ಜೆಬ್ರಾನಿಕ್ಸ್ ಬ್ಲೂಟೂತ್ ಇಯರ್ ಫೋನ್ ZEB BE380T

Zebronics BT headsetಬ್ಲೂಟೂತ್ ಸಾಧನಗಳು ಈಗ ಹೆಚ್ಚು ಜನಪ್ರಿಯವಾಗುತ್ತಿವೆ. ವೈರುಗಳ ಹಂಗಿಲ್ಲ. ಇವುಗಳಲ್ಲಿ ಪ್ರಮುಖವಾದದ್ದು ಬ್ಲೂಟೂತ್ ಹೆಡ್‌ಫೋನ್ ಅಥವಾ ಇಯರ್ ಫೋನ್‌ಗಳು.

ಗ್ಯಾಜೆಟ್ಸ್ ತಯಾರಿಕಾ ಕಂಪನಿ ಜೆಬ್ರಾನಿಕ್ಸ್ ಹೊರತಂದಿರುವ ಬ್ಲೂಟೂತ್ ಹೆಡ್‌ಸೆಟ್‌ನ BE380T ಮಾಡೆಲ್ ಹೇಗಿದೆ? ನೋಡೋಣ.

ವೈರ್ ಇರುವ ಇಯರ್ ಫೋನ್ ಅಥವಾ ಹೆಡ್ ಫೋನ್‌ಗಳನ್ನು ಈ ಬ್ಲೂಟೂತ್ ಮಾಡ್ಯೂಲ್‌ಗೆ ಸಿಕ್ಕಿಸಿ, ನಿಮ್ಮ ಸ್ಮಾರ್ಟ್ ಫೋನ್‌ನಿಂದ ಹಾಡನ್ನು ಆನಂದಿಸಬಹುದು. ಮಾಡ್ಯೂಲ್ (ಅಡಾಪ್ಟರ್) ಜತೆಗೆ ಇಯರ್ ಫೋನ್ ಕೂಡ ಇರುತ್ತದೆಯಾದರೂ, ನಮ್ಮಲ್ಲಿರಬಹುದಾದ ಹೆಚ್ಚು ಗುಣಮಟ್ಟದ ಇಯರ್‌ಫೋನನ್ನು ಈ ಮಾಡ್ಯೂಲ್‌ಗೆ ಅಳವಡಿಸಿ, ವೈರ್‌ಲೆಸ್ ವೈಶಿಷ್ಟ್ಯವನ್ನು ನಾವು ಬಳಸಿಕೊಳ್ಳಬಹುದಾಗಿದೆ.

ಸೆಟ್ ಜತೆಗೇ ಬಂದಿರುವ 3.5 ಮಿಮೀ ಜ್ಯಾಕ್ ಹೊಂದಿರುವ ಇಯರ್ ಫೋನ್ ಬಳಸಿದರೆ, ಅದರ ವೈರು ಸ್ವಲ್ಪ ಗಿಡ್ಡ ಅನ್ನಿಸಿದವರು ಈ ಮೇಲಿನಂತೆ ಮಾಡಬಹುದು.

ಉಪಯೋಗ: ವಾಹನ ಚಲಾಯಿಸುತ್ತಿರುವಾಗ ಕರೆ ಸ್ವೀಕರಿಸಲು, ಹಾಡು ಕೇಳಲು, ಅದರ ವಾಲ್ಯೂಮ್ ಹೆಚ್ಚು-ಕಡಿಮೆ ಮಾಡಲು ಇದು ಉಪಯುಕ್ತ. ಅದಕ್ಕಿಂತಲೂ ಹೆಚ್ಚಿನ ಫಂಕ್ಷನ್ ಎಂದರೆ, ಈ ಮಾಡ್ಯೂಲ್ ಒಳಗೆ ಮೈಕ್ರೋ ಎಸ್‌ಡಿ ಕಾರ್ಡ್ (ಮೆಮೊರಿ ಕಾರ್ಡ್) ಅಳವಡಿಸುವ ವ್ಯವಸ್ಥೆಯಿದೆ. ಹೀಗಾಗಿ ಹಾಡು ಕೇಳಲು ಮೊಬೈಲ್ ಬೇಕಾಗಿಲ್ಲ. ಮೆಮೊರಿ ಕಾರ್ಡ್ ಹಾಕಿ ಅಲ್ಲಿಂದಲೂ ಪ್ಲೇ ಮಾಡಿ ಕೇಳಬಹುದು.

ಇದರಲ್ಲಿ ವಾಲ್ಯೂಮ್ ಹೆಚ್ಚು ಅಥವಾ ಕಡಿಮೆ ಮಾಡುವ ಬಟನ್‌ಗಳಿವೆ. ಇದನ್ನು ಒಮ್ಮೆ ಒತ್ತಿದರೆ ಹಿಂದಿನ ಅಥವಾ ಮುಂದಿನ ಹಾಡು ಪ್ಲೇ ಆಗುತ್ತದೆ. ಫಂಕ್ಷನ್ ಬಟನ್ ಮೂಲಕ ಕರೆಯನ್ನು ಒಮ್ಮೆ ಒತ್ತಿದರೆ ಸ್ವೀಕರಿಸಬಹುದು, ಒತ್ತಿ ಹಿಡಿದುಕೊಂಡರೆ, ಕರೆಯನ್ನು ತಿರಸ್ಕರಿಸಬಹುದು.

ಅಡಾಪ್ಟರ್‌ನಲ್ಲಿ ಕ್ಲಿಪ್ ಇರುವುದರಿಂದ ಶರ್ಟಿಗೆ ಅಥವಾ ಜೇಬಿಗೆ ಸಿಲುಕಿಸಿಕೊಳ್ಳಬಹುದು. ಮೈಕ್ ಇರುವುದರಿಂದ ಇದರ ಮೂಲಕವೇ ಮಾತನಾಡಬಹುದು.

ಕೇವಲ 20 ಗ್ರಾಂ ತೂಕವುಳ್ಳ ಇದು, ಜತೆಗೆ ಕೊಂಡೊಯ್ಯಲು ಸುಲಭ. ಒಮ್ಮೆ ಚಾರ್ಜ್ ಮಾಡಿದರೆ ಸತತವಾಗಿ ನಾಲ್ಕೈದು ಗಂಟೆಗಳ ಕಾಲ ಹಾಡು ಕೇಳಬಲ್ಲಷ್ಟು ಅಂದರೆ 140mAh ಬ್ಯಾಟರಿ ಇದೆ. ಇದೇ ಬ್ಯಾಟರಿಯಲ್ಲಿ ಆರೇಳು ಗಂಟೆ ಮಾತನಾಡಬಹುದು. ಸ್ಟ್ಯಾಂಡ್‌ಬೈ ಸಮಯ 10 ಗಂಟೆ.

ಬೆಲೆ: 999 ರೂ.

Published in VK

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s