ಫೋನ್‌ನಲ್ಲಿ ಸ್ಟೋರೇಜ್ ಸ್ಪೇಸ್ ಸಮಸ್ಯೆಯೇ? ಇಲ್ಲಿದೆ ಪರಿಹಾರ

ಫೋನ್ ಮೆಮೊರಿ ಕಾರ್ಡ್‌ನಲ್ಲಿರುವ ಫೈಲುಗಳು ಡಿಲೀಟ್ ಆದರೆ ಏನು ಮಾಡಬೇಕೆಂದು ಕಳೆದ ಬಾರಿಯ ಅಂಕಣದಲ್ಲಿ ತಿಳಿಸಿದ್ದೆ. ಪುಟ್ಟ ಸಾಧನದಲ್ಲಿ ಅಷ್ಟೆಲ್ಲಾ ಫೈಲುಗಳು, ಆ್ಯಪ್‌ಗಳನ್ನು ಸೇರಿಸಬೇಕಿದ್ದರೆ ಮೆಮೊರಿ (ಸ್ಟೋರೇಜ್ ಅಥವಾ ಸ್ಥಳಾವಕಾಶ) ಹೆಚ್ಚು ಬೇಕಾಗುತ್ತದೆ. ಸ್ಮಾರ್ಟ್ ಫೋನ್‌ಗಳಲ್ಲಿ ವಿಸ್ತರಿಸಬಹುದಾದ ಮೆಮೊರಿ (ಎಕ್ಸ್‌ಟೆಂಡೆಬಲ್ ಮೆಮೊರಿ) ಅನ್ನೋ ಪದಗುಚ್ಛವನ್ನು ನೀವು ಕೇಳಿರಬಹುದು. ಅಂದರೆ, ಫೋನ್‌ನಲ್ಲಿ ಇರುವ ಇಂಟರ್ನಲ್ ಸ್ಟೋರೇಜ್ ಜಾಗವಷ್ಟೇ ಅಲ್ಲದೆ, ಹೆಚ್ಚುವರಿಯಾಗಿ ಮೆಮೊರಿ ಕಾರ್ಡ್ ಅಳವಡಿಸಿ 128 ಜಿಬಿವರೆಗೂ ವಿಸ್ತರಿಸಬಹುದು ಎಂದರ್ಥ. ಈ ಮೆಮೊರಿ ಬಗ್ಗೆ ಹೇಳಬೇಕಾದರೆ, ಒಂದು ಫೋನ್‌ನಲ್ಲಿ…

Rate this:

ಟೆಕ್ ಟಾನಿಕ್: ಐಫೋನ್‌ನಲ್ಲಿ ಸ್ಕ್ರೀನ್ ರೆಕಾರ್ಡ್

ಆ್ಯಪಲ್ ಐಫೋನ್‌ನ 5ಎಸ್ ಬಳಿಕ ಆವೃತ್ತಿಗಳು ಈಗಾಗಲೇ ಐಒಎಸ್ 11ಕ್ಕೆ ಅಪ್‌ಗ್ರೇಡ್ ಆಗಿವೆ. ಅದರಲ್ಲಿ ಹೊಸದೊಂದು ಆಯ್ಕೆ ಗಮನ ಸೆಳೆದಿದೆ. ಅದೆಂದರೆ, ಸ್ಕ್ರೀನ್ ರೆಕಾರ್ಡಿಂಗ್. ನಮ್ಮ ಫೋನ್‌ನಲ್ಲಿ ನಾವು ಏನಾದರೂ ಮಾಡುತ್ತಿರುವಾಗ ಸಮಸ್ಯೆ ಕಾಣಿಸಿಕೊಂಡರೆ, ಆ ಸಮಸ್ಯೆಯೇನೆಂಬುದನ್ನು ದೂರದಲ್ಲೆಲ್ಲೋ ಇರುವ ಫೋನ್ ತಜ್ಞರಿಗೆ ತಿಳಿಸಿ, ಪರಿಹಾರ ಪಡೆದುಕೊಳ್ಳಲು ಈ ಸ್ಕ್ರೀನ್ ರೆಕಾರ್ಡರ್ ಸಹಾಯ ಮಾಡುತ್ತದೆ. ಇದರ ಶಾರ್ಟ್‌ಕಟ್ ಬಟನ್, ಫೋನ್ ಸ್ಕ್ರೀನ್‌ನ ಕೆಳಭಾಗದಿಂದ ಮೇಲಕ್ಕೆ ಸ್ವೈಪ್ ಮಾಡಿದಾಗ ಕಾಣಿಸಿಕೊಳ್ಳುವ ಕಂಟ್ರೋಲ್ ಸೆಂಟರ್‌ನಲ್ಲಿದೆ. ದೊಡ್ಡ ಚುಕ್ಕಿ ಇರುವ ಈ…

Rate this:

ಮೆಮೊರಿ ಕಾರ್ಡ್‌ನಿಂದ ಡಿಲೀಟ್ ಆದ ಫೈಲುಗಳನ್ನು ರಿಕವರ್ ಮಾಡುವುದು ಹೇಗೆ?

ಡಿಜಿಟಲ್ ತಂತ್ರಜ್ಞಾನ ಕ್ರಾಂತಿಯೊಂದಿಗೆ ಫೋಟೋಗಳು, ವೀಡಿಯೋಗಳು ಹಾಗೂ ಇತರ ಡಿಜಿಟಲ್ ಫೈಲುಗಳ ಧಾವಂತವೂ, ಅನಿವಾರ್ಯತೆಯೂ ಹೆಚ್ಚಾಗುತ್ತಿದೆ. ಪುಟ್ಟ ಸಾಧನದಲ್ಲಿ ಜಿಬಿಗಟ್ಟಲೆ ಫೈಲುಗಳನ್ನು ತುಂಬಿಡುವುದು ಅನುಕೂಲಕರವೂ ಹೌದು. ಇದಕ್ಕೆ ನೆರವಾಗುವುದು ಮೆಮೊರಿ ಕಾರ್ಡ್‌ಗಳೆಂದು ಸಾಮಾನ್ಯವಾಗಿ ಕರೆಯಲಾಗುವ ಪುಟ್ಟದಾಗಿರುವ ಸ್ಟೋರೇಜ್ ಸಾಧನಗಳು. ಅದು ಎಸ್‌ಡಿ ಕಾರ್ಡ್, ಎಸ್‌ಎಚ್‌ಡಿ, ಎಂಎಂಸಿ ಕಾರ್ಡ್, ಮೈಕ್ರೋ ಎಸ್‌ಡಿ ಕಾರ್ಡ್ ಮುಂತಾಗಿ ವಿಭಿನ್ನ ವಿಧಗಳಲ್ಲಿ ಲಭ್ಯ ಇರುತ್ತವೆ. ಆದರೆ ಅದರ ಬಳಕೆಯಲ್ಲಿ ನಾವು ತೋರುವ ಅಸಡ್ಡೆಯಿಂದಾಗಿಯೋ, ವೈರಸ್ ದಾಳಿಯಿಂದಾಗಿಯೋ ಅಥವಾ ಬೇರೆ ಯಾವುದಾದರೂ ಸಮಸ್ಯೆಯಿಂದಾಗಿಯೋ ಈ…

Rate this:

ಟೆಕ್ ಟಾನಿಕ್: ಮೊಬೈಲ್‌ನಲ್ಲಿ ಚಾಟ್ ಹೆಡ್ ನಿಷ್ಕ್ರಿಯ ಮಾಡುವುದು ಹೇಗೆ?

ಫೇಸ್‌ಬುಕ್ ಮೆಸೆಂಜರ್ ಬಳಸುತ್ತಿರುವವರಿಗೆ ಗೊತ್ತಿದೆ. ಯಾವುದಾದರೂ ಸಂದೇಶ ಬಂದಾಗ ಚಾಟ್ ಹೆಡ್‌ಗಳೆಂಬ ಸ್ಮಾರ್ಟ್ ಗುಳ್ಳೆಗಳು ಸ್ಮಾರ್ಟ್ ಫೋನ್‌ನ ಸ್ಕ್ರೀನ್ ಮೇಲೆ ಬಂದು ಕೂರುತ್ತವೆ. ತೀರಾ ಕಡಿಮೆ ಎಂದಾದರೆ ಪರವಾಗಿಲ್ಲ. ಆದರೆ, ಏನಾದರೂ ಟೈಪ್ ಮಾಡುತ್ತಿರುವಾಗ ಇವುಗಳು ಕೈಯ ಬೆರಳುಗಳಿಗೆ ಅಡ್ಡ ಬಂದು ಕಿರಿಕಿರಿ ಮಾಡುತ್ತವೆ. ಅದನ್ನು ಎಳೆದು ಕೆಳಗೆ ಎಕ್ಸ್ ಗುರುತಿಗೆ ತಂದರೆ ಅಲ್ಲಿಂದ ಸರಿದು ಹೋಗುತ್ತವೆಯಾದರೂ, ಮತ್ತೆ ಸಂದೇಶ ಬಂದಾಗ ಮರಳಿ ಬರುತ್ತವೆ. ಇವುಗಳನ್ನು ಡಿಸೇಬಲ್ ಮಾಡುವುದು ಹೇಗೆ? ಮೆಸೆಂಜರ್ ಆ್ಯಪ್ ತೆರೆಯಿರಿ. ಬಲ ಮೇಲ್ಭಾಗದ…

Rate this:

ಗೂಗಲ್‌ನ Tez ಆ್ಯಪ್: ಬಳಸುವುದು ಹೇಗೆ, ಹಣ ಗಳಿಸುವುದು ಹೇಗೆ?

ಕಳೆದ ವರ್ಷ ಕೇಂದ್ರ ಸರಕಾರವು ಡೀಮಾನಿಟೈಸೇಶನ್ (ದೊಡ್ಡ ಮೌಲ್ಯದ ಕರೆನ್ಸಿ ನೋಟುಗಳ ರದ್ದತಿ) ಜಾರಿಗೊಳಿಸಿದ ಬಳಿಕ ದೇಶಾದ್ಯಂತ ಡಿಜಿಟಲ್ ನಗದಿನ ಬಳಕೆ ಹೆಚ್ಚಾಗಿದೆ. ಅಂದರೆ, ಜನರು ತಮ್ಮ ಸ್ಮಾರ್ಟ್ ಫೋನ್‌ನ ಮೂಲಕ ಇ-ವ್ಯಾಲೆಟ್ ಎಂಬ ಆನ್‌ಲೈನ್‌ನಲ್ಲಿ ಹಣ ಇಟ್ಟುಕೊಳ್ಳುವ ಪರ್ಸ್‌ನ ಮೂಲಕ ವಹಿವಾಟುಗಳನ್ನು ನಡೆಸಲಾರಂಭಿಸಿದ್ದಾರೆ. ಪೇಟಿಎಂ ಹೆಚ್ಚು ಜನಪ್ರಿಯತೆ ಗಳಿಸಿದ್ದರೆ, ಕೇಂದ್ರ ಸರಕಾರವೇ ಭೀಮ್ ಎಂಬ ಆ್ಯಪ್ ಹೊರತಂದಿತು. ಜತೆಗೆ ಪ್ರತಿಯೊಂದು ದೊಡ್ಡ ಕಂಪನಿಗಳು, ಬ್ಯಾಂಕುಗಳು ಕೂಡ ತಮ್ಮದೇ ಆದ ಇ-ವ್ಯಾಲೆಟ್ ಅನ್ನು ಪರಿಚಯಿಸಿದವು. ಪೇಯುಮನಿ, ಫೋನ್‌ಪೆ,…

Rate this:

ಟೆಕ್ ಟಾನಿಕ್: ಟ್ವಿಟರ್ ವೀಡಿಯೋ ಡೌನ್‌ಲೋಡ್ ಮಾಡುವುದು ಹೇಗೆ

ಟ್ವಿಟರ್ ಎಂಬ ಕಿರು ಸಾಮಾಜಿಕ ಜಾಲತಾಣದ ಜನಪ್ರಿಯತೆ ಹೆಚ್ಚಿದೆ. ಈಗ ಆನ್‌ಲೈನ್ ಸಾಮಾಜಿಕ ಚಟುವಟಿಕೆಯಲ್ಲಿ ಅದರ ಪಾಲೂ ಬೆಳೆಯತ್ತಿದೆ. ಕ್ಷಿಪ್ರವಾಗಿ ಸುದ್ದಿ ತಿಳಿಯಲು, ತತ್‌ಕ್ಷಣದ ವೀಡಿಯೋ, ಫೋಟೋ ನೋಡಲು ಜತೆಗೆ ಅಧಿಕಾರಿಗಳ, ಸರಕಾರದ ಪ್ರತಿನಿಧಿಗಳ ಕ್ಷಿಪ್ರ ಸಂಪರ್ಕಕ್ಕೂ ಅದುವೇ ಬಳಕೆಯಾಗುತ್ತಿದೆ. ಅದರಲ್ಲಿ ಬರುವ ವೀಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ? http://twittervideodownloader.com/download ಎಂಬ ತಾಣ ಇದಕ್ಕಾಗಿ ಸಹಕರಿಸುತ್ತದೆ. ನಿಮಗೆ ಬೇಕಾದ ಟ್ವೀಟ್ ಸಂದೇಶದ ನಿರ್ದಿಷ್ಟ ಯುಆರ್‌ಎಲ್ ನಕಲಿಸಿಕೊಂಡು, ಅದನ್ನು ಈ ಜಾಲತಾಣದ ಬಾಕ್ಸ್‌ನಲ್ಲಿ ಪೇಸ್ಟ್ ಮಾಡಿ, ಡೌನ್‌ಲೋಡ್ ಎಂದು…

Rate this:

ಅನಿವಾರ್ಯ ಅಗತ್ಯ: ಆಧಾರ್, ಮೊಬೈಲ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಮಾಡುವುದು ಹೀಗೆ

ಈಗ ಎಲ್ಲದಕ್ಕೂ ಆಧಾರ್ ಕಾರ್ಡ್ ಎಂಬುದು ಆಧಾರವೇ ಆಗುತ್ತಿದೆ. ಸರಕಾರವಂತೂ ಆಧಾರ್ ಸಂಖ್ಯೆ ಲಿಂಕ್ ಮಾಡುವ ಕ್ಷೇತ್ರಗಳನ್ನು ವಿಸ್ತರಿಸುತ್ತಲೇ ಇದೆ. ಮೊಬೈಲ್ ಫೋನ್ ಹಾಗೂ ಬ್ಯಾಂಕ್ ಖಾತೆಗಳು ಜನ ಸಾಮಾನ್ಯರು ಅತ್ಯಗತ್ಯವಾಗಿ ಲಿಂಕ್ ಮಾಡಿಸಿಕೊಳ್ಳಬೇಕಾದ ಎರಡು ಸಂಗತಿಗಳು. ಇದರ ಜತೆಗೆ, ಪ್ಯಾನ್ ಕಾರ್ಡ್, ವಿಮಾ ಪಾಲಿಸಿಗಳು, ಮ್ಯೂಚುವಲ್ ಫಂಡ್, ಪಿಪಿಎಫ್ ಖಾತೆಗಳು ಕೂಡ ಆಧಾರ್ ವ್ಯಾಪ್ತಿಗೆ ಬರುತ್ತಿವೆ. ಜನ ಸಾಮಾನ್ಯರು ಕೂಡ ಹಲವಾರು ಕರೆಗಳು, ಎಸ್ಸೆಮ್ಮೆಸ್ ಬಂದಾಗ ಗೊಂದಲಕ್ಕೀಡಾಗುತ್ತಿದ್ದಾರೆ. ಈ ಮಧ್ಯೆ, ಆಧಾರ್ ಲಿಂಕ್ ಮಾಡಿ ಎನ್ನುತ್ತಾ…

Rate this: