ಝೂಮ್‌ಗೆ ಪರ್ಯಾಯ ಕಂಡುಹಿಡಿಯಿರಿ, 1 ಕೋಟಿ ರೂ. ಗೆಲ್ಲಿರಿ!

Zoom Meetingಕೊರೊನಾ ವೈರಸ್ ಹರಡುವಿಕೆ ತಡೆಗೆ ಮಾರ್ಚ್ 25ರಂದು ದೇಶದಾದ್ಯಂತ ಲಾಕ್‌ಡೌನ್ ಘೋಷಣೆಯಾದಂದಿನಿಂದ ಕಾರ್ಪೊರೇಟ್ ಕಂಪನಿಗಳು, ಶೈಕ್ಷಣಿಕ ಸಂಸ್ಥೆಗಳು ಹಾಗೂ ಸಣ್ಣಪುಟ್ಟ ಕಂಪನಿಗಳು ಕೂಡ ತಮ್ಮ ಕೆಲಸ ಕಾರ್ಯ ಮುಂದುವರಿಸಲು ಆನ್‌ಲೈನ್ ವಿಡಿಯೊ ಮಾರ್ಗವನ್ನು ಕಂಡುಕೊಂಡಿವೆ. ಈ ರೀತಿಯ ವಿಡಿಯೊ ಕಾನ್ಫರೆನ್ಸಿಂಗ್ ವ್ಯವಸ್ಥೆಯಲ್ಲಿ ಸದ್ದು ಮಾಡಿದ್ದು ಝೂಮ್ ಎಂಬ ಆ್ಯಪ್. ಇದೀಗ ಸೈಬರ್ ಭದ್ರತೆಯ ದೃಷ್ಟಿಯಿಂದ ಅದನ್ನು ಬಳಸದಂತೆ ಕೇಂದ್ರ ಸರ್ಕಾರ ಮತ್ತು ಇತರ ತಂತ್ರಜ್ಞಾನ ಜಗತ್ತಿನ ದಿಗ್ಗಜರೂ ಹೇಳಿರುವುದರಿಂದ ಹೊಸ ಸಮಸ್ಯೆ ಶುರುವಾಗಿದೆ.

ಇದೀಗ, ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಭಾಗವಾಗಿ, ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ಕೇಂದ್ರ ಸರ್ಕಾರವು, ವಿಡಿಯೊ ಕಾನ್ಫರೆನ್ಸಿಂಗ್‌ಗಾಗಿ ನಮ್ಮದೇ ಅಪ್ಲಿಕೇಶನ್ ಅಭಿವೃದ್ಧಿಪಡಿಸಲು ಯುವ ಅಪ್ಲಿಕೇಶನ್ ಡೆವಲಪರ್‌ಗಳಿಗೆ ಸವಾಲು ನೀಡಿದ್ದು, 1 ಕೋಟಿ ರೂ. ಬಹುಮಾನವನ್ನೂ ನಿಗದಿಪಡಿಸಿದೆ.

ಮನೆಯಿಂದಲೇ ಕೆಲಸ ಮಾಡುವವರಿಗೆ ನೆರವಾಗಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ವಿನೂತನ ಕ್ರಮಕ್ಕೆ ಮುಂದಾಗಿದ್ದು, ನಮ್ಮದೇ ಆದ ವಿಡಿಯೊ ಕಾನ್ಫರೆನ್ಸಿಂಗ್ ಪ್ಲ್ಯಾಟ್‌ಫಾರ್ಮ್ ರಚನೆಗೆ ಆಹ್ವಾನಿಸುತ್ತಿದ್ದೇವೆ ಎಂದು ಅಧಿಕೃತ MyGov ವೆಬ್‌ಸೈಟ್‌ನಲ್ಲಿ ಕರೆ ನೀಡಲಾಗಿದೆ.

  • ವಿಡಿಯೊ ಕಾನ್ಫರೆನ್ಸಿಂಗ್ ಆ್ಯಪ್‌ನಲ್ಲಿ ಈ ಕೆಳಗಿನ ವೈಶಿಷ್ಟ್ಯಗಳಿರಬೇಕೆಂದೂ ಅದು ಪಟ್ಟಿ ಮಾಡಿದೆ.
    – ಎಲ್ಲ ವಿಡಿಯೊ ರೆಸೊಲ್ಯುಶನ್‌ಗಳು ಮತ್ತು ಆಡಿಯೊ ಗುಣಮಟ್ಟವನ್ನು ಬೆಂಬಲಿಸಬೇಕು, ಕನಿಷ್ಠ ಮತ್ತು ಗರಿಷ್ಠ ನೆಟ್‌ವರ್ಕ್‌ಗಳನ್ನು ಬೆಸೆಯುವುದಕ್ಕೂ ಪೂರಕವಾಗಿರಬೇಕು
    – ವಿದ್ಯುತ್ ಮತ್ತು ಪ್ರೊಸೆಸರ್ ಬಳಕೆ ಕನಿಷ್ಠ ಮಟ್ಟದಲ್ಲಿರಬೇಕು
    – ಬಾಹ್ಯ ಹಾರ್ಡ್‌ವೇರ್ ಅವಲಂಬನೆ ಇರಬಾರದು
    – ಯಾವುದೇ ಸಾಧನದಲ್ಲಿ ಕೆಲಸ ಮಾಡಬೇಕು
    – ಕಾನ್ಫರೆನ್ಸ್ ವೇಳೆ ಬಹು-ಬಳಕೆದಾರರ ಜತೆಗೆ ಚಾಟಿಂಗ್ ಆಯ್ಕೆ ಇರಬೇಕು.
    – ಕಾನ್ಫರೆನ್ಸ್ ಸೇರಲು ಸೈನ್-ಇನ್ ಇರುವ ಮತ್ತು ಸೈನ್-ಇನ್ ಇಲ್ಲದ ಆಯ್ಕೆ ಇರಬೇಕು.
    – ಬ್ರೌಸರ್ ಮತ್ತು/ಅಥವಾ ಆ್ಯಪ್ ಆಧಾರಿತ ಇಂಟರ್ಫೇಸ್ ಬೇಕು.
    – ಎನ್‌ಕ್ರಿಪ್ಟ್ ಆಗಿರುವ ನೆಟ್‌ವರ್ಕ್ ಸಂವಹನ ಇರಬೇಕು.
    – ಆಡಿಯೊ/ವಿಡಿಯೊ ರೆಕಾರ್ಡಿಂಗ್ ಸೌಕರ್ಯ ಇರಬೇಕು.
    – ಸ್ಕ್ರೀನ್/ಫೈಲ್ ಹಂಚಿಕೊಳ್ಳುವ ಸಾಮರ್ಥ್ಯ ಇರಬೇಕು
    – ಹಲವು ಬಳಕೆದಾರರಿರುವ, ಹಲವು ಕಾನ್ಫರೆನ್ಸ್‌ಗಳನ್ನು ಹೋಸ್ಟ್ ಮಾಡುವ ಸಾಮರ್ಥ್ಯ ಇರಬೇಕು.

ಪ್ರಜಾವಾಣಿಯಲ್ಲಿ ಪ್ರಕಟ 21 ಏಪ್ರಿಲ್ 2020

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s