Tecno Camon i Twin Review: ಟೆಕ್ನೋ ಕ್ಯಾಮಾನ್ ಐ ಟ್ವಿನ್ ಫೋನ್ ಹೇಗಿದೆ?

Tecno Camon itwinಹಾಂಕಾಂಗ್ ಮೂಲದ ಟ್ರಾನ್ಸಿಯಾನ್ ಹೋಲ್ಡಿಂಗ್ಸ್ ಮಾಲೀಕತ್ವದ ಟೆಕ್ನೋ ಬ್ರ್ಯಾಂಡ್‌ನ ಹೊಚ್ಚ ಹೊಸ ಫೋನ್ ಜೂ.23ರಂದು ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಹೆಸರು ಕ್ಯಾಮಾನ್ ಐ ಟ್ವಿನ್. ಈ ಮಾಡೆಲ್‌ನ ಹೆಸರಲ್ಲಿರುವಂತೆ ಇದರಲ್ಲಿ ಹಿಂಭಾಗದಲ್ಲಿ (ಪ್ರಧಾನ) ಎರಡು ಕ್ಯಾಮೆರಾಗಳಿವೆ.

ಇದನ್ನು ಮೂರು ವಾರ ಬಳಸಿ ನೋಡಿದೆ. ಹೇಗಿದೆ?

Camon i TWIN ಫೋನ್‌ನ ಸ್ಪೆಸಿಫಿಕೇಶನ್ಸ್
13 MP ಪ್ರಧಾನ ಕ್ಯಾಮೆರಾ ƒ/2.0, 2 MP ಮತ್ತೊಂದು ಕ್ಯಾಮೆರಾ, ಜತೆಗೆ LED ಫ್ಲ್ಯಾಶ್
ಚಿತ್ರದ ರೆಸೊಲ್ಯುಶನ್: 4128 x 3096 ಪಿಕ್ಸೆಲ್
13 MP ಸೆಲ್ಫೀ (ಮುಂಭಾಗದ ಕ್ಯಾಮೆರಾ) ƒ/2.0, LED ಫ್ಲ್ಯಾಶ್
15.24 cm (6.0 ಇಂಚು) ಫುಲ್ ವ್ಯೂ HD+ ಐಪಿಎಸ್ ಡಿಸ್‌ಪ್ಲೇ
2 SIM ಕಾರ್ಡ್ + Memory ಕಾರ್ಡ್ ಸ್ಲಾಟ್
ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ
ಸ್ಕ್ರೀನ್ ರೆಸೊಲ್ಯುಶನ್: 720 x 1440 ಪಿಕ್ಸೆಲ್ಸ್
ಆಂಡ್ರಾಯ್ಡ್ 8.0 ಒರಿಯೋ ಆಧಾರಿತ HiOS ಕಾರ್ಯಾಚರಣಾ ವ್ಯವಸ್ಥೆ
ಕ್ವಾಲ್‌ಕಾಂ ಸ್ನ್ಯಾಪ್‌ಡ್ರ್ಯಾಗನ್ 425 MSM8917 ಚಿಪ್‌ಸೆಟ್
ಅಡ್ರಿನೋ 308 ಗ್ರಾಫಿಕ್ಸ್
ಕ್ವಾಡ್‌ಕೋರ್, 1.4 GHz, ಕಾರ್ಟೆಕ್ಸ್ A53 ಪ್ರೊಸೆಸರ್
ಮೆಮೊರಿ: 32 GB ROM, 3 GB RAM; 128 GB ವರೆಗೆ ವಿಸ್ತರಿಸಬಹುದು.
ಕ್ಯಾಮೆರಾ: 13 MP + 13 MP+2 MP ಮೂರು ಕ್ಯಾಮೆರಾಗಳು
ಬ್ಯಾಟರಿ: 4000 mAh
ಸಾಮಾನ್ಯ ವೈಶಿಷ್ಟ್ಯಗಳು: ವೈಫೈ, ಬ್ಲೂಟೂತ್, ಜಿಪಿಎಸ್
ಬೆಲೆ: 12499/-
ಮತ್ತಷ್ಟು
ಕಣ್ಣುಗಳ ರಕ್ಷಣೆಗಾಗಿ Eye Care ಆಯ್ಕೆ
ಅನ್‌ಲಾಕ್ ಮಾಡಲು ಮುಖ ಡಿಟೆಕ್ಷನ್
ಫಿಂಗರ್‌ಪ್ರಿಂಟ್ ಸೆನ್ಸರ್
ಸ್ವಯಂ ಫ್ಲ್ಯಾಶ್
ಫೋಕಸ್ ಮಾಡಲು ಟಚ್
ಪ್ರಾಕ್ಸಿಮಿಟಿ ಸೆನ್ಸರ್
4ಜಿ VoLTE ಬೆಂಬಲ ಇದೆ
ತೂಕ: 161 ಗ್ರಾಂ
—-

ಮೊದಲ ಇಂಪ್ರೆಶನ್:
​ಸ್ಪೆಸಿಫಿಕೇಶನ್ ಗಮನಿಸಿದರೆ ಈ ಬೆಲೆಗೆ ಸಿಗುವ ಉತ್ತಮ ಫೋನ್ ಇದು. ಜತೆಗೆ ತೆಳ್ಳಗಿದೆ ಹಾಗೂ ತೂಕವೂ ಕಡಿಮೆ. ಕೈಯಲ್ಲಿ ಹಿಡಿಯಲು ತುಂಬಾ ಅನುಕೂಲ. ಸ್ಮಾರ್ಟ್ ಫೋನ್ ನೋಡಿದ ತಕ್ಷಣ ಹೊಳೆದದ್ದು ಇದು.

ಎರಡು ಜಿಎಸ್ಎಂ ನ್ಯಾನೋ ಸಿಮ್ ಕಾರ್ಡ್‌ಗಳ ಜತೆಗೆ ಪ್ರತ್ಯೇಕವಾಗಿ 128 ಜಿಬಿ ವರೆಗಿನ ಮೆಮೊರಿ ಕಾರ್ಡ್ ಬೆಂಬಲಿಸುವುದರಿಂದ ಫೋಟೋ/ವೀಡಿಯೋಗಳಿಗೆ ಹೆಚ್ಚು ಅನುಕೂಲ. ಆಂಡ್ರಾಯ್ಡ್‌ನ ಇತ್ತೀಚಿನ 8.0 ಒರಿಯೋ ಆವೃತ್ತಿ ಆಧಾರಿತ ಹಾಯ್ ಒಎಸ್ ಕಾರ್ಯಾಚರಣಾ ವ್ಯವಸ್ಥೆ ಇದ್ದು, 720x 1440 ಪಿಕ್ಸೆಲ್ ಸ್ಕ್ರೀನ್ ರೆಸೊಲ್ಯುಶನ್ ಇದೆ.

ಮೈಕ್ರೋ ಇಂಟೆಲಿಜೆನ್ಸ್ ವೈಶಿಷ್ಟ್ಯ
ಸೆಟ್ಟಿಂಗ್ಸ್‌ನಲ್ಲಿರುವ ಮೈಕ್ರೋ ಇಂಟೆಲಿಜೆನ್ಸ್ ಎಂಬ ವೈಶಿಷ್ಟ್ಯವು ಹಿಂದಿನ ಟೆಕ್ನೋ ಕ್ಯಾಮನ್ ಐಯಲ್ಲಿರುವಂತೆಯೇ ಇದೆ. ಅಂದರೆ ಇವೆಲ್ಲವೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಎಂಬ ವಿನೂತನ ತಂತ್ರಜ್ಞಾನದ ಫಲ. ಸ್ಕ್ರೀನ್ ಆಫ್ ಇರುವಾಗ ಸ್ಕ್ರೀನ್ ಮೇಲೆ ಎರಡು ಬಾರಿ ತಟ್ಟಿದರೆ, ಸಮಯ ತೋರಿಸುತ್ತದೆ, ಹಾಡು ನುಡಿಸಬೇಕಿದ್ದರೆ, ನಿರ್ದಿಷ್ಟ ಸನ್ನೆ ಹೊಂದಿಸುವ ಆಯ್ಕೆಯಿದೆ. ಫೋನನ್ನು ಫ್ಲಿಪ್ ಮಾಡಿದರೆ ಸೈಲೆನ್ಸ್ (ನಿಶ್ಶಬ್ಧ) ಮೋಡ್ ಆಗುತ್ತದೆ. ಅಂತೆಯೇ, ರಿಂಗ್ ಆಗುತ್ತಿರುವಾಗ ಸ್ಕ್ರೀನ್ ಕವರ್ ಮಾಡಿದರೆ ಅದು ಮ್ಯೂಟ್ ಆಗುತ್ತದೆ. ಅದೇ ರೀತಿ, ಸ್ಕ್ರೀನ್ ಮೇಲೆ ಮೂರು ಬೆರಳು ಆಡಿಸಿದರೆ ಸ್ಕ್ರೀನ್ ಶಾಟ್ ತೆಗೆಯಬಹುದು, ಇಂಗ್ಲಿಷ್ ಅಕ್ಷರಗಳನ್ನು ಬರೆದರೆ, ನಿರ್ದಿಷ್ಟ ಹೆಸರಿನಿಂದ ಆರಂಭವಾಗುವ ಆ್ಯಪ್ ಲಾಂಚ್ ಮಾಡಬಹುದು – ಇವೆಲ್ಲ ವಿಶೇಷತೆಗಳೂ ಇವೆ.

ಫಿಂಗರ್‌ಪ್ರಿಂಟ್ ತಂತ್ರಜ್ಞಾನವಲ್ಲದೆ ಇದರಲ್ಲಿ ವಾಟ್ಸಾಪ್ ಮೋಡ್ ಎಂಬುದೊಂದಿದೆ. ಈ ಮೋಡ್‌ನಲ್ಲಿಟ್ಟರೆ ವಾಟ್ಸಾಪ್ ನೋಟಿಫಿಕೇಶನ್‌ಗಳು ಮಾತ್ರ ಕಾಣಿಸುತ್ತವೆ. ಉಳಿದೆಲ್ಲ ಹಿನ್ನೆಲೆ ಆ್ಯಪ್‌ಗಳು ಡಿಸೇಬಲ್ ಆಗುತ್ತವೆ. ಡೇಟಾ (ಇಂಟರ್ನೆಟ್) ಬಳಕೆ ಮೇಲೆ ಕಡಿವಾಣ ಹಾಕಲು ಇದು ಸೂಕ್ತ ಮೋಡ್.

ಸ್ಕ್ರೀನ್‌ನಿಂದ ಹೊರಹೊಮ್ಮುವ ಬ್ಲೂ-ರೇ (ನೀಲ ಕಿರಣಗಳು) ಕಣ್ಣಿಗೆ ಹಾನಿಕರವಾಗಿರುವುದರಿಂದ, ಅವುಗಳಿಂದ ಕಣ್ಣುಗಳನ್ನು ರಕ್ಷಿಸಲು, ಬ್ಲೂ ಕಿರಣಗಳನ್ನು ಫಿಲ್ಟರ್ ಮಾಡುವ ‘ಐ ಕೇರ್’ ಎಂಬ ವ್ಯವಸ್ಥೆ ಗಮನ ಸೆಳೆಯುತ್ತದೆ. ನಿರ್ದಿಷ್ಟ ಅವಧಿಗಾಗಿ (ಉದಾಹರಣೆಗೆ, ಸಂಜೆಯಿಂದ ಮರುದಿನ ಬೆಳಗ್ಗಿನವರೆಗೆ) ಹೊಂದಿಸಬಹುದು. ಆಗ ಸ್ಕ್ರೀನ್‌ನ ಬ್ರೈಟ್‌ನೆಸ್ ಕಡಿಮೆಯಾಗಿ ಕಣ್ಣುಗಳ ರಕ್ಷಣೆಗೆ ಅನುಕೂಲ.

ಕನ್ನಡ ಟೈಪಿಂಗ್ ಕೀಬೋರ್ಡ್ ಅಳವಡಿಕೆಯಾಗಿಯೇ ಬಂದಿದ್ದು, ಇದು ಇನ್‌ಸ್ಕ್ರಿಪ್ಟ್ ಮಾದರಿಯ ಕೀಲಿ ವಿನ್ಯಾಸ ಹೊಂದಿದೆ. ಇದು ಕಿಕಾ ಕೀಬೋರ್ಡ್. ಇದರಲ್ಲಿ ಕನ್ನಡ ಸಹಿತ ಭಾರತೀಯ ಭಾಷೆಗಳನ್ನು ಟೈಪ್ ಮಾಡಬಹುದಾಗಿದೆ.

ಹಿಂದಿನ ಕ್ಯಾಮಾನ್ ಐ ಮಾದರಿಯಲ್ಲಿ ಮೆನು ಕೀಗಳಲ್ಲಿ ಹಿಂಬೆಳಕು ಇರಲಿಲ್ಲ. ಬಳಕೆದಾರರ ಈ ಬೇಡಿಕೆಯನ್ನು ಐಟ್ವಿನ್ ಮಾಡೆಲ್‌ನಲ್ಲಿ ಸರಿಪಡಿಸಲಾಗಿದೆ. ಅಗ್ಗದ ದರದಲ್ಲಿ ಅತ್ಯಾಧುನಿಕ ಸೌಕರ್ಯಗಳೆಲ್ಲವೂ ಇರುವ ಫೋನ್ ಇದು. 6 ಇಂಚು ಸ್ಕ್ರೀನ್ ಹಾಗೂ 4000 ಎಂಎಎಚ್ ಬ್ಯಾಟರಿ ಇದ್ದರೂ ಸ್ಲಿಮ್ ಮತ್ತು ಹಗುರವಾಗಿರುವುದರಿಂದ ಅನುಕೂಲಕರವಾಗಿದೆ.

ಬಾಕ್ಸ್‌ನಲ್ಲಿ ಚಾರ್ಜರ್, ಇಯರ್‌ಫೋನ್ ಹಾಗೂ ಫೋನ್ ರಕ್ಷಣೆಗಾಗಿ ಪಾರದರ್ಶಕ ಬ್ಯಾಕ್ ಕವರ್ ಕೂಡ ಇದೆ.

ಬೆಲೆ 12499 ರೂ. ಆಗಿದ್ದರೂ, ಆನ್‌ಲೈನ್‌ನಲ್ಲಿ ಒಂದು ಸಾವಿರ ರೂ. ರಿಯಾಯಿತಿಯಲ್ಲಿ ದೊರೆಯತ್ತಿದೆ. ಬಜೆಟ್ ಸೆಗ್ಮೆಂಟ್‌ನಲ್ಲಿ ಮುಖ ನೋಡಿ ಅನ್‌ಲಾಕ್ ಮಾಡಬಲ್ಲ ಫೇಸ್ ಡಿಟೆಕ್ಷನ್, ಬೆರಳಚ್ಚಿನಿಂದ ಅನ್‌ಲಾಕ್ ಮಾಡುವ ಫಿಂಗರ್ ಪ್ರಿಂಟ್, ಉತ್ತಮ ಕ್ಯಾಮೆರಾ, ಈಗಿನ ಅಗತ್ಯಕ್ಕೆ ತಕ್ಕ ಬ್ಯಾಟರಿ, ಒಳ್ಳೆಯ RAM ಹಾಗೂ ಇಂಟರ್ನಲ್ ಮೆಮೊರಿ, ಹಾಗೂ ಒರಿಯೊ ಫೋನ್‌ಗಳ ಎಲ್ಲ ಲೇಟೆಸ್ಟ್ ವೈಶಿಷ್ಟ್ಯಗಳಿರುವ ಈ ಫೋನ್ ಅನ್ಯ ಬ್ರ್ಯಾಂಡೆಡ್ ಹಾಗೂ ಚೈನೀಸ್ ಫೋನುಗಳಿಗೆ ಸ್ಫರ್ಧೆ ನೀಡುತ್ತಿದೆ.

​100 ದಿನಗಳ ರೀಪ್ಲೇ​ಸ್‌ಮೆಂಟ್ ವಾರಂಟಿ, ಒಂದು ಬಾರಿ ಸ್ಕ್ರೀನ್ ರೀಪ್ಲೇಸ್‌ಮೆಂಟ್ ಹಾಗೂ 1 ತಿಂಗಳ ವಿಸ್ತರಿತ ವಾರಂಟಿ (12+1 ತಿಂಗಳು) ಇದರ ಜತೆಗೆ ಬರುತ್ತಿದೆ.

ಜುಲೈ 31, 2018 ಟೆಕ್ನೋ ಕ್ಯಾಮಾನ್ ಐ ಟ್ವಿನ್ ರಿವ್ಯೂ

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s