ನನಗೆ ಗ್ರಹಣ ಬಡಿದದ್ದು…
ಟ್ರಿಣ್… ಟ್ರಿಣ್… ನಾನು: ಹಲೋ ರೀ 8 ಗಂಟೆಯೊಳಗೆ ಏನಾದ್ರೂ ತಿಂದ್ಕೊಂಡು ಮನೆಗೆ ಬನ್ರೀ… ಗ್ರಹಣ ಅಂತೆ, ಆ ನಂತರ ಏನೂ ತಿನ್ಬಾರ್ದಂತೆ ನಾನು: ಹೌದಾ? ಯಾರೋ ಹೇಳಿದ್ದದು??? ಪಕ್ಕದ್ಮನೆಯವ್ರು… ಆಮೇಲೆ… ಅವರಿವರು ಎಲ್ರೂ ಹೇಳ್ತಾ ಇದ್ದಾರೆ… ನಾನು: ಏನಾದ್ರೂ ಮಾಡಿಡು, ಅಷ್ಟ್ರೊಳಗೆ ಬರೋಕೆ ಟ್ರೈ ಮಾಡ್ತೀನಿ ಇಲ್ಲರೀ, ಎಲ್ಲ ಪಾತ್ರೆ ಗೀತ್ರೆ ತೊಳೆದಿಟ್ಟಿದ್ದೀನಿ, ಮನೆ ಕ್ಲೀನ್ ಆಗಿದೆ. ಅಲ್ಲೇ ಏನಾದ್ರೂ ತಿನ್ಕೊಂಡು ಬನ್ನಿ ನಾನು: ಹಾಂ! ಏನಾದ್ರೂ ಹಣ್ಣಾದ್ರೂ ಇಟ್ಟಿರು… ನಾನು…. ಪರ್ಸ್… ಹಲೋ ಹಲೋ…