ಬ್ಯಾಕಪ್: ಕಂಪ್ಯೂಟರ್ ಇರುವವರೆಲ್ಲರೂ ಮಾಡಲೇಬೇಕಾದ ಕೆಲ್ಸ

Windows Backupಕಂಪ್ಯೂಟರ್ ಕ್ರ್ಯಾಶ್ ಆಗಿದೆ, ಹಾರ್ಡ್ ಡಿಸ್ಕ್ ಕ್ರ್ಯಾಶ್ ಆಯಿತು, ಆಪರೇಟಿಂಗ್ ಸಿಸ್ಟಂ ಕೆಟ್ಟು ಹೋಯಿತು, ಫೈಲ್ ಡಿಲೀಟ್ ಆಯಿತು ಅಂತ ಹೇಳುತ್ತಿರುವವರನ್ನು ಕೇಳಿದ್ದೇವೆ. ಸಮಯ ಸಿಕ್ಕಾಗಲೆಲ್ಲಾ ನಮ್ಮ ಕಂಪ್ಯೂಟರಿನ ಆಪರೇಟಿಂಗ್ ಸಿಸ್ಟಂ ಸಹಿತ ಎಲ್ಲ ತಂತ್ರಾಂಶಗಳನ್ನು ಬ್ಯಾಕಪ್ (ಸುಲಭವಾಗಿ ಹೇಳುವುದಾದರೆ Copy) ಇರಿಸಿಕೊಂಡರೆ, ಇಂತಹಾ ಆಪತ್ಕಾಲದಲ್ಲಿ ಆತಂಕ ಪಡುವ ಬದಲು ಸುಲಭವಾಗಿ ರೀಸ್ಟೋರ್ ಮಾಡಬಹುದು. ಇದು ನಾವು-ನೀವು ಮಾಡಿಕೊಳ್ಳಬಹುದಾದ ತೀರಾ ಸುಲಭದ ಕೆಲಸ.

ವಿಂಡೋಸ್ ಆಪರೇಟಿಂಗ್ ಸಿಸ್ಟಂ (7 ಅಥವಾ 8.1 ಆವೃತ್ತಿ) ನಲ್ಲಿ ಬ್ಯಾಕಪ್ ಮಾಡಿಕೊಳ್ಳುವ ಮಾಹಿತಿ ಇಲ್ಲಿ ನೀಡಲಾಗಿದ್ದು, ವಿಂಡೋಸ್ ಎಕ್ಸ್‌ಪಿ ಸಿಸ್ಟಂನಲ್ಲಿಯೂ ಬಹುತೇಕ ಇದೇ ವಿಧಾನ, ಸ್ವಲ್ಪ ಬದಲಾವಣೆಗಳಿರಬಹುದು.

ಎಲ್ಲಿ: ಕೆಲಸ ಪ್ರಾರಂಭಿಸುವುದಕ್ಕೆ ಮೊದಲು, ಈ ಬ್ಯಾಕಪ್ ನಕಲುಪ್ರತಿಯನ್ನು ಎಲ್ಲಿ ಸೇವ್ ಮಾಡಿಡಬೇಕು ಎಂದು ಮೊದಲೇ ನಿರ್ಧರಿಸಬೇಕು. ಕಂಪ್ಯೂಟರ್‌ನಲ್ಲಿ ಹಲವಾರು ಡ್ರೈವ್‌ಗಳು (ಸಿ, ಡಿ, ಇ…) ಇರುತ್ತವೆ. ಅದರಲ್ಲಿ ಸಿ ಡ್ರೈವ್ ಎಲ್ಲ ಪ್ರೋಗ್ರಾಂಗಳು, ಸಿಸ್ಟಂ ತಂತ್ರಾಂಶಕ್ಕಾಗಿಯೇ ಮೀಸಲಾಗಿರುವಂಥದ್ದು. ಇಡೀ ಕಂಪ್ಯೂಟರಿನ ಎಲ್ಲ ಡ್ರೈವ್‌ಗಳ ಬ್ಯಾಕಪ್ ಇರಿಸಿಕೊಳ್ಳಲು ಸಾಕಷ್ಟು ಸ್ಥಳಾವಕಾಶ ಬೇಕಾಗಿರುವುದರಿಂದ ಈಗ ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಲಭ್ಯವಾಗುವ External Hard Disk ಗಳನ್ನು ಖರೀದಿಸಬಹುದು (1 ಟೆರಾಬೈಟ್ ಹಾರ್ಡ್ ಡಿಸ್ಕ್ ಈಗ ನಾಲ್ಕು ಸಾವಿರ ರೂ. ಒಳಗೆ ಲಭ್ಯ). ಸದ್ಯಕ್ಕೆ ಅಷ್ಟು ಹಣ ಹಾಕುವುದು ಕಷ್ಟವೆಂದಾದರೆ, ನಿಮ್ಮ ಕಂಪ್ಯೂಟರ್‌ನಲ್ಲಿರುವ ಬೇರೆ ಡ್ರೈವ್‌ನಲ್ಲಿ (ಡಿ, ಇ ಅಥವಾ ಎಫ್) ಕೂಡ ಬ್ಯಾಕಪ್ ಇರಿಸಬಹುದು.

ಹೇಗೆ?: ಕಂಪ್ಯೂಟರ್‌ನ ಕಂಟ್ರೋಲ್ ಪ್ಯಾನೆಲ್‌ಗೆ ಹೋದರೆ, System and Security ಎಂಬಲ್ಲಿ Backup and Restore ಎಂಬಲ್ಲಿ ಕ್ಲಿಕ್ ಮಾಡಿ. ಪಕ್ಕದಲ್ಲಿ Setup Backup ಬಟನ್ ಕಾಣಿಸಿದಾಗ ಕ್ಲಿಕ್ ಮಾಡಿ. ಮುಂದಿನ ಸ್ಕ್ರೀನ್‌ನಲ್ಲಿ ಯಾವ ಸ್ಥಳದಲ್ಲಿ ಅಂತ ಕೇಳುತ್ತದೆ. ಬೇರೆ ಡ್ರೈವ್ ಅಥವಾ External Hard Disc ಆಯ್ಕೆ ಮಾಡಿಕೊಳ್ಳಬಹುದು. ಬಳಿಕ Next ಕ್ಲಿಕ್ ಮಾಡಿದರೆ, ಯಾವ ಡ್ರೈವ್ ಅನ್ನು ಬ್ಯಾಕಪ್ ಇರಿಸಬೇಕೆಂದು ಆಯ್ಕೆ ಮಾಡಿಕೊಳ್ಳಲು ಸ್ಕ್ರೀನ್ ಕಾಣಿಸುತ್ತದೆ. ಎಲ್ಲವನ್ನೂ (All information on this computer) ಅಥವಾ ‘ಸಿ ಡ್ರೈವ್’ ಮಾತ್ರ ಅಂತಲೂ ಆಯ್ಕೆ ಮಾಡಬಹುದು. Next ಬಟನ್ ಒತ್ತಿದರೆ ಬ್ಯಾಕಪ್ ಪ್ರಕ್ರಿಯೆ ಆರಂಭವಾಗುತ್ತದೆ. ಫೈಲುಗಳ ಗಾತ್ರವೆಷ್ಟಿದೆ ಎಂಬುದನ್ನು ಆಧರಿಸಿ ಬ್ಯಾಕಪ್ ಪ್ರಕ್ರಿಯೆಯು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.

ನಿಯಮಿತವಾಗಿ ಅಂದರೆ ವಾರಕ್ಕೊಂದಾವರ್ತಿ ಸ್ವಯಂಚಾಲಿತವಾಗಿ ಈ ಬ್ಯಾಕಪ್ ಫೈಲ್ ಅಪ್‌ಡೇಟ್ ಆಗುತ್ತಿರುವಂತೆ ಹೊಂದಿಸುವ ಆಯ್ಕೆಯೂ ಇಲ್ಲಿಯೇ ಇದೆ. ಅಂದರೆ, ನೀವು ಹೊಸದಾಗಿ ಏನಾದರೂ ತಂತ್ರಾಂಶ ಸೇರಿಸಿದ್ದರೆ, ಹೊಸ ಫೈಲುಗಳಿದ್ದರೆ, ಅವುಗಳು ಕೂಡ ಈ ಬ್ಯಾಕಪ್ ಪ್ರತಿಗೆ ರವಾನೆಯಾಗುತ್ತವೆ.

ಸಿಸ್ಟಂ ಕ್ರ್ಯಾಶ್ ಆದಾಗ ಹೇಗೆ ಉಪಯೋಗಕ್ಕೆ ಬರುತ್ತದೆ?
ವೈರಸ್ ಬಾಧೆಯೋ ಅಥವಾ ಇನ್ಯಾವುದೋ ಕಾರಣದಿಂದಾಗಿಯೋ, ಕಂಪ್ಯೂಟರ್ ಸಿಸ್ಟಂ ಕ್ರ್ಯಾಶ್ ಆದರೆ, ಬ್ರ್ಯಾಂಡೆಡ್ ಸಿಸ್ಟಂಗಳಲ್ಲಿ ಸ್ವಯಂಚಾಲಿತವಾಗಿ ಆಪರೇಟಿಂಗ್ ಸಿಸ್ಟಂ ರೀಸ್ಟೋರ್ ಮಾಡುವ ಆಯ್ಕೆ ಇರುತ್ತದೆ ಅಥವಾ ಆಪರೇಟಿಂಗ್ ಸಿಸ್ಟಂನ ಸಿಡಿ ಇರುತ್ತದೆ, ಕಾರ್ಯಾಚರಣಾ ವ್ಯವಸ್ಥೆಯನ್ನು ರೀಇನ್‌ಸ್ಟಾಲ್ ಮಾಡಬಹುದು. ಅದಾದ ಬಳಿಕ, ನಿಮ್ಮ ಎಲ್ಲ ಹಿಂದಿನ ಸಿಸ್ಟಂಗಳು, ಅಪ್ಲಿಕೇಶನ್‌ಗಳು ದೊರೆಯಬೇಕೆಂದಿದ್ದರೆ, ಕಂಟ್ರೋಲ್ ಪ್ಯಾನೆಲ್‌ನಲ್ಲಿ ಮೇಲೆ ಹೇಳಿದಂತೆಯೇ ನ್ಯಾವಿಗೇಟ್ ಮಾಡಿ, Backup and Restore ಎಂದಿರುವಲ್ಲಿ, Restore system files and Settings ಅಂತ ಕ್ಲಿಕ್ ಮಾಡಿದರಾಯಿತು.

ನೆನಪಿಡಿ: ಯಾವುದೇ ಫೈಲುಗಳನ್ನು ಎಂದಿಗೂ ಸಿ ಡ್ರೈವ್‌ನಲ್ಲಿ (ಮೈ ಡಾಕ್ಯುಮೆಂಟ್ಸ್ ಅಥವಾ ಡೆಸ್ಕ್‌ಟಾಪ್ ಮುಂತಾದೆಡೆ) ಸೇವ್ ಮಾಡಲೇಬೇಡಿ. ಸದಾ ಕಾಲ, ಬೇರೆ ಡ್ರೈವ್‌ಗಳಲ್ಲೇ ಉಳಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಎರಡು ಲಾಭ: ಒಂದನೆಯದು, ಸಿಸ್ಟಂ ಕ್ರ್ಯಾಶ್ ಆದರೂ ಅಮೂಲ್ಯವಾದ ಫೈಲ್‌ಗಳು ಅಳಿಸಿಹೋಗುವ ಸಾಧ್ಯತೆಗಳು ಕಡಿಮೆ; ಎರಡನೆಯದು, ಸಿ ಡ್ರೈವ್‌ನಲ್ಲಿ ಅನಗತ್ಯ ಫೈಲ್‌ಗಳಿಲ್ಲದಿದ್ದರೆ ಕಂಪ್ಯೂಟರ್ ವೇಗವಾಗಿ ಕಾರ್ಯಾಚರಿಸುತ್ತದೆ.

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. [ವಿಜಯ ಕರ್ನಾಟಕ ಅಂಕಣ, ಫೆಬ್ರವರಿ 02, 2015]

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s