ಪ್ಯಾನಿಕ್ ಬಟನ್: ಅಂಗೈಯಲ್ಲೇ ಇದ್ದಾನಲ್ಲ ರಕ್ಷಕಭಟ!

ಸ್ಮಾರ್ಟ್ ಫೋನ್ ವೈಶಿಷ್ಟ್ಯದ ಬಗ್ಗೆ ತಿಳಿದಿರಲೇಬೇಕಾದ ಸಂಗತಿ ಕಳೆದ ವಾರ ಹೈದರಾಬಾದ್ ಟೋಲ್ ಸಂಗ್ರಹ ಕೇಂದ್ರದ ಬಳಿ ಪಶುವೈದ್ಯೆಯ ಮೇಲೆ ಕಾಮುಕರು ಮುಗಿಬಿದ್ದು ಹತ್ಯೆ ಮಾಡಿರುವ ಆಘಾತಕಾರಿ ಘಟನೆಯು ದೇಶಾದ್ಯಂತ ಸದ್ದು ಮಾಡಿತು. ರಾಜಧಾನಿ ದೆಹಲಿಯಲ್ಲಿ 2012 ಡಿಸೆಂಬರ್ 16ರಂದು ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದ ಬಳಿಕ ದೇಶದಲ್ಲೆದ್ದ ಆವೇಶದ ಕಿಚ್ಚು ಮತ್ತೆ ಹತ್ತಿಕೊಂಡಿದೆ. “ನಮ್ಮಲ್ಲಿ ಮಹಿಳೆಗೆ ರಕ್ಷಣೆ ಇಲ್ಲ” ಎಂಬ ಮಾತಿಗೆ ಪುನರಪಿ ಬಲ ಬಂದಿದೆ. ಈ ಸಂದರ್ಭದಲ್ಲಿ ಮಹಿಳೆಯರಿಗೊಂದು ಸ್ವರಕ್ಷಣೆಯ ಸರಳ ವಿಧಾನ ನಮ್ಮ ಕೈಯಲ್ಲಿದೆ ಎಂಬುದು…

Rate this:

ವಾಟ್ಸ್ಆ್ಯಪ್‌ನಲ್ಲಿ ‘ಸ್ವಯಂ ಡಿಲೀಟ್’ ಮತ್ತಿತರ ಹೊಸ ವೈಶಿಷ್ಟ್ಯಗಳು

ಸಂದೇಶ ವಿನಿಮಯ ಆ್ಯಪ್ ಆಗಿರುವ ವಾಟ್ಸ್ಆ್ಯಪ್ ದಿನದಿಂದ ದಿನಕ್ಕೆ ಹೊಸ ವೈಶಿಷ್ಟ್ಯಗಳನ್ನು ಮೈಗೂಡಿಸಿಕೊಳ್ಳುತ್ತಿದೆ. ಅದರ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕಿದ್ದರೆ ಬಳಕೆದಾರರು ತಮ್ಮ ವಾಟ್ಸ್ಆ್ಯಪ್ ಕಿರುತಂತ್ರಾಂಶವನ್ನು ಅಪ್‌ಡೇಟ್ ಮಾಡಿಕೊಳ್ಳಬೇಕಾಗುತ್ತದೆ. ಐಒಎಸ್ ಫೋನ್‌ಗಳಿಗೆ ಈಗಾಗಲೇ ಕೆಲವು ವೈಶಿಷ್ಟ್ಯಗಳು ದೊರೆತಿವೆ. ಶೀಘ್ರವೇ ಆಂಡ್ರಾಯ್ಡ್ ಫೋನ್‌ಗಳಿಗೂ ಈ ಪರಿಷ್ಕೃತ ಆ್ಯಪ್ ಲಭ್ಯವಾಗಲಿದೆ. ಪರಿಷ್ಕೃತ ಆವೃತ್ತಿಯಲ್ಲಿರುವ ಹೊಸ ಸೌಕರ್ಯಗಳು ಹೀಗಿವೆ. ಸ್ವಯಂ-ಡಿಲೀಟ್ ಖಾಸಗಿತನವನ್ನು ಬಯಸುವವರಿಗೆ ನೆರವಾಗುವ ಹೊಸ ವೈಶಿಷ್ಟ್ಯವಿದು. ಯಾರಿಗಾದರೂ ಸಂದೇಶ ಕಳುಹಿಸಿ, ಅದು ಅವರಿಗಷ್ಟೇ ತಲುಪಬೇಕು, ಬೇರೆಯವರು ನೋಡಬಾರದು ಅಂತ ಅಂದುಕೊಂಡಿದ್ದರೆ, ಸಂದೇಶ…

Rate this:

Zeb-Soul: ಬ್ಲೂಟೂತ್ ಇಯರ್‌ಫೋನ್ ಹೇಗಿದೆ?

ಡಿಜಿಟಲ್ ಸಾಧನಗಳ ತಯಾರಿಕೆಯಲ್ಲಿ ದೇಶೀಯವಾಗಿ ಹೆಸರು ಮಾಡುತ್ತಿರುವ ಜೆಬ್ರಾನಿಕ್ಸ್ ಕಂಪನಿಯು ಇತ್ತೀಚೆಗೆ ಜೆಬ್-ಸೋಲ್ ಹೆಸರಿನಲ್ಲಿ ಬ್ಲೂಟೂತ್ ನೆಕ್‌ಬ್ಯಾಂಡ್ ಸ್ಪೀಕರ್ ಹೊರತಂದಿದೆ. ಇದು ವೈರ್‌ಲೆಸ್ ಬ್ಲೂಟೂತ್ ಇಯರ್‌ಫೋನ್ ಆಗಿದ್ದು, ನೋಡಲು ಆಕರ್ಷಕವಾಗಿದೆ. ಕತ್ತಿನ ಸುತ್ತ ಚೆನ್ನಾಗಿ ಕೂರುತ್ತದೆ. ಇದರ ಇಯರ್ ಬಡ್‌ಗಳು ಬಳಕೆಯಲ್ಲಿಲ್ಲದಿರುವಾಗ ಪರಸ್ಪರ ಬೆಸೆಯುವಂತೆ ಅಯಸ್ಕಾಂತವಿದೆ. ಇದರ ಮತ್ತೊಂದು ವಿಶೇಷತೆ ಎಂದರೆ 11.5 ಗಂಟೆಗಳ ಪ್ಲೇಬ್ಯಾಕ್ ಸಮಯ. ಅಂದರೆ, ಸಂಪೂರ್ಣವಾಗಿ ಚಾರ್ಜ್ ಆಗಲು 2 ಗಂಟೆ ಬೇಕಿದ್ದು, ಈ ಬ್ಯಾಟರಿ ಮೂಲಕ ನಿರಂತರವಾಗಿ 11.5 ಗಂಟೆ ಹಾಡುಗಳನ್ನು…

Rate this:

ಡಿಜಿಟಲ್ ವ್ಯಸನವೇ?: ಸ್ಕ್ರೀನ್ ಟೈಮ್ ನಿಗದಿಪಡಿಸಲು ಇದೋ ಇಲ್ಲಿದೆ ಮಾಹಿತಿ

My Article in Prajavani Olanota on 17 Nov 2019 ಸ್ಕ್ರೀನ್ ಟೈಮ್ (ಡಿಜಿಟಲ್ ಸಾಧನದ ಸ್ಕ್ರೀನ್ ನೋಡುವ ಸಮಯ) ನಿಯಂತ್ರಿಸುವ ಬಗ್ಗೆ ಇತ್ತೀಚೆಗೆ ಗಂಭೀರವಾಗಿಯೇ ಚರ್ಚೆ ನಡೆಯುತ್ತಿರುವುದು ಸ್ವಾಗತಾರ್ಹ. ಆ್ಯಪಲ್ ಕಂಪ ನಿಯು ತನ್ನ ಐಒಎಸ್ ಬಳಸುವ ಸಾಧನಗಳಲ್ಲಿ (ಐಫೋನ್, ಐಪ್ಯಾಡ್) ‘ಸ್ಕ್ರೀನ್ ಟೈಮ್’ ಹೆಸರಿನ ಆ್ಯಪ್ ಅಳವಡಿಸಿದೆ. ಸೆಟ್ಟಿಂಗ್ಸ್‌ನಲ್ಲಿ ಇದನ್ನು ನಾವು ಕಾಣಬಹುದು. ನಿರ್ದಿಷ್ಟ ಆ್ಯಪ್ ಅನ್ನು ಎಷ್ಟು ಸಮಯ ಬಳಸಬೇಕು ಎಂದು ಈ ಆ್ಯಪ್ ಮೂಲಕ ನಿಯಂತ್ರಿಸುವುದು ಸಾಧ್ಯವಾಗುತ್ತದೆ. ಈ ಸೆಟ್ಟಿಂಗ್ಸ್…

Rate this:

ಮೊಬೈಲ್‌ನೊಳಗೆ ಗೂಢಚಾರಿ: ನೀವು ತಿಳಿದಿರಬೇಕಾದ 10 ಸಂಗತಿಗಳು

ಪೆಗಾಸಸ್ ಎಂಬ ಕು-ತಂತ್ರಾಂಶವು (ಮಾಲ್-ವೇರ್) ಕರೆ ಸ್ವೀಕರಿಸದಿದ್ದರೂ, ಲಾಕ್ ಆಗಿರುವ ಫೋನ್‌ನೊಳಗೂ ಬಂದು ಕೂರಬಹುದು. ಮಿಸ್ಡ್ ಕಾಲ್ ಮೂಲಕ ಹ್ಯಾಕ್ ಮಾಡಿ, ಆ ಮೊಬೈಲ್ ಒಡೆಯರ ಅರಿವಿಗೆ ಬಾರದಂತೆ ಅದರಲ್ಲಿರುವ ಎಲ್ಲ ಮಾಹಿತಿಯನ್ನು ಪಡೆಯುವ ಪೆಗಾಸಸ್ ಸ್ಪೈವೇರ್ ಈಗ ಸದ್ದು ಮಾಡುತ್ತಿದೆ. ಇದರ ಬಗ್ಗೆ ನೀವು ತಿಳಿದಿರಲೇಬೇಕಾದ 10 ಅಂಶಗಳು ಇಲ್ಲಿವೆ: ಇಸ್ರೇಲ್ ಮೂಲದ ಎನ್‌ಎಸ್ಒ ಗ್ರೂಪ್ ಪೆಗಾಸಸ್ ಎಂಬ ಸ್ಪೈವೇರ್ ಸಿದ್ಧಪಡಿಸಿದ್ದು, ಭಯೋತ್ಪಾದನೆ ಮತ್ತು ಅಪರಾಧ ನಿಯಂತ್ರಣಕ್ಕಾಗಿ ಇದನ್ನು ಪರವಾನಗಿ ಇರುವ ಸರಕಾರಿ ಏಜೆನ್ಸಿಗಳು ಮತ್ತು…

Rate this:

ಪೆಗಾಸಸ್ ಎಂಬ ಪೆಡಂಭೂತದ ಜನಕ ಎನ್ಎಸ್ಒ: ಇಸ್ರೇಲ್ ಕಂಪನಿಯ ಹಿಂದೆ ಭಾರತೀಯನ ಜಾಡು

ಪೆಗಾಸಸ್! ಜಗತ್ತಿನಲ್ಲಿ ಇಂಟರ್ನೆಟ್ಟಿಗರನ್ನು ಪ್ರೈವೆಸಿ ಹೆಸರಲ್ಲಿ ಬೆಚ್ಚಿ ಬೀಳಿಸಿರುವ ಇನ್ನೊಂದು ಹೆಸರು. ಜಾಗತಿಕವಾಗಿ ರಾಜಕೀಯ ಮುಖಂಡರು, ಪತ್ರಕರ್ತರು, ಮಾನವ ಹಕ್ಕುಗಳ ಹೋರಾಟಗಾರರು ಮಾತ್ರವೇ ಅಲ್ಲ, ಉಗ್ರಗಾಮಿಗಳ ಕಿವಿ ಕೂಡ ಪೆಗಾಸಸ್ ಕಡೆ ನೆಟ್ಟಿರುವುದು ಸುಳ್ಳಲ್ಲ. ಇಸ್ರೇಲಿನ ಎನ್ಎಸ್ಒ ಗ್ರೂಪ್ ಟೆಕ್ನಾಲಜೀಸ್ ಎಂಬ ತಂತ್ರಜ್ಞಾನ ಕಂಪನಿಯೊಂದು ಹೊರಬಿಟ್ಟಿರುವ ತಂತ್ರಾಂಶವೇ ಪೆಗಾಸಸ್. ಕೇವಲ ಒಂದು ಮಿಸ್ಡ್ ಕಾಲ್ ಮೂಲಕವೇ (ಕರೆ ಸ್ವೀಕರಿಸಿದರೂ, ಸ್ವೀಕರಿಸದಿದ್ದರೂ) ವ್ಯಕ್ತಿಯೊಬ್ಬನ ಮೊಬೈಲ್ ಫೋನ್‌ನೊಳಗೆ ಕುಳಿತುಕೊಳ್ಳಬಲ್ಲ ಕು-ತಂತ್ರಾಂಶ (ಮಾಲ್‌ವೇರ್). ಸಂಪರ್ಕ ಸಂಖ್ಯೆಗಳು, ಕರೆ, ಎಸ್ಸೆಮ್ಮೆಸ್, ವಾಟ್ಸ್‌ಆ್ಯಪ್‌ ಸಂದೇಶಗಳು,…

Rate this:

Camon 12 Air: ಹಣಕ್ಕೆ ತಕ್ಕ ಮೌಲ್ಯದ ಕ್ಯಾಮೆರಾ ಫೋನ್

ಪ್ರಜಾವಾಣಿ, 29 ಅಕ್ಟೋಬರ್ 2019 ಅವಿನಾಶ್ ಬಿ. ಸ್ಮಾರ್ಟ್ ಫೋನ್‌ನಲ್ಲಿರುವ ಕ್ಯಾಮೆರಾ ಈಗ ಎಲ್ಲರ ಪ್ರಧಾನ ಆದ್ಯತೆ. ಜತೆಗೆ ಅಗ್ಗದ ದರದಲ್ಲಿ ಉತ್ತಮ ಸ್ಪೆಸಿಫಿಕೇಶನ್ ಇರುವ ಫೋನ್ ಸಿಕ್ಕಿದರೆ ಯಾರಿಗೆ ಬೇಡ? ಹೀಗೆ, ಭಾರತೀಯ ಗ್ರಾಹಕರ ಮನಸ್ಥಿತಿಯನ್ನು ಅರಿತುಕೊಂಡು, ಅದಕ್ಕೆ ತಕ್ಕಂತೆ ಸ್ಮಾರ್ಟ್ ಫೋನ್‌ಗಳನ್ನು ತಯಾರಿಸುತ್ತಾ ಬಂದಿರುವ ಹಾಂಕಾಂಗ್ ಮೂಲದ ಟ್ರಾನ್ಸಿಯಾನ್, ತನ್ನ ಟೆಕ್‌ನೋ ಮಾದರಿಯ ಹೊಚ್ಚ ಹೊಸ ಫೋನ್ ಕ್ಯಾಮಾನ್ 12 ಏರ್ (Tecno Camon 12 Air) ಅನ್ನು ಇತ್ತೀಚೆಗಷ್ಟೇ ಮಾರುಕಟ್ಟೆಗೆ ಪರಿಚಯಿಸಿದೆ. ಬೆಳಕಿನ…

Rate this: