ಯೂಟ್ಯೂಬ್ ವೀಡಿಯೊದಿಂದ ಆಡಿಯೋ ಪಡೆಯುವುದು ಸುಲಭ

YouTube audioಗೂಗಲ್ ಒಡೆತನದ ವೀಡಿಯೋಗಳ ಭಂಡಾರ ಯೂಟ್ಯೂಬ್, ಅದೆಷ್ಟೋ ಸುಮಧುರ ಹಾಡುಗಳನ್ನೂ ನೋಡಲು ಅನುವು ಮಾಡುತ್ತದೆ. ಆದರೆ ಸರಿಯಾಗಿ ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೆ ಅದು ಸುರುಳಿ ಸುತ್ತುತ್ತಾ (ಬಫರಿಂಗ್) ಇದ್ದರೆ, ಕೇಳುವಿಕೆಯ ಆನಂದಕ್ಕೆ ಅಡ್ಡಿಯಾಗಬಹುದು. ಅಥವಾ ಪ್ರಯಾಣಿಸುತ್ತಿರುವಾಗ ಮೊಬೈಲ್ ಫೋನ್ ಮೂಲಕ ಕಿವಿಗಾನಿಸಿಕೊಂಡು ಯೂಟ್ಯೂಬ್ ನೋಡಿದರೆ, ಬ್ಯಾಟರಿ ಬೇಗ ಖಾಲಿಯಾಗುವ ಆತಂಕ. ಹೀಗಾಗಿ, ಇದೇ ವೀಡಿಯೊ ಹಾಡನ್ನು ಎಂಪಿ3 ಎಂಬ ಮ್ಯೂಸಿಕ್ ಫೈಲ್ ಆಗಿ ಪರಿವರ್ತಿಸಿದರೆ ಈ ಸಮಸ್ಯೆಗಳು ಪರಿಹಾರವಾಗುತ್ತವೆ. ಮತ್ತು ಪದೇ ಪದೇ ಕೇಳುವುದಕ್ಕೆ ಇಂಟರ್ನೆಟ್ ಸಂಪರ್ಕವೂ ಬೇಕಾಗಿರುವುದಿಲ್ಲ. ಇದಕ್ಕಾಗಿ ಯೂಟ್ಯೂಬ್ ಹಾಡುಗಳನ್ನು ಎಂಪಿ3 ಎಂಬ ಫೈಲ್ ಫಾರ್ಮ್ಯಾಟ್ ಮೂಲಕ ಆಡಿಯೋ ರೂಪದಲ್ಲಿ ಸಂಗ್ರಹಿಸಿಟ್ಟುಕೊಳ್ಳುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ಇದನ್ನು ಮಾಡುವ ಮುನ್ನ ಒಂದು ಪ್ರಶ್ನೆ ಬರುತ್ತದೆ. ಯೂಟ್ಯೂಬ್ ವೀಡಿಯೊಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಕಾನೂನುಬದ್ಧವೇ? ಕಾನೂನು ಪ್ರಕಾರ, ಕೃತಿಸ್ವಾಮ್ಯವುಳ್ಳ ವೀಡಿಯೊಗಳು ಮತ್ತು ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗಳು ಅದನ್ನು ಸಾರ್ವಜನಿಕರ ಬಳಕೆಗೆಂದು ಪೋಸ್ಟ್ ಮಾಡಿರುವುದರ ಹೊರತಾಗಿ, ಅನುಮತಿಯಿಲ್ಲದೆ ವೀಡಿಯೊಗಳನ್ನು ಯಾವುದೇ ರೂಪದಲ್ಲಿ ಡೌನ್‌ಲೋಡ್ ಮಾಡಿಕೊಳ್ಳುವುದು ಅಪರಾಧ. ಗೂಗಲ್‌ನ ಸೇವಾ ನಿಯಮಗಳು (Terms of Service) ಕೂಡ ಇದನ್ನೇ ಹೇಳುತ್ತದೆ. ಟೂಲ್ ಮೂಲಕ ಈ ನಿಯಮ ಉಲ್ಲಂಘಿಸಲಾಗುತ್ತದೆ ಎಂದು ತಿಳಿದುಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಗೂಗಲ್ ಎಚ್ಚರಿಸುತ್ತದೆ. ಈ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯಬೇಕಾಗುತ್ತದೆ. ವ್ಯಕ್ತಿಗತ ಬಳಕೆಗಾಗಿ, ಯೂಟ್ಯೂಬ್ ವೀಡಿಯೊಗಳನ್ನು ಆನ್‌ಲೈನ್‌ನಲ್ಲಿಯೇ ಎಂಪಿ-3 ರೂಪಕ್ಕೆ ಪರಿವರ್ತಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ. ಗೂಗಲ್‌ನಲ್ಲಿ ಸರ್ಚ್ ಮಾಡಿದ್ರೆ ಸಾಕಷ್ಟು ವೆಬ್ ತಾಣಗಳು ಕಾಣಿಸುತ್ತವೆ, ಅವುಗಳಲ್ಲಿ ಕುತಂತ್ರಾಂಶಗಳು (ವೈರಸ್, ಫಿಶ್ಶಿಂಗ್ ಮುಂತಾದ ಮಾಲ್‌ವೇರ್) ಇರಬಹುದಾಗಿದ್ದು, ಒಂದು ಕ್ಲಿಕ್ ಮಾಡಿದರೆ ಏನೇನೋ ಪುಟಗಳು ಕಾಣಿಸಿಕೊಂಡು ಗೊಂದಲಕ್ಕೆ ಕಾರಣವಾಗಬಹುದು. ಇದಕ್ಕಾಗಿ ಕೆಲವು ಆಯ್ದ ತಾಣಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಆನ್‌ಲೈನ್‌ನಲ್ಲಿ ಕೆಲವು ತಾಣಗಳು ಯೂಟ್ಯೂಬ್‌ನ ವೀಡಿಯೊಗಳನ್ನು ಎಂಪಿ-3 ಫೈಲ್‌ಗೆ ಪರಿವರ್ತಿಸಿಕೊಡುವ ಸೇವೆಯನ್ನು ಒದಗಿಸುತ್ತಿವೆ. ಅವುಗಳ ಪುಟ ತೆರೆದು, ಆ ಪುಟದಲ್ಲಿರುವ ಒಂದು ಬಾಕ್ಸ್‌ನಲ್ಲಿ ನಿಮಗೆ ಬೇಕಾದ ಯೂಟ್ಯೂಬ್ ವೀಡಿಯೊದ ಯುಆರ್‌ಎಲ್ (ವೆಬ್ ವಿಳಾಸ) ಹಾಕಿದರೆ, ಡೌನ್‌ಲೋಡ್ ಬಟನ್ ಕ್ಲಿಕ್ ಮಾಡುವ ಮುನ್ನ, ಯಾವ ಆಡಿಯೋ ಫಾರ್ಮ್ಯಾಟ್ ಬೇಕೂಂತ ಆಯ್ಕೆ ಮಾಡಿಕೊಳ್ಳುವ ಅವಕಾಶವೂ ಇದೆ. ಎಂಪಿ-3 ಆಯ್ಕೆ ಮಾಡಿಕೊಳ್ಳಿ, ಡೌನ್‌ಲೋಡ್ ಬಟನ್ ಒತ್ತಿಬಿಡಿ. ನಿಮ್ಮ ಕಂಪ್ಯೂಟರಿಗೆ ಹಾಡಿನ ಫೈಲ್ ರೂಪದಲ್ಲಿ ಅದು ಡೌನ್‌ಲೋಡ್ ಆಗುತ್ತದೆ. ಅದನ್ನು ಯುಎಸ್‌ಬಿ (ಡೇಟಾ) ಕೇಬಲ್ ಮೂಲಕವೋ, ಬ್ಲೂಟೂತ್ ಅವಕಾಶವಿದ್ದರೆ ಅದರ ಮೂಲಕವೋ ನಿಮ್ಮ ಸ್ಮಾರ್ಟ್‌ಫೋನ್‌ಗೆ ವರ್ಗಾಯಿಸಿಕೊಳ್ಳಿ.

ಕೆಳಗೆ ಕೆಲವು ತಾಣಗಳ ವೆಬ್ ವಿಳಾಸಗಳಿವೆ.
YouTubeMP3.is
ytmp3.cc
genyoutube.net
convert2mp3.net/en/
onlinevideoconverter.com/mp3-converter

ಇವುಗಳಲ್ಲಿ genyoutube.net ವಿಶೇಷತೆ ಎಂದರೆ, ನೀವು ವೀಕ್ಷಿಸುತ್ತಿರುವ ಯೂಟ್ಯೂಬ್ ವೀಡಿಯೋದ ಅಡ್ರೆಸ್ ಬಾರ್‌ನಲ್ಲಿಯೇ, Youtube ಅಂತ ಇರುವ ಮೊದಲು gen ಅಂತ ಸೇರಿಸಿದರೆ ಸಾಕಾಗುತ್ತದೆ. ಉದಾ. Youtube.com/xyz ಅಂತ ಇದ್ದುದನ್ನು genYoutube.com/xyz ಅಂತ ಬದಲಾಯಿಸಿ, ಎಂಟರ್ ಕೊಟ್ಟರೆ, ಕೆಳಗೆ ಯಾವ ಫಾರ್ಮ್ಯಾಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬೇಕೆಂದು ಆಯ್ಕೆ ಮಾಡಿಕೊಳ್ಳಲು ಪಟ್ಟಿ ಕಾಣಿಸುತ್ತದೆ. ಬೇಕಾದ ಬಟನ್ ಒತ್ತಿದಾಕ್ಷಣ ಡೌನ್‌ಲೋಡ್ ಪ್ರಾರಂಭವಾಗುತ್ತದೆ.

ಮೊಬೈಲ್ ಫೋನ್‌ನಲ್ಲಿ YouTube Music ಎಂಬ ಆ್ಯಪ್ ಕೂಡ ನೆರವಾಗುತ್ತದೆಯಾದರೂ, ಉಚಿತ ಆವೃತ್ತಿಯಲ್ಲಿ ಡೌನ್ಲೋಡ್ ಮಾಡಲಾಗದು. ಅಲ್ಲೇ ಕೇಳಬಹುದಷ್ಟೇ. ಹಣ ಕೊಟ್ಟು ಆ್ಯಪ್ ಖರೀದಿಸಿದರೆ ನಿಮ್ಮ ಮೊಬೈಲ್‌ನಿಂದಲೇ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ಅಂಕಣ, 22 ಅಕ್ಟೋಬರ್ 2018

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s