ನಿಮ್ಮ ಸ್ಮಾರ್ಟ್ ಫೋನ್ ರಕ್ಷಣೆಗೊಂದು ಬೀಗ: ಸ್ಕ್ರೀನ್ ಲಾಕ್

Screen lock for Smartphoneಸ್ಮಾರ್ಟ್‌ಫೋನ್‌ನ ಅಗತ್ಯವೂ ಬಳಕೆಯೂ ಹೆಚ್ಚಾಗುವುದರೊಂದಿಗೆ ಅದರ ದುರ್ಬಳಕೆ ಕೂಡ ಜಾಸ್ತಿಯಾಗುತ್ತಿದೆ. ಮಕ್ಕಳ ಕೈಗೆ, ಅಥವಾ ಕಳೆದುಹೋದ ನಮ್ಮ ಫೋನ್ ಅಪರಿಚಿತರ ಕೈಗೆ ಸಿಕ್ಕಾಗ, ನಮ್ಮ ಪಾಡು ಹೇಳತೀರದು. ಸಾಮಾನ್ಯ ದಿನಗಳಲ್ಲಿ ಈ ರೀತಿಯಾಗಿ ದುರ್ಬಳಕೆ ಆಗುವುದನ್ನು ತಪ್ಪಿಸಲು ಆಂಡ್ರಾಯ್ಡ್ ಸಿಸ್ಟಂನಲ್ಲೇ ವ್ಯವಸ್ಥೆ ಇದೆ. ಸ್ಕ್ರೀನ್‌ಗೆ ಲಾಕ್ (ಬೀಗ) ಹಾಕುವುದು ಅಂಥದ್ದರಲ್ಲಿ ಒಂದು. ಸ್ಕ್ರೀನ್ ಲಾಕ್ ಮಾಡಲು ಪಿನ್, ಪಾಸ್‌ವರ್ಡ್, ಗೆರೆ ಎಳೆಯುವುದು, ಬೆರಳಚ್ಚು (ಫಿಂಗರ್‌ಪ್ರಿಂಟ್) ಮುಂತಾದ ಅನ್‌ಲಾಕಿಂಗ್ (ಸ್ಕ್ರೀನ್‌ನ ಲಾಕ್ ತೆಗೆಯುವ) ವೈಶಿಷ್ಟ್ಯಗಳು ನಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿಯೇ ಅಡಗಿವೆ. ಇದು ಹೆಚ್ಚಿನವರಿಗೆ ತಿಳಿದಿದೆಯಾದರೂ, ತಿಳಿಯದಿರುವ ವಿಕ ಓದುಗರನೇಕರು ಈ ಕುರಿತು ಹಲವು ದಿನಗಳಿಂದ ಇಮೇಲ್, ಫೇಸ್‌ಬುಕ್ ಮೆಸೆಂಜರ್, ವಾಟ್ಸ್ಆ್ಯಪ್ ಮೂಲಕ ಈ ವಿಧಾನಗಳ ಕುರಿತು ವಿಸ್ತೃತ ಮಾಹಿತಿ ನೀಡುವಂತೆ ಕೇಳಿಕೊಂಡಿದ್ದರು. ಫೋನ್ ಸುರಕ್ಷತೆಯ ಮೂಲ ವ್ಯವಸ್ಥೆ ಮತ್ತು ಅದರ ವಿಧಗಳ ಕುರಿತಾದ ಮಾಹಿತಿ ಇಲ್ಲಿದೆ.

ನಮ್ಮ ವೈಯಕ್ತಿಕ ಮಾಹಿತಿ, ಬ್ಯಾಂಕ್ ಖಾತೆ ಲಾಗಿನ್, ಇಮೇಲ್ ಮುಂತಾದವೆಲ್ಲವೂ ಸ್ಮಾರ್ಟ್‌ಫೋನ್ ಎಂಬ ಅದ್ಭುತದೊಳಗಿರುತ್ತದೆ. ಅದರ ಜತೆಗೆ ಫೋಟೋ, ವೀಡಿಯೊ, ಡಾಕ್ಯುಮೆಂಟ್‌ಗಳು ಮುಂತಾದ ಖಾಸಗಿ ಫೈಲುಗಳು ಕೂಡ. ಇದರ (ಪ್ರೈವೆಸಿ) ಸುರಕ್ಷತೆಗಾಗಿ ನಾವು ಸ್ಕ್ರೀನ್ ಲಾಕ್ ಅಳವಡಿಸಿಕೊಳ್ಳಲೇಬೇಕು. ಇದಲ್ಲದೆ ಸ್ಕ್ರೀನ್ ಮೇಲೆ ಆಕಸ್ಮಿಕವಾಗಿ ಬೆರಳು ಸ್ಪರ್ಶವಾಗಿ, ಯಾರಿಗೋ ಫೋನ್ ಕರೆ ಹೋಗುವುದು, ಯಾವುದಾದರೂ ಆ್ಯಪ್ ಓಪನ್ ಆಗುವುದು… ಇಂಥ ಆಕಸ್ಮಿಕಗಳನ್ನು ತಡೆಯುವುದು ಕೂಡ ಮತ್ತೊಂದು ಉದ್ದೇಶ. ಮಕ್ಕಳಂತೂ ತಿಳಿಯದೆ ಯಾವ್ಯಾವುದೋ ಆ್ಯಪ್ ಅಥವಾ ಸೆಟ್ಟಿಂಗ್‌ಗಳನ್ನು ಒತ್ತಿಬಿಟ್ಟರೆ ಆಗುವ ಫಜೀತಿ ಅಷ್ಟಿಷ್ಟಲ್ಲ.

ಸ್ಕ್ರೀನ್ ಲಾಕ್: ಮೂಲತಃ ಆಂಡ್ರಾಯ್ಡ್ ಫೋನ್‌ಗಳಲ್ಲಿ ಸ್ಕ್ರೀನ್ ಲಾಕ್ ಮಾಡಲು ಸ್ವೈಪ್, ಪ್ಯಾಟರ್ನ್, ಪಿನ್ ಹಾಗೂ ಪಾಸ್‌ವರ್ಡ್‌ಗಳೆಂಬ ನಾಲ್ಕು ವಿಧಾನಗಳಿರುತ್ತವೆ. ಈಗಿನ, ಅಂದರೆ ಲಾಲಿಪಾಪ್ (ಆಂಡ್ರಾಯ್ಡ್ 5.0 ಕಾರ್ಯಾಚರಣಾ ವ್ಯವಸ್ಥೆಯ ನಂತರದ) ಆಂಡ್ರಾಯ್ಡ್ ಫೋನ್‌ಗಳಲ್ಲಿ ಸ್ಮಾರ್ಟ್ ಲಾಕ್ ಎಂಬ ಮತ್ತೊಂದು ವಿಧಾನವೂ ಇದೆ. ಜತೆಗೆ ಫಿಂಗರ್‌ಪ್ರಿಂಟ್ (ಬೆರಳಚ್ಚು ಗುರುತು), ಫೇಸ್ ರೆಕಗ್ನಿಷನ್ (ಮುಖದ ಗುರುತು) ಅನ್‌ಲಾಕ್ ವ್ಯವಸ್ಥೆ ಕೂಡ ಹೊಸ ತಂತ್ರಜ್ಞಾನದ ಭಾಗ.

ಮೂಲ ಸ್ಕ್ರೀನ್ ಲಾಕ್ ವ್ಯವಸ್ಥೆ: ಫೋನ್‌ನ ಸೆಟ್ಟಿಂಗ್ಸ್ ಮೆನುವಿನಲ್ಲಿ, ‘ಸೆಕ್ಯುರಿಟಿ ಆ್ಯಂಡ್ ಲೊಕೇಶನ್’ ಎಂಬ ವಿಭಾಗವಿದೆ. ಇದರ ಹೆಸರು ಕೆಲವು ಬ್ರ್ಯಾಂಡ್‌ಗಳ ಫೋನ್‌ಗಳಲ್ಲಿ ಬೇರೆ ರೀತಿಯಲ್ಲಿರಬಹುದು. ಉದಾಹರಣೆಗೆ, ‘ಲಾಕ್ ಸ್ಕ್ರೀನ್ ಆ್ಯಂಡ್ ಸೆಕ್ಯುರಿಟಿ’ ಅಥವಾ ‘ಸೆಕ್ಯುರಿಟಿ ಆ್ಯಂಡ್ ಲೊಕೇಶನ್’ ಇತ್ಯಾದಿ ಕೂಡ ಇರಬಹುದು. ಅಲ್ಲಿ ‘ಡಿವೈಸ್ ಸೆಕ್ಯುರಿಟಿ’ ಎಂಬಲ್ಲಿ ‘ಸ್ಕ್ರೀನ್ ಲಾಕ್’ ವಿಭಾಗಕ್ಕೆ ಹೋದರೆ, ಮೊದಲನೆಯದಾಗಿ ಕಾಣಿಸುವುದು ‘ನನ್’ (ಸ್ಕ್ರೀನ್ ಲಾಕ್ ಬೇಡ) ಎಂಬ ಆಯ್ಕೆ. ನಂತರದ್ದು ಸ್ವೈಪ್. ಅಂದರೆ ಸ್ಕ್ರೀನ್ ಮೇಲೆ ಬೆರಳಿನಿಂದ ನಿರ್ದಿಷ್ಟ ದಿಕ್ಕಿಗೆ ಸ್ವೈಪ್ ಮಾಡುವುದು. ಇವೆರಡರಲ್ಲೂ ಯಾವುದೇ ಸುರಕ್ಷತೆ ಇರುವುದಿಲ್ಲ, ಯಾರು ಬೇಕಾದರೂ ಸ್ಕ್ರೀನ್ ಅನ್‌ಲಾಕ್ ಮಾಡಬಹುದು.

ಮುಂದಿನದು ನಿರ್ದಿಷ್ಟವಾದ ವಿನ್ಯಾಸದಲ್ಲಿ ಚುಕ್ಕೆಗಳನ್ನು ಜೋಡಿಸುವ ‘ಪ್ಯಾಟರ್ನ್’ ಅನ್‌ಲಾಕಿಂಗ್ ವ್ಯವಸ್ಥೆ. ನಮ್ಮದೇ ವಿನ್ಯಾಸವನ್ನು ಇಲ್ಲಿ ಎರಡು ಬಾರಿ ನಮೂದಿಸಿ, ಸೇವ್ ಮಾಡಿಟ್ಟುಕೊಂಡರೆ, ಆ ಜೋಡಣಾ ವಿನ್ಯಾಸ ತಿಳಿದವರು ಮಾತ್ರ ಸ್ಕ್ರೀನ್ ಅನ್‌ಲಾಕ್ ಮಾಡಬಹುದು. ಉಳಿದಂತೆ, ನಾಲ್ಕು ಅಂಕಿಗಳ ಪಿನ್ ನಂಬರ್ ಹೊಂದಿಸುವುದು ಹಾಗೂ ಪಾಸ್‌ವರ್ಡ್ ಹೊಂದಿಸುವುದು. ಇವುಗಳಲ್ಲಿ ಯಾವುದಾದರೂ ಒಂದನ್ನು ಆಯ್ದುಕೊಳ್ಳಿ. ಅಥವಾ ಲಾಕ್ ಮಾಡುವ ಆ್ಯಪ್‌ಗಳೂ ಸಿಗುತ್ತವೆ. ಆಕಸ್ಮಿಕ ಟಚ್, ಕಳವು ಹಾಗೂ ದುರ್ಬಳಕೆಯಿಂದ ನಿಮ್ಮ ಫೋನನ್ನು ಹೀಗೆ ರಕ್ಷಿಸಿಕೊಳ್ಳಬಹುದು.

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ., 03 ಸೆಪ್ಟೆಂಬರ್ 2018 ಅಂಕಣ

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s