ ಒಂದು ದಿನ ಇಲ್ಲಿ ಕಾರ್ಯಕ್ರಮ ನೀಡುವ ಅವಕಾಶ ತನ್ನದಾಗಬೇಕೆಂದು ಗಾಯಕರು, ವಾದಕರು ಹಪಹಪಿಸುವ ತಾಣವಿದು. ಶಾಸ್ತ್ರೀಯ ಸಂಗೀತ ಲೋಕದ ಕೇಂದ್ರ ಬಿಂದು – ಚೆನ್ನೈಯಲ್ಲಿರುವ ಮ್ಯೂಸಿಕ್ ಅಕಾಡೆಮಿ. ಈ ಪೀಠಿಕೆ ಯಾಕೆಂದರೆ, ಭರ್ತಿ ಆರು ವರ್ಷ ಚೆನ್ನೈಯಲ್ಲೇ ಇದ್ದರೂ, ಹಲವಾರು ಬಾರಿ ಮನದ ದುಗುಡ ಕಳೆಯಲೆಂದು ಸಮುದ್ರ ತೀರಕ್ಕೆ ಅದೇ ರಸ್ತೆಯಲ್ಲಿ ಹೋಗುತ್ತಿದ್ದರೂ, ರಾಧಾಕೃಷ್ಣನ್ ಸಾಲೈ (ಟಿಟಿಕೆ ರೋಡ್)…

Rate this:

ಫ್ರೀಡಂ 251 ಎಂಬ ಫ್ರೀ ಬಕ್ರಾಗಿರಿ!

ಹೇಳಿ ಕೇಳಿ ಭಾರತೀಯರು ಚೌಕಾಶಿ ಪ್ರಿಯರು. ಯಾವುದು ಕಡಿಮೆಗೆ ಸಿಗುತ್ತದೋ, ಅದರತ್ತ ಒಲವು ಹೆಚ್ಚು. ಜತೆಗೆ ಸ್ವದೇಶೀ ಉತ್ಪನ್ನಗಳ ಮೇಲೆ ಅಭಿಮಾನ ಜಾಸ್ತಿ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡ, ಮೂರ್ನಾಲ್ಕು ತಿಂಗಳ ಹಿಂದಷ್ಟೇ ಹುಟ್ಟಿಕೊಂಡ ಸಂಸ್ಥೆಯೊಂದು ಭಾರತೀಯರನ್ನು ಮಂಗ ಮಾಡಲು ಹೊರಟಿದೆಯೋ? ಇಂಥದ್ದೊಂದು ಸಂದೇಹ ಬಂದರೆ ತಪ್ಪಿಲ್ಲ. 500 ರೂಪಾಯಿಗೆ ಸ್ಮಾರ್ಟ್ ಫೋನ್ ಕೊಡುತ್ತೇವೆ ಎಂದು ಟಾಂಟಾಂ ಹೊಡೆಸಿಕೊಂಡ ಮರುದಿನವೇ, ಫ್ರೀಡಂ251 ಯೋಜನೆಯಡಿ ಕೇವಲ 251 ರೂಪಾಯಿಗೆ ಸ್ಮಾರ್ಟ್ ಫೋನ್ ಕೊಡುತ್ತೇವೆ ಎಂದು ಮರುದಿನವೇ ಪ್ರಚಾರ ಮಾಡಿದ ರಿಂಗಿಂಗ್…

Rate this:

ದೇಶದ ಮೊದಲ ವಿಂಡೋಸ್ 10 ಟು-ಇನ್-ಒನ್, ನೋಷನ್ ಇಂಕ್ ಕೇಯ್ನ್ ಸಿಗ್ನೇಚರ್ ಬ್ಲ್ಯಾಕ್ ಎಡಿಶನ್

ವಿಂಡೋಸ್ 10 ಹೊಸ ಕಾರ್ಯಾಚರಣಾ ವ್ಯವಸ್ಥೆಯ ಜತೆಗೆ ಮೊದಲ ಬಾರಿಗೆ ಭಾರತದಲ್ಲಿ 2 ಇನ್ 1 (ಲ್ಯಾಪ್‌ಟಾಪ್ ಕಮ್ ಟ್ಯಾಬ್ಲೆಟ್) ಈಗ ಸ್ಲ್ಯಾಪ್‌ಡೀಲ್ ತಾಣದ ಮೂಲಕ ಬಿಡುಗಡೆಯಾಗಿದೆ. ಇದು ನೋಷನ್ ಇಂಕ್ ಕಂಪನಿಯು ಮೈಕ್ರೋಸಾಫ್ಟ್ ಹಾಗೂ ಇಂಟೆಲ್ ಜತೆಗೂಡಿ ಮಾಡಿರುವ ನೋಷನ್ ಇಂಕ್ ಸಿಗ್ನೇಚರ್ ಬ್ಲ್ಯಾಕ್ ಎಡಿಶನ್. 2-in-1 ಟ್ಯಾಬ್ಲೆಟ್ ಕಮ್ ಲ್ಯಾಪ್‌ಟಾಪ್ ವಿಶೇಷವೆಂದರೆ, ಭಾರತೀಯರ ಮನಸ್ಥಿತಿಗೆ ತಕ್ಕಂತೆ ಇದನ್ನು ರೂಪುಗೊಳಿಸಲಾಗಿದೆ ಎಂಬುದು ವಿಶೇಷ. ಹೇಗೆಂದರೆ, ಹಿಂದೆಯೂ ನೋಷನ್ ಇಂಕ್ ಕೇಯ್ನ್ ಎಂಬ 2 ಇನ್ 1…

Rate this:

ಅಂತರ್ಜಾಲ ಸ್ವಾತಂತ್ರ್ಯಕ್ಕಾಗಿ ನೆಟ್ಟಿಗರ ಗಟ್ಟಿ ಧ್ವನಿ

ಇಂಟರ್ನೆಟ್‌ನಲ್ಲಿ ಯೂಟ್ಯೂಬ್ ಆಗಿರಲಿ, ವೆಬ್ ಸೈಟ್ ಆಗಿರಲಿ, ವಾಟ್ಸಾಪ್ ಇರಲಿ, ಫೇಸ್ ಬುಕ್ ಇರಲಿ, ಅಥವಾ ಟ್ವಿಟರೇ ಆಗಿರಲಿ; ಎಲ್ಲ ಮಾಹಿತಿಯೂ ಸಮಾನ. ನಿರ್ದಿಷ್ಟ ಮಾಹಿತಿಯನ್ನು ಮಾತ್ರ ಉಚಿತವಾಗಿ ನೀಡಿ, ಉಳಿದವುಗಳಿಗೆ ತಡೆಯೊಡ್ಡುವ ಅಥವಾ ಅವುಗಳಿಗೆ ನಿಧಾನಗತಿಯ ಇಂಟರ್ನೆಟ್ ಸಂಪರ್ಕ ಒದಗಿಸುವ ಅಧಿಕಾರ ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ (ಮುಖ್ಯವಾಗಿ ಟೆಲಿಕಾಂ ಆಪರೇಟರುಗಳಿಗೆ) ಇಲ್ಲ. ಎಲ್ಲವೂ ಸಮಾನವಾಗಿ, ಮುಕ್ತವಾಗಿ ದೊರೆಯುವಂತಾಗಬೇಕು. ಇಲ್ಲಿ ಎಲ್ಲವೂ ನ್ಯೂಟ್ರಲ್ ಎಂಬುದು ನೆಟ್ಟಿಗರ ಕೂಗು. ಇದುವೇ ನೆಟ್ ನ್ಯೂಟ್ರಾಲಿಟಿ. ಒಂದೆಡೆ, ‘ಜನರ ಬಳಿಗೆ ತಂತ್ರಜ್ಞಾನ,…

Rate this:

ಆನ್‌ಲೈನ್ ಸಜ್ಜನಿಕೆ

ಅಂದು ಸಮಾಜ ಜೀವಿಗಳಾಗಿದ್ದೆವು, ಆದರಿಂದು ಸಾಮಾಜಿಕ ಮಾಧ್ಯಮ ಜೀವಿಗಳು ನಾವು. ವಾಸ್ತವ, ಕಣ್ಣೆದುರಿರುವ ಸಮಾಜಕ್ಕಿಂತಲೂ ಭ್ರಮಾ ವಾಸ್ತವದ ಸೋಷಿಯಲ್ ಮೀಡಿಯಾಕ್ಕೆ ಹೆಚ್ಚು ಹತ್ತಿರವಾಗುತ್ತಿದ್ದೇವೆ. ಮಾತೆತ್ತಿದರೆ, ‘ವಾಟ್ಸಾಪ್‌ನಲ್ಲಿ ನೋಡಿದೆ, ಫೇಸ್‌ಬುಕ್‌ನಲ್ಲಿ ಓದಿದೆ’ ಎಂಬ ಮಾತು ನಮ್ಮ ಬಾಯಿಯಿಂದ ಅಯಾಚಿತವಾಗಿಯೇ ಬರುತ್ತದೆ. ಇದು ಸಂಘ ಜೀವಿ ಮಾನವನು ಆ್ಯಪ್‌ಗಳೆಂಬ ಅಂತರ್ಜಾಲದ ಅಂಗಜೀವಿಯಾಗಿ ರೂಪಾಂತರವಾಗುತ್ತಿರುವ ಬಗೆ ಮತ್ತು ಅತಿಯಾದರೆ ಅಮೃತವೂ ವಿಷ ಎಂಬ ಮಾತನ್ನು ಮತ್ತೆ ನೆನಪಿಸುವ ಪ್ರಕ್ರಿಯೆ. ‘ಅಭಿವ್ಯಕ್ತಿ ಸ್ವಾತಂತ್ರ್ಯ’ ಎಂಬ ವಿಶಾಲಾರ್ಥವಿರುವ, ಆದರೆ ನಿರ್ದಿಷ್ಟ ಪರಿಧಿ ಇಲ್ಲದ ವ್ಯಾಖ್ಯಾನವುಳ್ಳ…

Rate this: