ಕಡಿಮೆ ಬೆಲೆಯ ಅತ್ಯುತ್ತಮ ಸ್ಮಾರ್ಟ್‌ಫೋನ್: InFocus

8 ಮೆಗಾಪಿಕ್ಸೆಲ್ ರೆಸೊಲ್ಯುಶನ್‌ನ ಮುಂಭಾಗ ಹಾಗೂ ಹಿಂಭಾಗದ ಎರಡು ಕ್ಯಾಮೆರಾಗಳು, ಎರಡಕ್ಕೂ ಫ್ಲ್ಯಾಶ್, 1.3 ಗಿಗಾಹರ್ಟ್ಜ್ ಮೀಡಿಯಾಟೆಕ್ ಕ್ವಾಡ್ ಕೋರ್ ಪ್ರೊಸೆಸರ್, 3ಜಿ, ಆಂಡ್ರಾಯ್ಡ್ ಕಿಟ್‌ಕ್ಯಾಟ್ (4.4.2) ಮಾರ್ಪಡಿತ ಕಾರ್ಯಾಚರಣಾ ವ್ಯವಸ್ಥೆ, ಎರಡು ಮೈಕ್ರೋ ಸಿಮ್ ವ್ಯವಸ್ಥೆ, 1 ಜಿಬಿ RAM, 8 ಜಿಬಿ ಆಂತರಿಕ ಮೆಮೊರಿ, 64 ಜಿಬಿ ವರೆಗೆ ವಿಸ್ತರಿಸಬಹುದಾದ ಮೆಮೊರಿ ಕಾರ್ಡ್ ಸ್ಲಾಟ್, 2010 mAh ಬ್ಯಾಟರಿ, 768×1280 ಪಿಕ್ಸೆಲ್ ರೆಸೊಲ್ಯುಶನ್ ಇರುವ 4.2 ಇಂಚಿನ ಸ್ಕ್ರೀನ್, ತೀರಾ ಹಗುರವಾದ, ಕೈಯಲ್ಲಿ ಹಿಡಿಯಲು…

Rate this:

ಬ್ಯಾಕಪ್: ಕಂಪ್ಯೂಟರ್ ಇರುವವರೆಲ್ಲರೂ ಮಾಡಲೇಬೇಕಾದ ಕೆಲ್ಸ

ಕಂಪ್ಯೂಟರ್ ಕ್ರ್ಯಾಶ್ ಆಗಿದೆ, ಹಾರ್ಡ್ ಡಿಸ್ಕ್ ಕ್ರ್ಯಾಶ್ ಆಯಿತು, ಆಪರೇಟಿಂಗ್ ಸಿಸ್ಟಂ ಕೆಟ್ಟು ಹೋಯಿತು, ಫೈಲ್ ಡಿಲೀಟ್ ಆಯಿತು ಅಂತ ಹೇಳುತ್ತಿರುವವರನ್ನು ಕೇಳಿದ್ದೇವೆ. ಸಮಯ ಸಿಕ್ಕಾಗಲೆಲ್ಲಾ ನಮ್ಮ ಕಂಪ್ಯೂಟರಿನ ಆಪರೇಟಿಂಗ್ ಸಿಸ್ಟಂ ಸಹಿತ ಎಲ್ಲ ತಂತ್ರಾಂಶಗಳನ್ನು ಬ್ಯಾಕಪ್ (ಸುಲಭವಾಗಿ ಹೇಳುವುದಾದರೆ Copy) ಇರಿಸಿಕೊಂಡರೆ, ಇಂತಹಾ ಆಪತ್ಕಾಲದಲ್ಲಿ ಆತಂಕ ಪಡುವ ಬದಲು ಸುಲಭವಾಗಿ ರೀಸ್ಟೋರ್ ಮಾಡಬಹುದು. ಇದು ನಾವು-ನೀವು ಮಾಡಿಕೊಳ್ಳಬಹುದಾದ ತೀರಾ ಸುಲಭದ ಕೆಲಸ. ವಿಂಡೋಸ್ ಆಪರೇಟಿಂಗ್ ಸಿಸ್ಟಂ (7 ಅಥವಾ 8.1 ಆವೃತ್ತಿ) ನಲ್ಲಿ ಬ್ಯಾಕಪ್ ಮಾಡಿಕೊಳ್ಳುವ…

Rate this:

ಹ್ಯಾಕರ್‌ಗಳಿಂದ ರಕ್ಷಿಸಿಕೊಳ್ಳಲು ಮೇಲ್, ಫೋನ್, ಬ್ರೌಸರ್ ಸುರಕ್ಷಿತವಾಗಿಟ್ಟುಕೊಳ್ಳಿ

ಭಾರತದಲ್ಲಿ ಗೂಗಲ್ ಸೇವೆ ಬಳಸದಿರುವ ವ್ಯಕ್ತಿಯೇ ಇಲ್ಲ ಎನ್ನಬಹುದೇನೋ. ಜಿಮೇಲ್ ಇಮೇಲ್, ಹ್ಯಾಂಗೌಟ್ಸ್, ಕ್ರೋಮ್ ಬ್ರೌಸರ್, ಮೊಬೈಲ್ ಆಪರೇಟಿಂಗ್ ಸಿಸ್ಟಂ (ಆಂಡ್ರಾಯ್ಡ್), ಗೂಗಲ್ ಮ್ಯಾಪ್, ಗೂಗಲ್ ಕ್ಯಾಲೆಂಡರ್, ಸರ್ಚ್ ಎಂಜಿನ್… ಹೀಗೆ ಕಂಪ್ಯೂಟರಲ್ಲಿ ತೊಡಗಿಕೊಂಡವರಿಗೆ ಪ್ರತಿಯೊಂದು ಕೂಡ ಅತ್ಯುಪಯುಕ್ತ ವ್ಯವಸ್ಥೆಗಳನ್ನು ಅಮೆರಿಕದ ತಂತ್ರಜ್ಞಾನ ದಿಗ್ಗಜ ಸಂಸ್ಥೆಯಾಗಿರುವ ಗೂಗಲ್ ಒದಗಿಸಿದೆ. ಜನ ಸಾಮಾನ್ಯರಿಗೆ ಹತ್ತಿರವಾಗುತ್ತಲೇ, ಆನ್‌ಲೈನ್ ಚಟುವಟಿಕೆಯ ವೇಳೆ ಸುರಕ್ಷಿತವಾಗಿರುವುದರ ಬಗ್ಗೆಯೂ ಅದು ಮಾಹಿತಿ ನೀಡುತ್ತದೆ. ಇದಕ್ಕಾಗಿಯೇ ಗೂಗಲ್ ಟಿಪ್ಸ್ ಎಂಬ ಜಾಲ ತಾಣವನ್ನೂ ತೆರೆದಿದೆ. ಸದಾ ಕಾಲ…

Rate this:

108: ಮೊಬೈಲ್‌ನಲ್ಲಿ ಕಂಪ್ಯೂಟರ್ ಜಾಲಾಡಿ; ಬೇರೆಲ್ಲೋ ಇರುವ ಕಂಪ್ಯೂಟರನ್ನೂ ನಿಯಂತ್ರಿಸಿ

ಕಚೇರಿಯಲ್ಲಿ ಕಂಪ್ಯೂಟರಲ್ಲಿ ಟೈಪ್ ಮಾಡಿಟ್ಟ ಇಮೇಲ್ ಅನ್ನು ಮನೆಯಿಂದಲೇ ಮುಂದುವರಿಸಬೇಕೇ? ದೂರದಲ್ಲೆಲ್ಲೋ ಇರುವ ನಿಮ್ಮ ಡೆಸ್ಕ್‌ಟಾಪ್‌ನಲ್ಲಿರುವ ಫೈಲನ್ನು ನಿಮ್ಮ ಮೊಬೈಲ್ ಮೂಲಕವೇ ಓದಬೇಕೇ? ಸಾಧ್ಯವಿಲ್ಲ ಎಂದುಕೊಂಡಿರಾ? ಇದು ಸಾಧ್ಯ ಮತ್ತು ತೀರಾ ಸುಲಭ ಕೂಡ. ಇಂಟರ್ನೆಟ್ ಸಂಪರ್ಕವಿದ್ದರೆ ಜಗತ್ತೇ ಅಂಗೈಯಲ್ಲಿ ಅಂತ ಹೇಳೋದು ಇದಕ್ಕೇ. ಟೀಮ್ ವ್ಯೂವರ್ ಎಂಬೊಂದು ಉಚಿತ ತಂತ್ರಾಂಶದ ಮೂಲಕ ಬೆಂಗಳೂರಿನಿಂದ ಕುಳಿತು ಮಂಗಳೂರಿನಲ್ಲಿರುವ ಕಂಪ್ಯೂಟರನ್ನು ನಿಯಂತ್ರಿಸಬಹುದು. ಸಾಫ್ಟ್‌ವೇರ್ ಉದ್ಯೋಗಿಗಳಲ್ಲಿ ಹೆಚ್ಚು ಮನೆಮಾತಾಗಿರುವ ಈ ತಂತ್ರಾಂಶವನ್ನು ಯಾರು ಬೇಕಿದ್ದರೂ ಸುಲಭವಾಗಿ ಉಪಯೋಗಿಸಬಹುದು. ಮನೆಯಲ್ಲಿ ಕಂಪ್ಯೂಟರ್…

Rate this:

ಆಕರ್ಷಣೆ ಕಳೆದುಕೊಳ್ಳುತ್ತಿದೆ ಫೇಸ್‌ಬುಕ್…

ನಗರದ ಆ ಮೂಲೆಯಲ್ಲಿ…. ರಸ್ತೆ ಬದಿ ನಡೆದಾಡುತ್ತಿರುವಾಗ, ಬಸ್ ನಿಲ್ದಾಣದಲ್ಲಿ ಕಾಯುತ್ತಿರುವಾಗ, ಟ್ರಾಫಿಕ್ ಸಿಗ್ನಲ್‌ನಲ್ಲಿ ಬೈಕು ನಿಲ್ಲಿಸಲೇಬೇಕಾದಾಗ… ಕುದಿ ಹೃದಯದ ಹದಿ ಹರೆಯದ ಮಂದಿಯ ಎರಡೂ ಕಿವಿಗಳಲ್ಲಿ ಉದ್ದನೆಯ ದಾರ ನೇತಾಡುತ್ತಿರುತ್ತದೆ; ಜತೆಗೇ ತಲೆಯೂ ಸಣ್ಣಗೆ ಆಡುತ್ತಿದ್ದರೆ, ಕೈಯಲ್ಲಿರುವ ಮೊಬೈಲ್ ಸ್ಕ್ರೀನ್‌ನ ಮೇಲೆ ಎರಡೂ ಕರಗಳ ಹೆಬ್ಬೆರಳುಗಳು ಅತ್ತಿಂದಿತ್ತ ಸರಿದಾಡುತ್ತಿರುತ್ತವೆ; ಮಂದಹಾಸ, ನಗು, ಕೋಪ, ಬೇಸರ, ತುಂಟತನ… ಇತ್ಯಾದಿ ಕ್ಷಣಕ್ಷಣಕ್ಕೂ ಗೋಚರಿಸುವ ನವರಸ ಮುಖಭಾವಗಳು… ಅವರ ಕೈಯಲ್ಲಿರುವುದು ಹಳೆಯ ಫೀಚರ್ ಫೋನ್ ಆಗಿದ್ದರಂತೂ ಅದರ ಕೀಪ್ಯಾಡ್‌ನ ಸಂಖ್ಯೆ/ಅಕ್ಷರಗಳೇ…

Rate this: